'ನಾನು ಅಡ್ಡ ಮತದಾನ ಮಾಡಿದ್ದೇನೆ ಎನ್ನುವವರು ಸಾಬೀತು ಮಾಡಲಿ ನೋಡೋಣ': GT ದೇವೇಗೌಡ

ಅವರು ಮತ ಚಲಾಯಿಸಿ ಹೋದ ನಂತರ ಜಿಟಿ ದೇವೇಗೌಡ ಅವರು ಅಡ್ಡ ಮತದಾನ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.
G T Deve Gowda
ಮತ ಚಲಾಯಿಸಲು ಬಂದ ಜಿ ಟಿ ದೇವೇಗೌಡ
Updated on

ಬೆಂಗಳೂರು: ಇಂದು ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ ಫೈಟ್​ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್​​ನಲ್ಲಿ ಅಡ್ಡ ಮತದಾನದ ಭೀತಿ ಉಂಟಾಗಿದೆ. ಜೆಡಿಎಸ್​ ಶಾಸಕ ಜಿಟಿ ಅವರು ಇಂದು ಬೆಳಗ್ಗೆ ಒಂಟಿಯಾಗಿಯೇ ಬಂದು ಮತ ಚಲಾಯಿಸಿ ಹೋದರು.

ಅವರು ಮತ ಚಲಾಯಿಸಿ ಹೋದ ನಂತರ ಜಿಟಿ ದೇವೇಗೌಡ ಅವರು ಅಡ್ಡ ಮತದಾನ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಜಿ ಟಿ ದೇವೇಗೌಡರು, ನನಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಬೇಗ ಹೋಗಿ ಮತ ಹಾಕಿ ಬಂದಿದ್ದೇನೆ. ಆತ್ಮಸಾಕ್ಷಿಯ ಮತ ಹಾಕಿದ್ಧೇನೆ. ನಮ್ಮ‌ಪಕ್ಷದ ಅಭ್ಯರ್ಥಿ ಗೆಲ್ತಾರೆ. ಯಾರೋ ಅಡ್ಡ ಮತದಾನ ಮಾಡಿದ್ದಾರೆ ಅಂತಿದ್ದಾರೆ. ಅಂಥಹವರು ಸಾಬೀತು ಮಾಡಲಿ. ಕುಮಾರಸ್ವಾಮಿ ಸಂಪರ್ಕದಲ್ಲಿ ಇಲ್ಲ. ಬೆಳಗ್ಗೆಯಿಂದ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದರು.

G T Deve Gowda
ಪರಿಷತ್‌ ಚುನಾವಣೆ: ಅಡ್ಡ ಮತದಾನ ಮಾಡಿಬಿಟ್ರಾ ಜಿ.ಟಿ ದೇವೇಗೌಡ? ಜೆಡಿಎಸ್ ಗೆ 'ಕೈ' ಕೊಟ್ರಾ GTD!

'ನಾನು ಆತ್ಮಸಾಕ್ಷಿಯಾಗಿ ಮತ ಹಾಕಿದ್ದು'

ಹುಷಾರಿಲ್ಲದ ಕಾರಣ ಬೇಗ ಹೋಗಿ ಮತ ಹಾಕಿ ಬಂದಿದ್ದೇನೆ. ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸೋದು ಕುಮಾರಸ್ವಾಮಿಗೂ ಗೊತ್ತು. ಅವ್ರು ಮಾಡ್ತಾರೆ, ನಾನು ಆತ್ಮಸಾಕ್ಷಿಯಾಗಿ ಮತ ಹಾಕಿದ್ದು, ಅಡ್ಡ ಮತದಾನ ಅನ್ನೋದು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಶಾಸಕ ಹರೀಶ್ ಜಿಟಿ ದೇವೇಗೌಡ ಮಾತು

ಎನ್​ಡಿಎ ಅಭ್ಯರ್ಥಿಗೆ ಮತ ಹಾಕಿರುವ ಜಿಟಿ ದೇವೇಗೌಡ ಅವರು ಸುದ್ದಿ ಬಗ್ಗೆ ನಾನು ಮಾಧ್ಯಮದಲ್ಲಿ ನೋಡಿದೆ. ಅವರ ಬಗ್ಗೆ ಅನುಮಾನ ವ್ಯಕ್ತಪಡಿಸೋದು ಏನಿಲ್ಲ ಅನ್ನೋದು ನನ್ನ ಭಾವನೆ. ಜಿಟಿ ದೇವೇಗೌಡರ ಜೊತೆ ನಮ್ಮೆಲ್ಲ ವರಿಷ್ಠರ ಚರ್ಚೆ ಮಾಡಿದ್ದಾರೆ. ಅವರೇ ಹೇಳಿಕೆ ಕೊಟ್ಟ ಮೇಲೆ ಈ ಪ್ರಶ್ನೆ ಉದ್ಬವವಾಗೋದಿಲ್ಲ ಎಂದು ಅವರ ಪುತ್ರ ಶಾಸಕ ಹರೀಶ್ ಜಿ ಟಿ ದೇವೇಗೌಡ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com