
ಬೆಂಗಳೂರು: ಕನ್ನಡ ಸಾಹಿತ್ಯ ಸಮ್ಮೇಳನಗಳ ವಿಶೇಷತೆ ಎಂದರೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ. ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಉಳಿದಿರುವುದೇ ಪುಸ್ತಕದ ಅಂಗಡಿಗಳಲ್ಲಿ ಎಂದು ಕೂಡ ಹೇಳಲಾಗುತ್ತದೆ. ರಾಜ್ಯಾದ್ಯಂತ್ಯ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು ಸಮಯ-ಹಣ ವ್ಯಯಿಸಿ ಇಲ್ಲಿಗೆ ಬಂದಿದ್ದರೂ ಹಲವಾರು ಪುಸ್ತಕ ಮಳಿಗೆಗಳಲ್ಲಿ ಪುಸ್ತಕಗಳು ನಿರೀಕ್ಷೆಯಂತೆ ಬಿಕರಿಯಾಗುತ್ತಿಲ್ಲ.
ಸುಮಾರು ೫೦೦ ಪುಸ್ತಕ ಮಳಿಗೆಗಳಿದ್ದರೂ, ಎರಡು ಭಾಗಗಳಲ್ಲಿ ಪುಸ್ತಕ ಮಳಿಗೆಗಳನ್ನು ನಿರ್ಮಿಸಲಾಗಿದೆ. ಮುಖ್ಯ ವೇದಿಕೆಯ ಎದುರಿಗೆ ಸ್ಥಾಪಿಸಲಾಗಿರುವ ಮಳಿಗೆಗಳಲ್ಲಿ ವ್ಯಾಪಾರ ಪರವಾಗಿಲ್ಲ ಎನ್ನುತ್ತಾರೆ ಮಳಿಗೆಗಳ ಮಾಲೀಕರು. ಆದರೆ ಹಿಂಭಾಗದಲ್ಲಿರುವ ಪುಸ್ತಕ ವ್ಯಾಪಾರಿಗಳ ಅಳಲು ಕೇಳುವವರು ಯಾರೂ ಇಲ್ಲ. ಮಳಿಗೆಗಳನ್ನು ಸರಿಯಾಗಿ ಹಂಚಲಾಗಿಲ್ಲ ಹಾಗೂ ಅವುಗಳ ನಿರ್ಮಾಣ ಕೂಡ ಎಲ್ಲರಿಗೂ ಸಮನಾಗಿ ವ್ಯಾಪಾರ ಆಗುವಂತಿಲ್ಲ ಎನ್ನುತ್ತಾರೆ.
ಪುಸ್ತಕ ಮಳಿಗೆಗಳ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ!
ಸಾಮಾನ್ಯವಾಗಿ ಪುಸ್ತಕ ಮಳಿಗೆಗಳನ್ನು ಹಂಚುವಾಗ ಲಾಟರಿ ಎತ್ತಲಾಗುತ್ತದೆ. ಆದರೆ ಈ ಬಾರಿ ಮಳಿಗೆಗಳ ನೊಂದಣಿ ಪ್ರಕಾರ ಮೊದಲು ಬಂದವರಿಗೆ ಆದ್ಯತೆ ನೀಡಿ ಮಳಿಗೆಗಳನ್ನು ಹಂಚಲಾಗಿದೆ ಎನ್ನುತ್ತಾರೆ ಪುಸ್ತಕ ಮಳಿಗೆಗಳನ್ನು ಉಸ್ತುವಾರಿ ವಹಿಸಿರುವ ಅಧಿಕಾರಿಗಳು. ಆದರೆ ಸ್ನೇಹ ಬುಕ್ ಹೌಸ್ ನ ಪ್ರಕಾಶಕ ಪರಶಿವಪ್ಪ ದಾಖಲೆ ಸಮೇತ ತಮಗಿಂತಲೂ ನಿಧಾನವಾಗಿ ನೊಂದಣಿ ಮಾಡಿಸಿದ ಹಲವರಿಗೆ ಮೊದಲಿನ ಮಳಿಗೆಗಳನ್ನು ಹಂಚಿರುವುದನ್ನು ದುಃಖದಿಂದ ಹೇಳಿಕೊಳ್ಳುತ್ತಾರ
Advertisement