ಸ್ಟಿಂಗ್ ಆಪರೇಷನ್ ಚರ್ಚೆ ಮಧ್ಯೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಭೇಟಿಯಾದ Congress MLC ರಾಜೇಂದ್ರ ರಾಜಣ್ಣ!

ಕರ್ನಾಟಕ ರಾಜಕೀಯದಲ್ಲಿ ‘ಸ್ಟಿಂಗ್ ಆಪರೇಷನ್’ ಭಾರೀ ಸದ್ದು ಮಾಡುತ್ತಿದ್ದು, ಈ ಮಧ್ಯೆ ಕಾಂಗ್ರೆಸ್ MLC ರಾಜೇಂದ್ರ ರಾಜಣ್ಣ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
HD Kumaraswamy, Rajendra Rajanna
ಎಚ್ ಡಿ ಕುಮಾರಸ್ವಾಮಿ, ರಾಜೇಂದ್ರ ರಾಜಣ್ಣ
Updated on: 

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ‘ಸ್ಟಿಂಗ್ ಆಪರೇಷನ್’ ಭಾರೀ ಸದ್ದು ಮಾಡುತ್ತಿದ್ದು, ಈ ಮಧ್ಯೆ ಕಾಂಗ್ರೆಸ್ MLC ರಾಜೇಂದ್ರ ರಾಜಣ್ಣ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಸ್ಟಿಂಗ್ ಆಪರೇಷನ್ ಕುರಿತಂತೆ ಎಚ್ ಡಿ ಕುಮಾರಸ್ವಾಮಿ ಸ್ಫೋಟಕ ಆರೋಪಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಸಚಿವ ರಾಜಣ್ಣ ಅವರ ಪುತ್ರ ರಾಜೇಂದ್ರ ರಾಜಣ್ಣ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

HD Kumaraswamy, Rajendra Rajanna
ಸ್ಟಿಂಗ್ ಫ್ಯಾಕ್ಟರಿಗಳು ಎಲ್ಲಾ ಕಡೆ ಓಪನ್ ಆಗಿವೆ; ನೋಡಲೂ ಅಸಹ್ಯ, ಕೇಳಲೂ ಅಸಹ್ಯ: ಕೆ.ಎನ್ ರಾಜಣ್ಣ ಹೇಳಿಕೆ

ಇದಕ್ಕೂ ಮುನ್ನ ಮಾತನಾಡಿದ್ದ ಕೆಎನ್ ರಾಜಣ್ಣ, ಎಲ್ಲಾ ಕಡೆ 'ಸ್ಟಿಂಗ್ ಫ್ಯಾಕ್ಟರಿಗಳೇ' ಓಪನ್ ಆಗಿವೆ. ಇಂತಹ ಕಾರ್ಯಾಚರಣೆ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ 'ಸ್ಟಿಂಗ್ ಆಪರೇಷನ್' ರಾಜ್ಯದ ಜನರಿಗೆ ಮಾಡಿದ ಅವಮಾನ ಎಂದು ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಯೊಬ್ಬರೂ ತಮ್ಮದೇ ಆದ ‘ಸ್ಟಿಂಗ್ ಆಪರೇಷನ್ ಫ್ಯಾಕ್ಟರಿ’ಯನ್ನು ಹೊಂದಿರುವಂತಿದೆ. ಕರ್ನಾಟಕ ರಾಜಕೀಯದಲ್ಲಿ ಇಂತಹ ಕಾರ್ಯಾಚರಣೆಗಳು ಸಾಮಾನ್ಯವಾಗಿದ್ದು, ರಾಜಕಾರಣಿಗಳು ತಲೆತಗ್ಗಿಸುವಂತೆ ಮಾಡಿವೆ. ಇದು ಕರ್ನಾಟಕದ ಜನರಿಗೆ ಮಾಡಿದ ಅವಮಾನ. ಅದನ್ನು ನೋಡಲೂ ಮತ್ತು ಕೇಳಲೂ ಅಸಹ್ಯವಾಗುತ್ತಿದೆ” ಎಂದು ರಾಜಣ್ಣ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com