KPSC ಹಾಳಾಗೋಕೆ ಕಾರಣ ಕಾಂಗ್ರೆಸ್: ಎಲ್ಲವನ್ನೂ ತೊಳೀತೀನಿ ಅಂತಾ ಹೇಳಿದ ಸಿಎಂ ಏನು ಮಾಡಿದ್ರು?

ಮುಖ್ಯಮಂತ್ರಿಗಳು ಎಲ್ಲಾವನ್ನು ತೊಳೆಯುತ್ತೇನೆ ಎಂದರು, ಯಾವ ರೀತಿ ತೊಳೆದ್ರು. ಪಬ್ಲಿಕ್ ನಲ್ಲಿ ಹುದ್ದೆಗಳಿಗೆ ಹಣ ನಿಗದಿ ಮಾಡಿ ಬೀದಿ ಬೀದಿಯಲ್ಲಿ ಚರ್ಚೆ ಆಯ್ತು. ಆ ವಾತಾವರಣ ಸೃಷ್ಟಿಸಿದ್ದು ಕಾಂಗ್ರೆಸ್ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
H D Kumaraswamy
HD ಕುಮಾರಸ್ವಾಮಿ
Updated on

ಬೆಂಗಳೂರು: ನಮ್ಮ ರಾಜ್ಯದಲ್ಲಿ ಎಷ್ಟು ಬಾರಿ ಪರೀಕ್ಷೆ ಮುಂದಕ್ಕೆ ಹಾಕಿಲ್ಲ? ಕಾಂಗ್ರೆಸ್ ಕಾಲದಲ್ಲಿ ಎಷ್ಟು ಅನಾಹುತ ಆಗಿಲ್ಲ? ರಾಜಸ್ಥಾನದಲ್ಲಿ ಪೇಪರ್ ಲೀಕ್ ಆಗಿತ್ತು. ಯಾರೋ ಮಾಡಿದ ತಪ್ಪಿಗೆ ಕೇಂದ್ರ ಸರ್ಕಾರದ ಮೇಲೆ ತಪ್ಪು ಹೊರೆಸಲು ಆಗದು ಎಂದು ಕೇಂದ್ರ ಸಚಿವೆ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಕಾಂಗ್ರೆಸ್ ವಾಗ್ದಾಳಿ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮ ರಾಜ್ಯದಲ್ಲಿ ಅನೇಕ ಬಾರಿ ಇಂತಹ ಸಂದರ್ಭ ಕಾಂಗ್ರೆಸ್‌ ಕಾಲದಲ್ಲೂ ಅಗಿದೆ. ಈ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್‌ನವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಕೆಪಿಎಸ್ ಸಿ ಬಗ್ಗೆ ಜನ ಯಾವ ರೀತಿ ಮಾತಾಡುತ್ತಾರೆ, ಕಾಂಗ್ರೆಸ್ ನಿಂದಲೇ ಕೆಪಿಎಸ್ ಸಿ ಹಾಳಾಗೋಕೆ ಪ್ರಾರಂಭವಾಗಿದ್ದು ಎಂದರು.

ಮುಖ್ಯಮಂತ್ರಿಗಳು ಎಲ್ಲಾವನ್ನು ತೊಳೆಯುತ್ತೇನೆ ಎಂದರು, ಯಾವ ರೀತಿ ತೊಳೆದ್ರು. ಪಬ್ಲಿಕ್ ನಲ್ಲಿ ಹುದ್ದೆಗಳಿಗೆ ಹಣ ನಿಗದಿ ಮಾಡಿ ಬೀದಿ ಬೀದಿಯಲ್ಲಿ ಚರ್ಚೆ ಆಯ್ತು. ಆ ವಾತಾವರಣ ಸೃಷ್ಟಿಸಿದ್ದು ಕಾಂಗ್ರೆಸ್ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಇನ್ನು ಮುಂದೆ ದೇಶದ ಆರ್ಥಿಕ ಬೆಳವಣಿಗೆಗೆ ಹಿನ್ನಡೆ ಆಗಬಾರದು ಎಂಬ ದೃಷ್ಟಿಯಲ್ಲಿ ಪ್ರಧಾನಿ ಮೋದಿ ಅವರು ಇಂಧನ ಮಿತ ಬಳಕೆ ಕುರಿತು ಹೇಳಿಕೆ ನೀಡಿದ್ದಾರೆ. ಇದನ್ನು ಕಾಂಗ್ರೆಸ್‌ ನಾಯಕರು ಟೀಕೆ ಮಾಡಿ ಸಣ್ಣತನ ಪ್ರದರ್ಶಿಸುತ್ತಿದ್ದಾರೆ ಎಂದರು.

H D Kumaraswamy
EV ವಾಹನ ಚಾರ್ಜಿಂಗ್‌ಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಕುಮಾರಸ್ವಾಮಿ ಅನುಮೋದನೆ; ರಾಜ್ಯಕ್ಕೆ ಸಿಕ್ಕಿದ್ದೆಷ್ಟು?

ಕಾಂಗ್ರೆಸ್‌ನವರೇ ಆ ಜಾಗದಲ್ಲಿದ್ದಿದ್ದರೆ ಏನು ಮಾಡುತ್ತಿದ್ದರು? ಹೇಗೆ ಸಮಸ್ಯೆ ಬಗೆಹರಿಸುತ್ತಿದ್ದರು? ಈಗ ಟೀಕೆ ಮಾಡಿ ಸಣ್ಣತನ ಪ್ರದರ್ಶನ ಮಾಡುತ್ತಿದ್ದಾರೆ. ಭಾರತ ತೈಲ ಉತ್ಪಾದನೆ ಮಾಡುವುದಿಲ್ಲ, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕು. ದೇಶದ ಹಿತದೃಷ್ಟಿಯಿಂದ ಮುಂದೆ ಆಗಬಹುದಾದ ಅನಾಹುತಗಳಿಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ ಎಂದು ಸಮರ್ಥಿಸಿದರು.

ಮೋದಿ ಮನವಿಯನ್ನು ನಾವೊಬ್ಬರೇ ಪಾಲನೆ ಮಾಡಲ್ಲ, ದೇಶದ ಹಿತದೃಷ್ಟಿ ಪ್ರಶ್ನೆ ಎದುರಾದಾಗ ಎಲ್ಲಾ ಪಕ್ಷಗಳು, ಎಲ್ಲರ ಜವಾಬ್ದಾರಿಯೂ ಇದೆ. ಸಣ್ಣತನಬಿಟ್ಟು ತನ್ನ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿಭಾಯಿಸಲಿ ಎಂದರು.

ಪಾಲಿಕೆ ಚುನಾವಣೆ ಬಗ್ಗೆ ಪ್ರತಿಕ್ರಿಸಿಯಿದ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಅವರೇ ಚುನಾವಣಾ ಆಯೋಗದ ಸಿಬ್ಬಂದಿಯನ್ನು ಕರೆದು ಚರ್ಚಿಸಿ ಚುನಾವಣೆ ನಡೆಸುವಂತೆ ಒತ್ತಡ ಹಾಕಿದರು. ಈ ವಿಷಯ ತಿಳಿದ ಉಪ ಮುಖ್ಯಮಂತ್ರಿ ಮತ್ತೊಂದು ಸಭೆ ನಡೆಸಿ ಸದ್ಯವೇ ಸಭೆ ನಡೆಸದಂತೆ ಸೂಚನೆ ನೀಡಿದರು. ಶಿವಕುಮಾರ್ ಅವರ ಒತ್ತಡದ ನಂತರ ಚುನಾವಣೆಯನ್ನು ಸೆಪ್ಟೆಂಬರ್‌ವರೆಗೂ ನಡೆಸದಂತೆ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ ಎಂದು ಟೀಕಿಸಿದರು.

ಚುನಾವಣೆ ನಡೆದರೆ ಮುಖ್ಯಮಂತ್ರಿ ಸ್ಥಾನ ಆರು ತಿಂಗಳು ಭದ್ರ ಆಗಲಿದೆ ಎಂದು ಸಿದ್ದರಾಮಯ್ಯ ಯೋಚಿಸಿದರೆ, ವ್ಯತ್ಯಾಸವಾದರೆ ಮುಖ್ಯಮಂತ್ರಿ ಸ್ಥಾನ ಸಿಗುವುದಿಲ್ಲ ಎನ್ನುವ ಭಯ ಶಿವಕುಮಾರ್ ಅವರದ್ದು. ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ಮೂರು ವರ್ಷ ಹಾಳು ಮಾಡಿಕೊಂಡಿದ್ದಾರೆ. ಈ ಸರ್ಕಾರ ತೆರಿಗೆ ಹಾಕಿ ಬೆಂಗಳೂರು ಜನರನ್ನು ಕಿತ್ತು ತಿನ್ನುತ್ತಿದೆ. ಈಗ ಮತ ಕೇಳಲು ಹೋದರೆ ಬೆಂಗಳೂರು ಜನ ಏನು ಮಾಡುತ್ತಾರೆ ಎನ್ನುವುದು ಇವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಚುನಾವಣೆ ನಡೆಸಲು ಹೆದರುತ್ತಿದ್ದಾರೆ’ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com