ಮಧು ಬಂಗಾರಪ್ಪ ದಿನಕ್ಕೊಂದು ಶೂ ಹಾಕ್ತಾರೆ, ಶಾಲಾ ಮಕ್ಕಳಿಗೆ ಕಿತ್ತೋಗಿರೋ ಶೂ ಕೊಡ್ತಾರೆ; ಚಿಂದಿ ಆಯುವವರು ಕೂಡ ಅದನ್ನು ತಗೊಳ್ಳಲ್ಲ- ಶ್ರೀರಾಮುಲು

ಮಧು ಬಂಗಾರಪ್ಪನವರು ದಿನಕ್ಕೊಂದು ಹೊಸ ಶೂ ಬದಲಾಯಿಸ್ತಾರೆ... ಆದರೆ ಶಾಲಾ ಮಕ್ಕಳಿಗೆ ಕೊಡುವ ಶೂ ಚಿಂದಿ ಆಯುವವರು ಕೂಡ ತಗೋಳಲ್ಲ ಎಂದಿದ್ದಾರೆ, ಹಾಕಿಕೊಂಡ ಕೂಡಲೇ ಶೂ ಹರಿಯುತ್ತದೆ ಶಿಕ್ಷಣ ಎಂಬುದು ಹುಟ್ಟಿನಿಂದ ಸಾಯುವವರೆಗೂ ಇರುತ್ತದೆ .
 Sriramulu
ಶ್ರೀರಾಮುಲು
Updated on

ಬಳ್ಳಾರಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅರಮನೆಯಲ್ಲಿದ್ದು, ಜನರನ್ನು ಬೀದಿಗೆ ನಿಲ್ಲಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಸಕ್ತ ವರ್ಷ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದ್ದರೂ ಮುಖ್ಯಮಂತ್ರಿ ಜನರಿಗೆ ಸಹಾಯ ಮಾಡಿಲ್ಲ. ರೈತರ ಕಷ್ಟಗಳನ್ನು ಆಲಿಸಿಲ್ಲ. ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರ ಮನೆ ಕಾಯುತ್ತ ಕಾಲ ಕಳೆದಿದ್ದಾರೆ. ಇದು ಹೈಟೆಕ್ ಸರ್ಕಾರ, ಬಡವರಿಗೆ ಸಹಾಯ ಮಾಡದ ಬಿಸಿನೆಸ್‌ಮನ್ ಸರ್ಕಾರ ಎಂದು ಟೀಕಿಸಿದರು.

ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಗುರುವಾರ ಸಂಜೆ ನಡೆದ 'ಬಳ್ಳಾರಿ ಚಲೋ' ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರು ನನಗೆ ಶತ್ರುವಲ್ಲ, ಅವರ ಮೇಲೆ ಯಾವುದೇ ದ್ವೇಷವಿಲ್ಲ ಎಂದರು.

ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ 187 ಕೋಟಿ ನಿಗಮದ ಹಣದ ಹಗರಣದ ವಿರುದ್ಧ ನಮ್ಮ ಹೋರಾಟವಾಗಿದೆ. ತನಿಖೆ ವೇಳೆ ನಾಗೇಂದ್ರ ಅವರ ಹೆಸರನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ. ಈ ಹಣ ನಿಗಮಕ್ಕೆ ವಾಪಸಾಗಿ ಸಮುದಾಯದ ಜನರಿಗೆ ತಲುಪಬೇಕು. ಇದನ್ನು ಪ್ರಶ್ನಿಸುವುದು ತಪ್ಪೇ ಎಂದು ಕೇಳಿದರು.

 Sriramulu
BJP ‘ಬಳ್ಳಾರಿ ಚಲೋ’ ಪಾದಯಾತ್ರೆ ಅಂತ್ಯ: ಗ್ರಾಮೀಣ ರಸ್ತೆಗಳ ದುಸ್ಥಿತಿ ವಿರುದ್ಧ ವಿಜಯೇಂದ್ರ ಕಿಡಿ, ರಾಜ್ಯದ ಪ್ರತಿ ಕ್ಷೇತ್ರಕ್ಕೆ 200 ಕೋಟಿ ರೂ. ಅನುದಾನಕ್ಕೆ ಆಗ್ರಹ..!

ಮಧು ಬಂಗಾರಪ್ಪನವರು ದಿನಕ್ಕೊಂದು ಹೊಸ ಶೂ ಬದಲಾಯಿಸ್ತಾರೆ... ಆದರೆ ಶಾಲಾ ಮಕ್ಕಳಿಗೆ ಕೊಡುವ ಶೂ ಚಿಂದಿ ಆಯುವವರು ಕೂಡ ತಗೋಳಲ್ಲ ಎಂದಿದ್ದಾರೆ, ಹಾಕಿಕೊಂಡ ಕೂಡಲೇ ಶೂ ಹರಿಯುತ್ತದೆ ಶಿಕ್ಷಣ ಎಂಬುದು ಹುಟ್ಟಿನಿಂದ ಸಾಯುವವರೆಗೂ ಇರುತ್ತದೆ .ಹೀಗಾಗಿ, ಶಿಕ್ಷಣದ ಕಡೆ ಗಮನ ಕೊಡಬೇಕು ಎಂದರು.

ರೆಡ್ಡಿ, ಶ್ರೀರಾಮುಲು ಮತ್ತು ಯಡಿಯೂರಪ್ಪ ಅವರು ಪ್ರತ್ಯೇಕ ಪಕ್ಷ ಕಟ್ಟಿದ್ದರು ಎಂದು ತಂಗಡಗಿ ಹೇಳಿದ್ದಾರೆ. ಯಡಿಯೂರಪ್ಪ ಪಾರ್ಟಿ ಕಟ್ಟಿದ್ದು ಸ್ವಾರ್ಥಕ್ಕಲ್ಲ, ಜನಹಿತಕ್ಕಾಗಿ. ನಿನ್ನ ಹಾಗೆ ಅಧಿಕಾರಕ್ಕಾಗಿ ಪದೇ ಪದೇ ಸ್ವಾಮಿ ನಿಷ್ಠೆ, ಪಕ್ಷ ನಿಷ್ಠೆ ಬದಲಾಯಿಸುವವರಲ್ಲ, ನೀವು ಗಾಳಿ ಬಂದ ಕಡೆ ತೂರಿಕೊಳ್ಳೋ ಜನ. ಬಿಜೆಪಿ ಇದ್ದಾಗ ನಮ್ಮ ಹತ್ರ ಮಂತ್ರಿಯಾದಿರಿ, ಸಿದ್ದರಾಮಯ್ಯ ಇದ್ದಾಗ ಅವರಿಗೆ ಪೂಜೆ ಮಾಡಿ ಸಚಿವರಾಗಿದ್ದೀರಿ. ಈಗ ಶಿವಕುಮಾರ್ ಅವರಿಗೆ ಪೂಜೆ ಮಾಡಿ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಶ್ರೀರಾಮಲು ಲೇವಡಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com