'ನಿಮ್ಮಣ್ಣ ಸಿಎಂ ಆಗಿದ್ದಾರೆ, ಬೇಕಿದ್ರೆ ಆಕೆಯನ್ನು MLC ಮಾಡಿ: ಹೆಂಡತಿ- ಮಕ್ಕಳು ಬೆಲೆ ಗೊತ್ತಿದ್ರೆ ಈ ರೀತಿ ಆಡ್ತಿರಲ್ಲಿಲ್ಲ; ಒಬ್ಬಳಿಗಾಗಿ ಎಷ್ಟು ಕುಟುಂಬ ಹಾಳು ಮಾಡ್ತೀರಿ?'

ಹೊಟ್ಟೆ ಹಸಿದುಕೊಂಡು ಮನೆಗೆ ಹೋದ್ರೆ ನನಗೆ ಊಟ ಹಾಕಲು ಹೆಂಡತಿ ಇದ್ದಾಳೆ. ಆದ್ರೆ ಹೆಂಡತಿ ಮಕ್ಕಳ ಬೆಲೆ ಗೊತ್ತಿದ್ರೆ ನೀವು ಈ ರೀತಿ ನಡೆದುಕೊಳ್ತಾ ಇರಲಿಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
munirathna and dk suresh
ಮುನಿರತ್ನ ಮತ್ತು ಡಿ.ಕೆ ಸುರೇಶ್
Updated on: 

ಬೆಂಗಳೂರು: ನಿಮ್ಮಣ್ಣ ಮುಖ್ಯಮಂತ್ರಿಯಾಗಿದ್ದಾರೆ. ಬೇಕಾದರೆ ಅವರನ್ನು ಎಂಎಲ್ಸಿ ಮಾಡಿ, ಮಂತ್ರಿ ಮಾಡಿ. ಆದರೆ ನನ್ನನ್ನು ಬಿಟ್ಟು ಬಿಡಿ. ಯಾಕೆ ಇಷ್ಟೊಂದು ಹಿಂಸೆ ಕೊಡುತ್ತೀರಿ.? ಅವರಿಗೆ ಸಹಾಯ ಮಾಡ್ಕೊಂಡು ಚಿಕ್ಕ ಹುಡುಗರ ತರ ಆಡ್ತಾ ಇದ್ದೀರಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ವಿರುದ್ಧ ಶಾಸಕ ಮುನಿರತ್ನ ಹರಿಹಾಯಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಕೆ ಸುರೇಶ್ ಸೋತ ನಂತರ ನನ್ನ ಮೇಲೆ ನಿತ್ಯ ಈ ರೀತಿ ದಾಳಿಗಳು ಆಗುತ್ತಿವೆ. ಸೋತಿರುವ ಅಭ್ಯರ್ಥಿ ಮೂಲಕ ದೌರ್ಜನ್ಯ ಮಾಡುವ ಕೆಲಸ ನಡೀತಿದೆ ಎಂದು ಕುಸುಮಾ ಹನುಮಂತರಾಯಪ್ಪ ಹೆಸರು ಹೇಳದೇ ಮುನಿರತ್ನ ಆರೋಪಿಸಿದ್ದಾರೆ. ಹೊಟ್ಟೆ ಹಸಿದುಕೊಂಡು ಮನೆಗೆ ಹೋದ್ರೆ ನನಗೆ ಊಟ ಹಾಕಲು ಹೆಂಡತಿ ಇದ್ದಾಳೆ. ಆದ್ರೆ ಹೆಂಡತಿ ಮಕ್ಕಳ ಬೆಲೆ ಗೊತ್ತಿದ್ರೆ ನೀವು ಈ ರೀತಿ ನಡೆದುಕೊಳ್ತಾ ಇರಲಿಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಎಪಿ ರಂಗನಾಥ್ ಸ್ಪರ್ಧೆ ಮಾಡಿದ್ದಾರೆ. ಆದ್ರೆ ಆರ್‌ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದಾರೆ. ಮೊದಲೇ ಸಂಚು ಮಾಡಿದ್ದಾರೆ, ಶಾಸಕರು ಬಂದು ಕೂಡಲೇ ಹಲ್ಲೇ ಮಾಡಿ, ಬಟ್ಟೆ ಹರಿದು, ಧಿಕ್ಕಾರ ಕೂಗಲು ಹೇಳಿದ್ದಾರೆ. ಅದೇ ರೀತಿ ನಾನು ಬಂದ ಕೂಡಲೇ ಹಲ್ಲೆ ಮಾಡುವ ಯತ್ನ ನಡೆದಿದೆ ಎಂದು ಮುನಿರತ್ನ ಆರೋಪಿಸಿದರು.

ನನ್ನ ರಕ್ಷಣೆಗೆ ಬಂದ ಮಾಜಿ ಕಾರ್ಪೊರೇಟರ್ ಮೋಹನ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಖಂಡಿಸಿ ನಾನು ರಿಂಗ್ ರಸ್ತೆಯಲ್ಲಿ ಧರಣಿ ಕೂತ್ಕೊಂಡೆ. ಪೊಲೀಸರಿಗೆನಿಜ ತಿಳಿದ ನಂತರ ನನಗೆ ಅವ್ರು ರಕ್ಷಣೆ ಕೊಟ್ಟರು. ನಾನು ರಸ್ತೆಯಲ್ಲಿ ಧರಣಿ ಮಾಡಿದಾಗ ಡಿಸಿಪಿ ಬಂದು ಕ್ರಮದ ಭರವಸೆ ನೀಡಿದ್ರು. ಈ ವಿಷಯವನ್ನು ನಾನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಮನಕ್ಕೆ ತಂದಿದ್ದೇನೆ. ಜೊತೆಗೆ ಅಧ್ಯಕ್ಷರಾದ ವಿಜಯೇಂದ್ರ‌ ಸಂಪರ್ಕಿಸುವ ಕೆಲಸ ಕೂಡ ಮಾಡಿದ್ದೇನೆ ಅಂತ ಮುನಿರತ್ನ ಹೇಳಿದ್ದಾರೆ.

munirathna and dk suresh
ಹೆಣ್ಣಿಗೆ MLA ಆಗಬೇಕೆಂಬ ಹುಚ್ಚು ಹಿಡಿದರೆ ಬಿಡಿಸಲಾಗದು: ಕುಸುಮಾಗೆ ಮುನಿರತ್ನ ಟಾಂಗ್!

ಒಬಿಸಿ ರಿಸರ್ವೇಷನ್, ಕಸದ ಟೆಂಡರ್ ಕೊಡ್ತೀನಿ ಎಂದು ಆಮಿಷ ಒಡ್ಡಿ ಕರೆದುಕೊಳ್ಳೋದು. ಕ್ಷೇತ್ರದಲ್ಲಿ ಬರೀ ದ್ವೇಷ, ಹೇಗಾದರೂ ಮಾಡಿ ಮುನಿರತ್ನ ಕುಗ್ಗಿಸಿ ರಾಜೀನಾಮೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಕೊಲೆ ಮಾಡಿದ್ರೂ ಸರಿ ನಾನಂತೂ ರಾಜೀನಾಮೆ ಕೊಡುವುದಿಲ್ಲ ಎಂದು ಮುನಿರತ್ನ ಸವಾಲು ಹಾಕಿದ್ರು. ಡಿಕೆ ಸುರೇಶ್ ಅವರೇ ಯಾಕೇ ಈ ಮಟ್ಟಕ್ಕೆ ಇಳಿದಿದ್ದೀರಾ..? ಒಂದು ಕುಟುಂಬಕ್ಕಾಗಿ ಎಷ್ಟು ಕುಟುಂಬ ಹಾಳು ಮಾಡ್ತದ್ದೀರಿ ಎಂದು ಮುನಿರತ್ನ ಖಾರವಾಗಿ ಪ್ರಶ್ನಿಸಿದ್ರು.

ಯಾರೋ ಒಬ್ಬ ಬ್ರೋಕರ್ ಇಟ್ಟುಕೊಂಡು ಜೀವನ ಮಾಡ್ತಾ ಇದ್ದೀರಲ್ಲ. ಅವ್ನು ಯಾರು ಸಿಗಲಿಲ್ಲ ಅಂದರೆ ಅವನ ಮನೆಯವರನ್ನೇ ವಿಡಿಯೋ ಮಾಡ್ತಾರೆ. ನನ್ನ ಬಟ್ಟೆ ಬಿಚ್ಚಿಸಲು ಆಗಿಲ್ಲ, ಅದಕ್ಕಾಗಿ ರೇಪ್ ಕೇಸ್ ಹಾಕಿಸಿದ್ದೀರಾ? ಅಂತಹ ಅಯೋಗ್ಯನನ್ನು ಇಟ್ಟುಕೊಂಡು ವೀಡಿಯೋ ಮಾಡಿಸೋದು. ಹೆಂಡತಿ ಮಕ್ಕಳು ಬೆಲೆ ಗೊತ್ತಿದ್ರೆ ನೀವು ಈ ರೀತಿ ನಡೆದುಕೊಳ್ತಾ ಇರಲಿಲ್ಲ. ಇಂತಹ ನೀಚ ಮಟ್ಟಕ್ಕೆ ಇಳಿಯೋದನ್ಬು ಬಿಡಿ. ಇನ್ಮುಂದೆ ಆದರೂ ಮಾನ ಮರ್ಯಾದೆಯಿಂದ ನ್ಯಾಯವಾಗಿ ಬದುಕಿ ಅಂತ ಮುನಿರತ್ನ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com