ಖರ್ಗೆಯವರು ಹೇಳಿದ ಮೇಲೆ ಮುಗೀತು, ಅವರ ಮಾತೇ ಅಂತಿಮ, ನಾಯಕತ್ವ ಬದಲಾವಣೆ ವದಂತಿಗೆ ಪೂರ್ಣವಿರಾಮ ಹೇಳಿದ್ದಾರೆ: ಡಾ ಜಿ ಪರಮೇಶ್ವರ್-Video

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಅಂತಿಮವಾಗಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷರನ್ನೊಳಗೊಂಡ ಹೈಕಮಾಂಡ್‌ನ ನಿರ್ಧಾರಗಳನ್ನು ಯಾವುದೇ ಅತಿ ವ್ಯಾಖ್ಯಾನವಿಲ್ಲದೆ ಅಂಗೀಕರಿಸಬೇಕು ಎಂದು ಒತ್ತಿಹೇಳಿದರು.
ಖರ್ಗೆಯವರು ಹೇಳಿದ ಮೇಲೆ ಮುಗೀತು, ಅವರ ಮಾತೇ ಅಂತಿಮ, ನಾಯಕತ್ವ ಬದಲಾವಣೆ ವದಂತಿಗೆ ಪೂರ್ಣವಿರಾಮ ಹೇಳಿದ್ದಾರೆ: ಡಾ ಜಿ ಪರಮೇಶ್ವರ್-Video
Updated on

ರಾಜ್ಯ ಸರ್ಕಾರದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಇತ್ತೀಚಿನ ಹೇಳಿಕೆಯನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ವಾಗತಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಬಗ್ಗೆ ನಡೆಯುತ್ತಿದ್ದ ಊಹಾಪೋಹಗಳಿಗೆ ಖರ್ಗೆಯವರು ಪೂರ್ಣ ವಿರಾಮ ಹೇಳಿದ್ದಾರೆ ಎಂದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಅಂತಿಮವಾಗಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷರನ್ನೊಳಗೊಂಡ ಹೈಕಮಾಂಡ್‌ನ ನಿರ್ಧಾರಗಳನ್ನು ಯಾವುದೇ ಅತಿ ವ್ಯಾಖ್ಯಾನವಿಲ್ಲದೆ ಅಂಗೀಕರಿಸಬೇಕು ಎಂದು ಒತ್ತಿಹೇಳಿದರು.

ವಿವಿಧ ಜನರು ವಿಭಿನ್ನವಾಗಿ ಹೇಳಬಹುದು, ಆದರೆ ನಮ್ಮ ದೃಷ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪರಮಾಧಿಕಾರಿ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಹೈಕಮಾಂಡ್. ಅವರಿಂದ ಇಂತಹ ಮಾತುಗಳು ಬಂದರೆ ಅವನ್ನು ಅಂಗೀಕರಿಸಲೇಬೇಕು. ವಿಷಯ ಅಲ್ಲಿ ಮುಗಿದಂತೆಯೇ. ಅದನ್ನು ಅತಿಯಾಗಿ ವ್ಯಾಖ್ಯಾನಿಸುವ ಅರ್ಥವಿಲ್ಲ. ಅವರು ಬದಲಾವಣೆ ಇಲ್ಲ ಎಂದಾಗ, ಈ ವಿಷಯಕ್ಕೆ ಪೂರ್ಣ ವಿರಾಮ ಎಂದರ್ಥ ಎಂದರು.

ಮುಖ್ಯಮಂತ್ರಿ ಬದಲಾವಣೆ ವಿಷಯ ಈಗ ಸಂಪೂರ್ಣವಾಗಿ ಅಂತ್ಯಗೊಂಡಿದೆ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಪುನರುಚ್ಚರಿಸಿದರು. ಖರ್ಗೆ ಅವರು ಅನುಭವಸಂಪನ್ನ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಪಕ್ಷದೊಳಗೆ ಅಪಾರ ಗೌರವ ಹೊಂದಿದ್ದಾರೆ ಎಂದು ಹೇಳಿದರು. ರಾಜ್ಯ ನಾಯಕತ್ವದ ಯಾವುದೇ ನಿರ್ಧಾರವೂ ಹಿರಿಯ ನಾಯಕರ ನಡುವಿನ ಚರ್ಚೆಯ ನಂತರವೇ ಆಗುತ್ತದೆ, ಮಲ್ಲಿಕಾರ್ಜುನ ಖರ್ಗೆಯವರ ಇತ್ತೀಚಿನ ಹೇಳಿಕೆ ಆ ಒಪ್ಪಂದದ ಪ್ರತಿಬಿಂಬವಾಗಿದೆ ಎಂದು ಪರಮೇಶ್ವರ್ ವ್ಯಾಖ್ಯಾನಿಸಿದರು.

ಖರ್ಗೆಯವರು ಹೇಳಿದ ಮೇಲೆ ಮುಗೀತು, ಅವರ ಮಾತೇ ಅಂತಿಮ, ನಾಯಕತ್ವ ಬದಲಾವಣೆ ವದಂತಿಗೆ ಪೂರ್ಣವಿರಾಮ ಹೇಳಿದ್ದಾರೆ: ಡಾ ಜಿ ಪರಮೇಶ್ವರ್-Video
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ; Video

ಈ ಕ್ಷಣದಲ್ಲಿ, ಈ ವಿಷಯಕ್ಕೆ ಪೂರ್ಣ ವಿರಾಮ ಬಿದ್ದಿದೆ ಎಂದು ನಾನು ಭಾವಿಸುತ್ತೇನೆ. ಖರ್ಗೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಅಪಾರ ಅನುಭವ ಹೊಂದಿದ ನಾಯಕರು. ರಾಜ್ಯ ನಾಯಕತ್ವದಲ್ಲಿ ಬದಲಾವಣೆ ಇದ್ದಿದ್ದರೆ, ಅವರು ಹೇಳಿದ್ದರೆ ಯಾರೂ ವಿರೋಧಿಸಿರಲಿಲ್ಲ—ಎಲ್ಲರೂ ಒಪ್ಪಿಕೊಂಡಿರುತ್ತಿದ್ದರು. ಈಗ ಅವರು ಸ್ಪಷ್ಟವಾಗಿ ಮುಖ್ಯಮಂತ್ರಿ ಮುಂದುವರಿಯುತ್ತಾರೆ ಮತ್ತು ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ನಾನು ಈ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಇಂತಹ ಹೇಳಿಕೆ ನೀಡುವ ಮೊದಲು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ವೇಣುಗೋಪಾಲ್ ಮತ್ತು ಸುರ್ಜೆವಾಲಾ ಅವರ ಜೊತೆ ಚರ್ಚಿಸಿ ಒಮ್ಮತಕ್ಕೆ ಬಂದಿರುತ್ತಾರೆ. ಅವರ ಮಾತುಗಳಿಗೆ ಮಹತ್ವವಿದ್ದು, ಇದರಿಂದ ವಿಷಯ ಈಗ ಮುಕ್ತಾಯಗೊಂಡಿದೆ ಎಂದು ಹೇಳಿದರು.

ಇಂದಿನ ರಾಜಕೀಯ ಪರಿಸ್ಥಿತಿ ಮತ್ತು ನಡೆಯುತ್ತಿರುವ ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಿದ ಪರಮೇಶ್ವರ್, ಸಮೀಕ್ಷೆಗಳು ಮತ್ತು ಎಕ್ಸಿಟ್ ಪೋಲ್‌ಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನಾವು ನೋಡಿದ್ದೇವೆ, ತಳಮಟ್ಟದ ವಾಸ್ತವವನ್ನೂ ಗಮನಿಸಿದ್ದೇವೆ. ನಾವು ಕೇರಳದಲ್ಲಿ ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸವಿದೆ. ನಮ್ಮ ರಾಜ್ಯದಿಂದ ಅನೇಕರು ಅಲ್ಲಿ ಚುನಾವಣಾ ಕಾರ್ಯದಲ್ಲಿ ಭಾಗವಹಿಸಿದ್ದರು, ವರದಿಗಳು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಸೂಚಿಸುತ್ತಿವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com