25 ಶಾಸಕರ ನಿಗಮ-ಮಂಡಳಿ ಅಧ್ಯಕ್ಷ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ; ಯಾರೆಲ್ಲಾ ಮುಂದುವರಿಕೆ?

2024 ಜನವರಿ 26 ರಂದು ರಾಜ್ಯದ ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಒಟ್ಟು 25 ಶಾಸಕರ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಅವರ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
Karnataka govt extends tenure of corporation and boards chairpersons
ವಿಧಾನಸೌಧ
Updated on

ಬೆಂಗಳೂರು: 25 ಶಾಸಕರ ನಿಗಮ - ಮಂಡಳಿಗಳ ಅಧ್ಯಕ್ಷ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬುಧವಾರ ಅವರ ಅವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ಮಹತ್ವದ ಅಧಿಸೂಚನೆ ಹೊರಡಿಸಿದೆ.

2024 ಜನವರಿ 26 ರಂದು ರಾಜ್ಯದ ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಒಟ್ಟು 25 ಶಾಸಕರ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಅವರ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(DPAR)ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಎಲ್ಲಾ ಶಾಸಕರಿಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳೊಂದಿಗೆ ಮುಂದುವರಿಸಲಾಗಿದೆ. ಈ ನೇಮಕಾತಿಯು ಜನವರಿ 26, 2026 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.

ಯಾರೆಲ್ಲಾ ಮುಂದುವರಿಕೆ?

ಎನ್.ಎ. ಹ್ಯಾರಿಸ್: ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ).

ಎಸ್.ಆರ್. ಶ್ರೀನಿವಾಸ್ (ವಾಸು): ಅಧ್ಯಕ್ಷರು, ಕೆಎಸ್‌ಆರ್‌ಟಿಸಿ (KSRTC).

ಕೆ.ಎಂ. ಶಿವಲಿಂಗೇಗೌಡ: ಅಧ್ಯಕ್ಷರು, ಕರ್ನಾಟಕ ಗೃಹ ಮಂಡಳಿ.

ಅಪ್ಪಾಜಿ ಸಿ.ಎಸ್. ನಾಡಗೌಡ: ಅಧ್ಯಕ್ಷರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL).

ಭರಮಗೌಡ (ರಾಜು) ಕಾಗೆ: ಅಧ್ಯಕ್ಷರು, ವಾಯುವ್ಯ ಸಾರಿಗೆ ಸಂಸ್ಥೆ.

ಬಿ.ಕೆ. ಸಂಗಮೇಶ್ವರ್: ಅಧ್ಯಕ್ಷರು, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ (ಲ್ಯಾಂಡ್ ಆರ್ಮಿ).

ಅಬ್ಬಯ್ಯ ಪ್ರಸಾದ್: ಅಧ್ಯಕ್ಷರು, ಕರ್ನಾಟಕ ಕೊಳೆಚೆ ಅಭಿವೃದ್ಧಿ ಮಂಡಳಿ.

ಬಸವನಗೌಡ ದದ್ದಲ್ : ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ.

ರೂಪಕಲಾ ಎಂ.: ಅಧ್ಯಕ್ಷರು, ಕರಕುಶಲ ಅಭಿವೃದ್ಧಿ ನಿಗಮ.

ಶರತ್ ಕುಮಾರ್ ಬಚ್ಚೇಗೌಡ: ಅಧ್ಯಕ್ಷರು, ಕಿಯೋನಿಕ್ಸ್ (KEONICS).

ಅನಿಲ್ ಚಿಕ್ಕಮಾದು: ಅಧ್ಯಕ್ಷರು, ಜಂಗಲ್ ಲಾಡ್ಜಸ್.

ಸತೀಶ್ ಕೃಷ್ಣ ಸೈಲ್: ಅಧ್ಯಕ್ಷರು, ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ಸ್ ಆಂಡ್ ಏಜೆನ್ಸೀಸ್.

ಇವರಲ್ಲದೆ, ಬಸವರಾಜ ಶಿವಣ್ಣನವರ (ಅರಣ್ಯ ಅಭಿವೃದ್ಧಿ), ಬಿ.ಜಿ. ಗೋವಿಂದಪ್ಪ (ಆಹಾರ ನಿಗಮ), ಹೆಚ್.ಸಿ. ಬಾಲಕೃಷ್ಣ (ರಸ್ತೆ ಅಭಿವೃದ್ಧಿ ನಿಗಮ), ಜಿ.ಎಸ್. ಪಾಟೀಲ್ (ಖನಿಜ ನಿಗಮ), ಸಿ. ಪುಟ್ಟರಂಗಶೆಟ್ಟಿ (ಎಂಎಸ್ಐಎಲ್), ಜೆ.ಟಿ. ಪಾಟೀಲ್ (ಹಟ್ಟಿ ಚಿನ್ನದ ಗಣಿ), ಬಿ.ಕೆ. ಗೋಪಾಲಕೃಷ್ಣ ಬೇಳೂರು, ಎಸ್.ಎನ್. ನಾರಾಯಣಸ್ವಾಮಿ, ಟಿ. ರಘುಮೂರ್ತಿ, ರಮೇಶ ಬಂಡಿಸಿದ್ದೇಗೌಡ (ಸೆಸ್ಕ್), ಕನೀಜ್ ಫಾತಿಮಾ, ಟಿ.ಡಿ. ರಾಜೇಗೌಡ ಮತ್ತು ಬಸವನಗೌಡ ತುರುವಿಹಾಳ ಅವರ ಅವಧಿಯನ್ನೂ ವಿಸ್ತರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com