2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಜನಾದೇಶ: ದೀಪಾವಳಿಯಿಂದಲೇ ನರಕಾಸುರನ ಪತನ ಆರಂಭ: ಕರುನಾಡಲ್ಲಿ ಮೈತ್ರಿಯ ಮುಂಬೆಳಕು; HDK

ಈ ಗೆಲುವು ಐತಿಹಾಸಿಕ. 2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಜನಾದೇಶ. ಒಗ್ಗಟ್ಟು ಮತ್ತು ಮೈತ್ರಿಯಲ್ಲಿ ಶಕ್ತಿ ಇದೆ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಈ ದೀಪಾವಳಿಯಿಂದಲೇ ನರಕಾಸುರನ ಪತನ ಆರಂಭ, ಮುಂದಿನ ದೀಪಾವಳಿಗೆ ಕನ್ನಡ ನಾಡಿನಲ್ಲಿ ಮೈತ್ರಿಯ ಮುಂಬೆಳಕು ಮೂಡುವುದು ಖಚಿತ
HD Kumaraswamy
ಎಚ್.ಡಿ ಕುಮಾರಸ್ವಾಮಿ
Updated on: 

ಬೆಂಗಳೂರು: ಸತ್ಯಮೇವ ಜಯತೆ, ಸುಳ್ಳು, ದುರಾಡಳಿತ, ಹಣಬಲ, ತೋಳ್ಬಲಗಳು ಸೋತಿವೆ. ಈ ಚುನಾವಣೆ ಹೊಸ ಭರವಸೆಯ ಸೂರ್ಯೋದಯಕ್ಕೆ ನಾಂದಿ ಹಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ NDA ಮೈತ್ರಿಕೂಟವು ಭರ್ಜರಿ ಜಯಭೇರಿ ಸಾಧಿಸಿದ್ದು, ನಮ್ಮ ಒಮ್ಮತದ ಅಭ್ಯರ್ಥಿ ಎ.ಪಿ.ರಂಗನಾಥ್ ಅವರಿಗೆ ಅಭಿನಂದನೆಗಳು. ಹಾಗೆಯೇ, ಉಳಿದ ಮೂರು ಕ್ಷೇತ್ರಗಳಲ್ಲಿಯೂ NDA ಅಭ್ಯರ್ಥಿಗಳ ಗೆಲುವು ಖಚಿತ ಎಂದಿದ್ದಾರೆ.

ಈ ಸಂತೋಷದ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಸಮಸ್ತ ಕಾರ್ಯಕರ್ತ ಬಂಧುಗಳು, ಮುಖಂಡರು ಹಾಗೂ ಆಮಿಷ, ಅಧಿಕಾರದ ದರ್ಪವನ್ನು ದಿಕ್ಕರಿಸಿ ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಿದ ಶಿಕ್ಷಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಗುರುವೇ ದಾರಿ ಎನ್ನುವಂತೆ ಮುಂದಿನ ಬದಲಾವಣೆಗೆ ಭಾಷ್ಯ ಬರೆದಿದ್ದಾರೆ.

ಈ ಗೆಲವು ಐತಿಹಾಸಿಕ. 2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಜನಾದೇಶ. ಒಗ್ಗಟ್ಟು ಮತ್ತು ಮೈತ್ರಿಯಲ್ಲಿ ಶಕ್ತಿ ಇದೆ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಈ ದೀಪಾವಳಿಯಿಂದಲೇ ನರಕಾಸುರನ ಪತನ ಆರಂಭ, ಮುಂದಿನ ದೀಪಾವಳಿಗೆ ಕನ್ನಡ ನಾಡಿನಲ್ಲಿ ಮೈತ್ರಿಯ ಮುಂಬೆಳಕು ಮೂಡುವುದು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ನಮ್ಮ ಮೈತ್ರಿಯ ಪ್ರೇರಕಶಕ್ತಿ ರಾಷ್ಟ್ರದ ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

HD Kumaraswamy
Karnataka MLC Elections 2026 Results: ವಿಧಾನ ಪರಿಷತ್ ಚುನಾವಣೆ ಫಲಿತಾಂಶ; ಬ್ಯಾಲೆಟ್ ಪೇಪರ್ ಮೂಲಕ ನಡೆದ MLC ಚುನಾವಣೆಯಲ್ಲಿ 4 ಸ್ಥಾನ NDA ತೆಕ್ಕೆಗೆ; ಕಾಂಗ್ರೆಸ್ ಗೆ ಮುಖಭಂಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com