

ಬೆಂಗಳೂರು: ಇತ್ತೀಚೆಗೆ ಕೇಂದ್ರ ಸಚಿವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರ ಅಭಿಮಾನಿಗಳು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರಿಗೆ ಟಕ್ಕರ್ ಕೊಡುವ ರೀತಿಯಲ್ಲಿ ಎಐ ವಿಡಿಯೊ ಮಾಡಿ ಹರಿಬಿಟ್ಟಿದ್ದರು. ಅದು ಟಾಕ್ಸಿಕ್ ಚಿತ್ರದ ಟೀಸರ್ ನ ಮಾದರಿಯಲ್ಲಿತ್ತು.
ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರೇ ನೀವು ಮೆರೆಯಬೇಡಿ, 2028ಕ್ಕೆ ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಒಕ್ಕಣೆಯ ವಿಡಿಯೊ ಅದಾಗಿತ್ತು. ಈಗ ಅದೇ ವಿಡಿಯೊಗೆ ತಿರುಗೇಟು ನೀಡಿರುವ ಕಾಂಗ್ರೆಸ್, ತಿರುಕನ ಕನಸು ಕಾಣುತ್ತಿರುವವರು ಯಾರು,140 ಕ್ಷೇತ್ರ ಗೆದ್ದವರೋ, 18 ಕ್ಷೇತ್ರ ಗೆದ್ದವರೋ, ನೀವು ವಾಸ್ತವ ಅರ್ಥ ಮಾಡಿಕೊಳ್ಳಿ ಎಂದು ಜೆಡಿಎಸ್ ಸದಸ್ಯರೊಬ್ಬರು ವೇದಿಕೆ ಮೇಲೆ ನಾನು ಜೆಡಿಎಸ್ ತೊರೆಯುವುದಾಗಿ ಮತ್ತು ಕುಮಾರಸ್ವಾಮಿಯವರೇ ಚುನಾವಣೆಗೆ ನಿಂತರೆ ಸೋಲುತ್ತಾರೆ ಎಂದು ಹೇಳುತ್ತಿರುವ ವಿಡಿಯೊವನ್ನು ಹಂಚಿಕೊಂಡಿದೆ.
Advertisement