ಭೂಸುಧಾರಣೆ ಕಾಯ್ದೆ ತಿದ್ದುಪಡಿ ತರಲು ವಿಫಲ: ಸ್ವಪಕ್ಷದ ಸರ್ಕಾರದ ವಿರುದ್ಧವೇ ಹೈಕಮಾಂಡ್ ಗೆ ಪತ್ರ ಬರೆಯಲು BR ಪಾಟೀಲ್ ನಿರ್ಧಾರ!

ಬಿಜೆಪಿ ಸರ್ಕಾರ ಈ ಸೆಕ್ಷನ್‌ಗಳನ್ನು ರದ್ದುಗೊಳಿಸಿ ಹಿಂದಿನ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದಿದ್ದವು. ಪ್ರಸ್ತುತ ಸರ್ಕಾರವು ಈ ಸೆಕ್ಷನ್‌ಗಳನ್ನು ಮರುಸ್ಥಾಪಿಸುವಲ್ಲಿ ವಿಫಲವಾಗಿರುವುದರಿಂದ ನಾನು ಸೋಮವಾರ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಿದ್ದೇನೆ.
BR patil
ಬಿ.ಆರ್ ಪಾಟೀಲ್
Updated on: 

ಬೆಂಗಳೂರು: 2020ರಲ್ಲಿ ಬಿಜೆಪಿ ಸರ್ಕಾರ ರದ್ದುಪಡಿಸಿದ್ದ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79A, 79B ಮತ್ತು 79Cಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಮರುಸ್ಥಾಪಿಸುವಲ್ಲಿ ಅಥವಾ ತಿದ್ದುಪಡಿ ಮಾಡುವಲ್ಲಿ ತಮ್ಮದೇ ಸರ್ಕಾರ ವಿಫಲವಾಗಿರುವುದಕ್ಕೆ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಪಾಟೀಲ್, ಬಜೆಟ್ ಮಂಡನೆಗೂ ಮುನ್ನ ನೀಡಿದ್ದ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ (AICC) ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

"ಬಿಜೆಪಿ ಸರ್ಕಾರ ಈ ಸೆಕ್ಷನ್‌ಗಳನ್ನು ರದ್ದುಗೊಳಿಸಿದ್ದು ಹಿಂದಿನ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದಿದ್ದವು. ಪ್ರಸ್ತುತ ಸರ್ಕಾರವು ಈ ಸೆಕ್ಷನ್‌ಗಳನ್ನು ಮರುಸ್ಥಾಪಿಸುವಲ್ಲಿ ವಿಫಲವಾಗಿರುವುದರಿಂದ ನಾನು ಸೋಮವಾರ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಿದ್ದೇನೆ," ಎಂದು ಅವರು ದಿ ನ್ಯೂ ಇಂಡಿಯನ್ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಪಾಟೀಲ್ ಅವರ ಪ್ರಕಾರ, ಅವರು ಈ ವಿಷಯವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದರು ಮತ್ತು ಆ ನಿಬಂಧನೆಗಳನ್ನು ಮರುಸ್ಥಾಪಿಸಲು ಅಥವಾ ಸೂಕ್ತವಾಗಿ ತಿದ್ದುಪಡಿ ಮಾಡಲು ಒಪ್ಪಿಗೆಯಾಗಿತ್ತು. ಈ ಪ್ರಸ್ತಾವನೆಯು ಆರಂಭಿಕ ಬಜೆಟ್ ಕರಡಿನ ಭಾಗವಾಗಿತ್ತು, ಆದರೆ ನಂತರ ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವ ಮೊದಲು ಅದನ್ನು ಕೈಬಿಡಲಾಯಿತು ಎಂದು ಮಾಹಿತಿ ನೀಡಿದ್ದಾರೆ.

BR patil
Watch | ಒಕ್ಕಲಿಗರೆಲ್ಲ ಶಿವಕುಮಾರ್ ನೋಡಿ ಹಾಕ್ತಾರಾ? ಗೌಡರನ್ನ ನೋಡೇ ವೋಟ್ ಹಾಕೋದು...

ಈ ನಿಬಂಧನೆಗಳ ರದ್ದತಿಯು ಸಣ್ಣ ಮತ್ತು ಅತಿ ಸಣ್ಣ ರೈತರ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಶಾಸಕರು ಹೇಳಿದರು. ಸೆಕ್ಷನ್ 79A ಮತ್ತು 79B ಈ ಹಿಂದೆ ಖರೀದಿದಾರರ ಆದಾಯ ಮತ್ತು ಸ್ಥಾನಮಾನದ ಆಧಾರದ ಮೇಲೆ ಕೃಷಿ ಭೂಮಿಯನ್ನು ಖರೀದಿಸುವುದು ಮತ್ತು ಹೊಂದುವಿಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದವು. ಇನ್ನು ಸೆಕ್ಷನ್ 79C ಘೋಷಣೆಗಳು ಮತ್ತು ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಕ್ರಮಗಳ ಕುರಿತು ವ್ಯವಹರಿಸುತ್ತಿತ್ತು.

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು 'ಉಳುವವನೇ ಭೂಮಿಯ ಒಡೆಯ' ಎಂಬ ತತ್ವದಡಿ ಭೂ ಸುಧಾರಣೆಗಳನ್ನು ಜಾರಿಗೆ ತಂದಿದ್ದರು ಮತ್ತು ಇದರಿಂದ ಗೇಣಿದಾರ ರೈತರು ಭೂಮಾಲೀಕರಾಗಲು ಸಾಧ್ಯವಾಗಿತ್ತು ಎಂಬುದನ್ನು ಪಾಟೀಲ್ ನೆನಪಿಸಿಕೊಂಡರು. ಸುಧಾರಣೆಗಳ ಮೂಲ ಉದ್ದೇಶವನ್ನು ರಕ್ಷಿಸಬೇಕು ಎಂದು ಅವರು ಪ್ರತಿಪಾದಿಸಿದರು. 2020ರ ತಿದ್ದುಪಡಿಗಳು ಸೆಕ್ಷನ್ 79A, 79B ಮತ್ತು 79Cಗಳನ್ನು ತೆಗೆದುಹಾಕುವ ಮೂಲಕ ಕರ್ನಾಟಕದಲ್ಲಿ ಕೃಷಿ ಭೂಮಿಯ ಖರೀದಿ ಮತ್ತು ಸ್ವಾಧೀನವನ್ನು ಗಣನೀಯವಾಗಿ ಸರಳಗೊಳಿಸಿದವು ಎಂದು ಅವರು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಭರವಸೆ ನೀಡಿದ ಬದಲಾವಣೆಗಳನ್ನು ತಂದಿಲ್ಲ ಎಂದು ಪಾಟೀಲ್ ಹೇಳಿದರು. ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಮತ್ತು ಆರಂಭದಲ್ಲಿ ಬಜೆಟ್ ಕರಡಿನಲ್ಲಿದ್ದ ಪ್ರಸ್ತಾವನೆಯನ್ನು ಏಕೆ ಕೈಬಿಡಲಾಯಿತು ಎಂಬುದರ ಕುರಿತು ವಿವರಣೆ ಕೋರುವುದಾಗಿ ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com