ಕುರಾನ್, ಬೈಬಲ್ ಬಗ್ಗೆ ಮಾತನಾಡಲು ತಾಕತ್ತಿದೆಯೇ? ಇಸ್ಲಾಂ ಧರ್ಮಕ್ಕೆ ರಾಯರೆಡ್ಡಿ ಮತಾಂತರವಾಗಲಿ; ಶಾಸಕ ಭರತ್‌ ಶೆಟ್ಟಿ

ಹೊಟ್ಟೆಪಾಡಿಗಾಗಿ ಬಗೆಬಗೆಯ ವೇಷ ಎಂಬ ಮಾತು ಕಾಂಗ್ರೆಸ್ ನಾಯಕರಿಗೆ ಸರಿಯಾಗಿ ಹೊಂದುತ್ತದೆ. ಕೇವಲ ಮತಕ್ಕಾಗಿ ಇವರು ಏನೆಲ್ಲಾ ನಾಟಕ ಮಾಡುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
rayareddy and bharath shetty
ಬಸವರಾಜ ರಾಯರೆಡ್ಡಿ ಮತ್ತು ಭರತ್ ಶೆಟ್ಟಿ
Updated on

ಮಂಗಳೂರು: ಇಸ್ಲಾಂ ಧರ್ಮ ಶ್ರೇಷ್ಠ ಮತ್ತು ಮಠ-ಮಂದಿರಗಳಿಗೆ ಹೋಗಬಾರದು ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿಮಾತನಾಡಿದ ಅವರು, ಹೊಟ್ಟೆಪಾಡಿಗಾಗಿ ಬಗೆಬಗೆಯ ವೇಷ ಎಂಬ ಮಾತು ಕಾಂಗ್ರೆಸ್ ನಾಯಕರಿಗೆ ಸರಿಯಾಗಿ ಹೊಂದುತ್ತದೆ. ಕೇವಲ ಮತಕ್ಕಾಗಿ ಇವರು ಏನೆಲ್ಲಾ ನಾಟಕ ಮಾಡುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಶಿಕ್ಷಣದ ಸುಧಾರಣೆ ಬಗ್ಗೆ ಗಮನಹರಿಸಬೇಕಾದ ಸಚಿವರು, ವೋಟ್ ಬ್ಯಾಂಕ್‌ಗಾಗಿ ಸ್ವಧರ್ಮಕ್ಕಿಂತ ಪರಧರ್ಮವೇ ಶ್ರೇಷ್ಠ ಎಂದು ಹೇಳಿ ಎಲ್ಲ ಧರ್ಮಗಳಿಗೂ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

ನಿಮಗೆ ಸಂಸ್ಕಾರ, ಸಂಸ್ಕೃತಿ ನೀಡಿದ್ದೇ ಹಿಂದೂ ಧರ್ಮ. ಇಷ್ಟೇ ಅಲ್ಲದೆ ಮತಾಂತರಗೊಳ್ಳುವ ಸ್ವಾತಂತ್ರ್ಯವನ್ನೂ ಹಿಂದೂ ಧರ್ಮವೇ ಕೊಟ್ಟಿದೆ. ಮತಾಂತರವಾದರೆ ಹಿಂದೂಗಳು ಕೊಲ್ಲಲು ಬರುವುದಿಲ್ಲ. ಹೀಗಿರುವಾಗ ಹಿಂದೂ ಧರ್ಮದಲ್ಲಿ ಹುಟ್ಟಿದ ನೀವು ಇಸ್ಲಾಂ ಧರ್ಮ ಶ್ರೇಷ್ಠ ಅನ್ನಲು ಕಾರಣವೇನು? ಅದಕ್ಕೊಂದು ಸಕಾರಣ ನೀಡಿ ಎಂದು ಆಗ್ರಹಿಸಿದರು.

ರಾಹುಲ್ ಗಾಂಧಿ, ಬಸವರಾಜ ರಾಯರೆಡ್ಡಿ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಭಗವದ್ಗೀತೆ, ವೇದಗಳು ಮತ್ತು ಹಿಂದೂ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಧೈರ್ಯವಿದೆ. ಆದರೆ ಕುರಾನ್, ಬೈಬಲ್ ಅಥವಾ ಇತರ ಧರ್ಮಗಳ ಬಗ್ಗೆ ಹೀಗೆ ಮಾತನಾಡುವ ತಾಕತ್ತಿದೆಯೇ? ಚುನಾವಣೆ ಬಂದಾಗ ಶರ್ಟ್ ಮೇಲೆ ಜನಿವಾರ ಹಾಕುವ ರಾಹುಲ್ ಗಾಂಧಿ ಹಿಂಬಾಲಕರು ನೀವು. ಚುನಾವಣೆ ಸಮಯದಲ್ಲಿ ಮಠಗಳಿಗೆ ತೆರಳಿ ಸ್ವಾಮೀಜಿಗಳ ಕಾಲಿಗೆ ಅಡ್ಡಬಿದ್ದು ಸಾಷ್ಟಾಂಗ ನಮಸ್ಕಾರ ಹಾಕುತ್ತೀರಿ, ಚುನಾವಣೆ ಮುಗಿದ ಮೇಲೆ ಮಠ-ಮಂದಿರಗಳಿಗೆ ಹೋಗಲ್ಲ ಎನ್ನುತ್ತೀರಿ ಎಂದು ದೂರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com