ಆ ಹುಡುಗನ ಸ್ಟೇಟಸ್ಸೇ ಗೊತ್ತಿಲ್ಲ ಎಂದ ಡಿ.ಕೆ ಶಿವಕುಮಾರ್ ಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಡಿ ಕೆ ಶಿವಕುಮಾರ್, 136 ಜನ ಶಾಸಕರಿದ್ದರೂ ಏನು ಮಾಡಿದ್ದೀರಿ ಎನ್ನುವ ನಿಖಿಲ್ ಕುಮಾರಸ್ವಾಮಿ ಟೀಕೆ ಬಗ್ಗೆ ಕೇಳಿದಾಗ, ಆ ಹುಡುಗನಿಗೆ ಉತ್ತರ ಕೊಡಲು ನನಗೆ ಇಷ್ಟವಿಲ್ಲ ಎಂದರು.
D K Shivakumar and Nikhil Kumaraswamy
ಡಿ ಕೆ ಶಿವಕುಮಾರ್, ನಿಖಿಲ್ ಕುಮಾರಸ್ವಾಮಿ
Updated on

ಬೆಂಗಳೂರು: ಆ ಹುಡುಗನಿಗೆ ಉತ್ತರ ಕೊಡಲು ನನಗೆ ಇಷ್ಟವಿಲ್ಲ. ಸ್ಥಳೀಯ ನಾಯಕರು ಯಾರಾದರೂ ಉತ್ತರ ಕೊ ಡುತ್ತಾರೆ. ಅಷ್ಟಕ್ಕೂ ಅವರ ಸ್ಟೇಟಸ್ ನನಗೆ ಗೊತ್ತಿಲ್ಲ. ಪಕ್ಷದ ಅಧ್ಯಕ್ಷರಾದರೆ ಉತ್ತರ ಕೊಡಬಹುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ವ್ಯಂಗ್ಯವಾಡಿದ್ದಾರೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಡಿ ಕೆ ಶಿವಕುಮಾರ್, 136 ಜನ ಶಾಸಕರಿದ್ದರೂ ಏನು ಮಾಡಿದ್ದೀರಿ ಎನ್ನುವ ನಿಖಿಲ್ ಕುಮಾರಸ್ವಾಮಿ ಟೀಕೆ ಬಗ್ಗೆ ಕೇಳಿದಾಗ, ಆ ಹುಡುಗನಿಗೆ ಉತ್ತರ ಕೊಡಲು ನನಗೆ ಇಷ್ಟವಿಲ್ಲ ಎಂದರು.

D K Shivakumar and Nikhil Kumaraswamy
'ಪ್ರತಿದಿನ, ಪ್ರತಿ ಮುಹೂರ್ತ ನನಗೆ ಒಳ್ಳೆಯದೇ; ನನ್ನ ನಿಷ್ಠಾವಂತರು ಎಂದೇನಿಲ್ಲ, ಎಲ್ಲಾ 136 ಶಾಸಕರು ನಮ್ಮವರೇ': ಡಿ.ಕೆ ಶಿವಕುಮಾರ್; Video

ಡಿ.ಕೆ.ಶಿವಕು ಮಾರ್ ಡಿಸಿಎಂ ಆಗಿರುವ ಸ್ಟೇಟಸ್ ನಾಡಿನ ಜನರ ಭಿಕ್ಷೆ

ಡಿ ಕೆ ಶಿವಕುಮಾರ್ ಅವರು ದುಡ್ಡಿನ ಮದ ತಲೆಗೆ ಏರಿ ಹೆಚ್ಚು ಮಾತನಾಡದೆ, ತಲೆ ತಗ್ಗಿಸಿ ಜನರಿಗೆ ಗೌರವದಿಂದ ದುಡಿಯುವ ಕೆಲಸ ಮಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ‘ನಿಖಿಲ್ ಸ್ಟೇ ಟಸ್ ಏನು ’ ಹೇಳಿಕೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು .

ಸುದ್ದಿಗಾರರೊಂದಿಗೆ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಸ್ಟೇಟಸ್ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾ ರೆ. ಅವರು ಒಂದು ಅರಿಯಲಿ, ಡಿಸಿಎಂ ಆಗಿರುವ ಸ್ಟೇಟಸ್ ನಾಡಿನ ಜನರ ಭಿಕ್ಷೆ. ಅದನ್ನು ಕಣ್ಣಿಗೆ ಒತ್ತಿಕೊಂಡು ದುರಹಂಕಾ ರ ಪಡದೆ ಅಧಿಕಾರ ನಡೆಸಲಿ ಎಂದರು .

ನಿಖಿಲ್ ಕುಮಾರಸ್ವಾ ಮಿ ಏನೆಂದು ಜನ ತೋರಿಸಿಕೊಡ್ತಾರೆ, ಈ ಬಗ್ಗೆ ಮಿ.ಶಿವಕುಮಾರ್ ತಲೆ ಕೆಡಿಸಿಕೊಳ್ಳೋದು ಬೇಡ, ಇಷ್ಟು ಲಘುವಾಗಿ ಮಾತನಾಡುವುದೂ ಬೇಡ. ಮಾತೆತ್ತಿದರೆ ಅವರ ಸಹೋದರ ಕೂಲಿ ಸಿಕ್ಕಿಲ್ಲ, ಕೂಲಿ ಸಿಕ್ಕಿಲ್ಲ ಅಂತ ಬೀದಿಯಲ್ಲಿ ಬಾಯಿ ಬಡಿದುಕೊಂಡು ಓಡಾಡುತ್ತಿದ್ದಾರೆ. ಅವರು ಹತಾಶರಾಗಿ ಹೀಗೆ ಮಾತಾಡ್ತಾ ಇದ್ದಾರೆ. ನಿಖಿಲ್ ಬಗ್ಗೆ ಚರ್ಚೆ ಬೇಡ, 2028ಕ್ಕೆ ಇದೇ ಡಿ.ಕೆ ಶಿವಕುಮಾರ್ ಮಾಜಿ ಆಗ್ತಾರೆ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ, ಮಾತಾಡುವ ಮುನ್ನ ಎಚ್ಚರಿಕೆ ಇರಲಿ ಎಂದು ಎಚ್ಚರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com