

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುಲಾವ್ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಅವರನ್ನು ಕರೆದಿರುವ ಬಗ್ಗೆ ನನಗೆ ಗೊತ್ತಿಲ್ಲ, ಯಾಕೆ ಕರೆದಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಸಿಎಂ ನನಗೆ ಏನೂ ಹೇಳಿಲ್ಲ ಎಂದಿರುವ ಅವರು, ಹೈಕಮಾಂಡ್‌ನಿಂದ ತಮಗೆ ಕರೆ ಬಂದಿಲ್ಲ. ಕರೆದರೆ ಹೋಗುತ್ತೇನೆ ಎಂದರು. ಸಂಪುಟ ಪುನಾರಚನೆ ಅಥವಾ ನಾಯಕತ್ವ ಬದಲಾವಣೆಯೇ ಯಾವ ವಿಚಾರಕ್ಕೆ ಸಿಎಂ ಅವರನ್ನು ಹೈಕಮಾಂಡ್ ಕರೆದಿರಬಹುದು ಎಂದು ಕೇಳಿದ ಪ್ರಶ್ನೆಗೆ ನನಗೆ ಗೊತ್ತಿಲ್ಲ ಎಂದಷ್ಟೇ ಉತ್ತರಿಸಿದ್ದಾರೆ.
ಸದ್ಯಕ್ಕೆ ಹೈಕಮಾಂಡ್‌ನಿಂದ ಇನ್ನಾವುದೇ ಮಾಹಿತಿ ಬಂದಿಲ್ಲ, ಎಸ್ ಐಆರ್ ಬಗ್ಗೆ, ಜಿಬಿಎ ಎಲೆಕ್ಷನ್ ಬಗ್ಗೆ ಇಂದು ನಾನು, ಸಿಎಂ, ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಮೀಟಿಂಗ್ ಮಾಡುತ್ತಿದ್ದೇವೆ. ಅದು ಬಿಟ್ಟು ನನಗೆ ಏನೂ ಗೊತ್ತಿಲ್ಲ ಎಂದರು.
Advertisement