ಇದು ಆರಂಭವಷ್ಟೆ, ನೋಡ್ತಿರಿ, ನನ್ನ ಮೇಲೆ, ಡಿ ಕೆ ಶಿಯವರ ಮೇಲೆ ಕೂಡ ಇಡಿ ದಾಳಿಯಾಗಬಹುದು-ಪ್ರಿಯಾಂಕ್ ಖರ್ಗೆ; Video

ಮುಂದಿನ ವಿಧಾನಸಭೆ ಚುನಾವಣೆಯನ್ನು ಕೇಂದ್ರ ಸರ್ಕಾರ ಸಿಬಿಐ, ಇಡಿ, ಐಟಿಯೊಂದಿಗೆ ಮಾಡಲು ಯೋಜಿಸುತ್ತಿದೆಯೇ ಹೊರತು ಬಿಜೆಪಿ ನಾಯಕರೊಂದಿಗೆ ಅಲ್ಲ ಎಂದು ಟೀಕಿಸಿದರು.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬಸ್ಥರ ನಿವಾಸಗಳ ಮೇಲೆ ಇಂದು ಜಾರಿ ನಿರ್ದೇಶನಾಲಯ ದಾಳಿಯನ್ನು ರಾಜಕೀಯವಾಗಿ ದುರುದ್ದೇಶಪೂರಿತ, ಇದು ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂತಹ ದಾಳಿಗಳನ್ನು ಮಾಡಿಸಿ ಕೇಂದ್ರ ಸರ್ಕಾರ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸ್ಥಿತಿ ಡೋಲಾಯಮಾನವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಕೇಂದ್ರ ಸರ್ಕಾರ ಸಿಬಿಐ, ಇಡಿ, ಐಟಿಯೊಂದಿಗೆ ಮಾಡಲು ಯೋಜಿಸುತ್ತಿದೆಯೇ ಹೊರತು ಬಿಜೆಪಿ ನಾಯಕರೊಂದಿಗೆ ಅಲ್ಲ ಎಂದು ಟೀಕಿಸಿದರು.

ನಾವು ಆರ್ ಎಸ್ ಎಸ್ ವಿರುದ್ಧ ಮಾತನಾಡಿದಾಗಲೆಲ್ಲಾ ಬಿಜೆಪಿಯವರು ನಮ್ಮ ಕುಟುಂಬದ ವಿರುದ್ಧ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ, ಈ ರೀತಿ ದಾಳಿ ಮಾಡಿಸುತ್ತಾರೆ. ಇಂದು ಸತೀಶ್ ಜಾರಕಿಹೊಳಿಯವರ ನಿವಾಸದ ಮೇಲೆ ದಾಳಿ ಮಾಡಿರಬಹುದು, ನಾಳೆ ನಮ್ಮ ಮನೆ ಮೇಲೆ, ಡಿ ಕೆ ಶಿವಕುಮಾರ್ ನಿವಾಸ ಮೇಲೆ ದಾಳಿ ಮಾಡಿದರೂ ಅಚ್ಚರಿಯಿಲ್ಲ, ನಾವು ಯಾವುದಕ್ಕೂ ಹೆದರುವುದಿಲ್ಲ ಎಂದರು.

Priyank Kharge
ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವರಿಗೆ ED ಶಾಕ್‌; ಸತೀಶ್ ಜಾರಕಿಹೊಳಿ ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ !

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com