ಸಮಾನತೆ ಸಾರಿದ ಗೊಮ್ಮಟನ ನಾಡಿನಲ್ಲಿ ದಲಿತ ಕವಿಯ ಅದ್ಧೂರಿ ಮೆರವಣಿಗೆ

೮೧ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆ ಸಮ್ಮೇಳನಾಧ್ಯಕ್ಷರ
ವರ್ಣರಂಜಿತ ಎತ್ತಿನಗಾಡಿಯಲ್ಲಿ ತಮ್ಮ ಪತ್ನಿಯ ಜೊತೆ ಆಸೀನರಾಗಿದ್ದ ಸಮ್ಮೇಳನಾಧ್ಯಕ್ಷ ದಲಿತ ಕವಿ ಸಿದ್ಧಲಿಂಗಯ್ಯ
ವರ್ಣರಂಜಿತ ಎತ್ತಿನಗಾಡಿಯಲ್ಲಿ ತಮ್ಮ ಪತ್ನಿಯ ಜೊತೆ ಆಸೀನರಾಗಿದ್ದ ಸಮ್ಮೇಳನಾಧ್ಯಕ್ಷ ದಲಿತ ಕವಿ ಸಿದ್ಧಲಿಂಗಯ್ಯ

ಶ್ರವಣಬೆಳಗೊಳ: ೮೧ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಇಂದು ಶನಿವಾರ ಎತ್ತಿನ ಗಾಡಿಯಲ್ಲಿ ಅದ್ಧೂರಿಯಾಗಿ ನಡೆಯಿತು. ವರ್ಣರಂಜಿತ ಎತ್ತಿನಗಾಡಿಯಲ್ಲಿ ತಮ್ಮ ಪತ್ನಿಯ ಜೊತೆ ಆಸೀನರಾಗಿದ್ದ ಸಮ್ಮೇಳನಾಧ್ಯಕ್ಷ ದಲಿತ ಕವಿ ಸಿದ್ಧಲಿಂಗಯ್ಯ ನಗು ಮುಖ ಬೀರಿ ಎಲ್ಲರತ್ತ ಕೈಬೀಸಿ ಶುಭ ಕೋರುತ್ತಿದ್ದುದು ಸಾಮಾನ್ಯವಾಗಿತ್ತು.

ಸಾವಿರಾರು ಜನ ಈ ಮೆರವಣಿಗೆಗೆ ಸಾಕ್ಷಿಯಾದರು. ಮನೆಗಳ ಮೇಲೆ ನಿಂತು, ಫೋಟೊಗಳನ್ನು, ವಿಡಿಯೋಗಳನ್ನು ತಮ್ಮ ಮೊಬೈಲ್ಗಳ ಮೂಲಕ ಚಿತ್ರೀಕರಿಸುತ್ತಿದ್ದ ದೃಷ್ಯ ಎಲ್ಲೆಡೆ ಕಂಡುಬಂತು. ಮೆರವಣಿಗೆ ಜೊತೆ ಹೊರಟ ಸ್ತಬ್ಧಚಿತ್ರಗಳು ನೋಡುಗರ ಕಣ್ಮನ ಸೆಳೆದವು.

ನೂರಾರು ಸುಸಜ್ಜಿತ ಪುಸ್ತಕ ಮಳಿಗೆಗಳು ಜನರನ್ನು ಆಕರ್ಷಿಸುತ್ತಿವೆ. ಬೃಹತ್ ವೇದಿಕೆ ನಾಳೆ ಸಮ್ಮೇಳನದ ಗೋಷ್ಠಿಗಳಿಗೆ ನೆಲಯಾಗಲಿದೆ. ವಾರ್ತಾ ಇಲಾಖೆಯ ತಾತ್ಕಾಲಿಕ ಕಛೇರಿಯ ಎದುರು ನಿರ್ಮಿಸಲಾಗಿರುವ ಜ್ಞಾನ ಪೀಠ ಪ್ರಶಸ್ತಿ ವಿಜೇತರ ಪ್ರತಿಮೆಗಳು ಕೂಡ ಪ್ರಮುಖ ಆಕರ್ಷಣೆ.

ನಾಳೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com