ಕನ್ನಡಕ್ಕಾಗಿ ತ್ಯಾಗ, ಅಹಿಂಸಾ ಆಂದೋಲನ: ಸಿದ್ದಲಿಂಗಯ್ಯ ಆಶಯ

ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ೮೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ...
ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯ
ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯ

ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ  ಕನ್ನಡ ಸಾಹಿತ್ಯ ಪರಿಷತ್ತಿನ ೮೧ನೆಯ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯ ಅವರ ಭಾಷಣದ ಮುಖ್ಯಾಂಶಗಳು


1. ಕನ್ನಡಕ್ಕೆ ಇದು ಸಂಕಷ್ಟ ಕಾಲ. ಬಾಹುಬಲಿ ಸ್ಪೂರ್ತಿಯಿಂದ ಕನ್ನಡ ರಕ್ಷಣೆಗಾಗಿ ಅಹಿಂಸಾತ್ಮಕ ಆಂದೋಲನಕ್ಕೆ, ತ್ಯಾಗಕ್ಕೆ ಸಿದ್ಧರಾಗೋಣ.
2 . ಮಾತೃಭಾಷೆ ಶಿಕ್ಷಣ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಆಘಾತಕಾರಿ. ಶಿಕ್ಷಣ ಮಾಧ್ಯಮ ಜಾರಿ ಗಾಗಿ ದೀರ್ಘ ಹೋರಾಟಕ್ಕೆ ಅಣಿಯಾಗಿ ತಾರ್ಕಿಕ ಅಂತ್ಯ ಕಾಣುವವರೆಗೆ ವಿಶ್ರಮಿಸಬಾರದು.

3. ಸಂವಿಧಾನದ ಷೆಡ್ಯೂಲ್-8ರಲ್ಲಿರುವ `ಎಲ್ಲ ಭಾಷೆಗಳನ್ನು ಶಿಕ್ಷಣ ಮಾಧ್ಯಮದಲ್ಲಿ ಕಡ್ಡಾಯಗೊಳಿಸಿ' ಅಂಶಕ್ಕೆ ತಿದ್ದುಪಡಿ ತರಬೇಕು.
4. ದೇಶೀಯ ಭಾಷೆಗಳಲ್ಲಿ ಕಡ್ಡಾಯ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ಕೇಂದ್ರದ ಮೇಲೆ ಒತ್ತಡಹಾಕಬೇಕು.
5. ರಾಜ್ಯ ಸರ್ಕಾರ 2010ರ ಶಿಕ್ಷಣ ಹಕ್ಕು ಕಾಯ್ದೆಯಲ್ಲಿರುವ ಅಂಶ ಆಧರಿಸಿ ಭಾಷಾ ನೀತಿ ರೂಪಿಸಬೇಕು.
6 .ಮಾತೃಭಾಷೆ ಎಂಬುದನ್ನು `ಮಾತೃಭಾಷೆ ಅಥವಾ ರಾಜ್ಯ ಭಾಷೆ' ಎಂದು ಬದಲಿಸಬೇಕು.
7. ಶೈಕ್ಷಣಿಕ ವರ್ಗಭೇದ ತೊಡೆದು ಹಾಕಬೇಕು.ಮಾಲಿ, ಮಂತ್ರಿ, ಪ್ರಧಾನಿ ಮಕ್ಕಳೂ ಒಂದೇ ಬೆಂಚಿನಲ್ಲಿ ಕುಳಿತು ಕಲಿಯುವ ವಾತಾವರಣಸೃಷ್ಟಿಯಾಗಬೇಕು.
8. ಖಾಸಗಿ ಶಾಲೆಗಳ ಅಬ್ಬರ ಹೆಚ್ಚುತ್ತಿದೆ, ಶಿಕ್ಷಕರ ನೇಮಕವಿಲ್ಲದೇ ಏಕೋಪಾಧ್ಯಾಯ ಶಾಲೆಗಳು ಬಹುವಾಗುತ್ತಿವೆ. ಶಿಕ್ಷಕರ ನೇಮಕವಾಗಬೇಕು.
9. ಕನ್ನಡ ಪ್ರಾಥಮಿಕ ಶಾಲೆಗಳನ್ನು `ಗ್ರಾಮ ಪಂಚಾಯಿತಿ ಸಾರ್ವಜನಿಕ ಶಾಲೆ'ಗಳೆಂದು ಪರಿವರ್ತಿಸಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದಾದರೂ ಇಂಥ ಶಾಲೆ ಆರಂಬಿsಸಬೇಕು.
10. ಇಂಥ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸಬೇಕು.
11. ಶಾಸಕಾಂಗ, ನ್ಯಾಯಾಂಗ , ಶಿಕ್ಷಣ ಕ್ಷೇತ್ರ ಮತ್ತು ಆಡಳಿತಾಂಗದಲ್ಲಿ ಕನ್ನಡ ಬಳಸದ ಅಧಿಕಾರಿಗಳನ್ನು ಬದಲಿಸಬೇಕು. ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ತೀರ್ಪು ನೀಡಬೇಕೆಂಬ ಹೈಕೋರ್ಟ್ ಸುತ್ತೋಲೆ ಕಡ್ಡಾಯ ಪಾಲಿಸಬೇಕು.
12. ಕನ್ನಡದಲ್ಲಿ ಒಂದು ತಂತ್ರಾಂಶದಿಂದ ಮತ್ತೊಂದು ತಂತ್ರಾಂಶಕ್ಕೆ ಪರಿವರ್ತನೆ (ಕನ್ವರ್ಟಬಲಿಟಿ) ಮಾಡುವುದನ್ನು ಅಭಿವೃದ್ಧಿಪಡಿಸಬೇಕು.
13. ಕನ್ನಡ ಪುಸ್ತಕೋದ್ಯಮ ಉತ್ತೇಜಿಸಲು ಗ್ರಂಥಾಲಯ ಇಲಾಖೆ ಪ್ರತಿ ವರ್ಷ ತಪ್ಪದೆ ಪುಸ್ತಕ ಖರೀದಿಸಬೇಕು. ಕನ್ನಡ ಪುಸ್ತಕ ಪ್ರೋತ್ಸಾಹಕ್ಕೆ `ಪುಸ್ತಕ ನೀತಿ' ಜಾರಿಯಾಗಬೇಕು.
14. ಗಡಿ ಸಮಸ್ಯೆ ಇತ್ಯರ್ಥವಾಗಬೇಕು. ಅಲ್ಲಿನ ಮಕ್ಕಳಿಗೆ ಕನ್ನಡ ಪುಸ್ತಕ ಉಚಿತವಾಗಿ ಪೂರೈಸಬೇಕು. ಗಡಿ ಭಾಗದ ಪತ್ರಿಕೆಗಳಿಗೆ ಹೆಚ್ಚಿನಜಾಹೀರಾತು ನೀಡಿ ಪ್ರೋತ್ಸಾಹಿಸಬೇಕು.
15. ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಸರೋಜಿನಿ ಮಹಿಷಿ ವರದಿ ಪ್ರಸ್ತುತತೆಗೆ ತಕ್ಕಂತೆ ಮಾರ್ಪಡಿಸಿ ಅನುಷ್ಠಾನಗೊಳಿಸಬೇಕು.
16. ಕೇಂದ್ರದ ವಿವಿಧ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆ ಕನ್ನಡ ಪ್ರಶ್ನೆಪತ್ರಿಕೆ ಕಡ್ಡಾಯವಾಗಬೇಕು.
17 ಕಸಾಪ ಶತಮಾನೋತ್ಸವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷವನ್ನು `ಕನ್ನಡ ವರ್ಷ-2015' ಎಂದು ಘೋಷಿಸಿ ಆ ದಿನವನ್ನು `ಕನ್ನಡ ದಿನ' ಎಂದು ಕರೆಯಬೇಕು. `ಕನ್ನಡ ಮಾತಾಡಿ' ಚಳವಳಿ ಆರಂಭವಾಗಲಿ.
18 ಕನ್ನಡ ಕ್ರೈಸ್ತರ ಭಾವನೆಗೆ ಸ್ಪಂದಿಸಿ ಚರ್ಚ್‍ಗಳಲ್ಲಿ ಕನ್ನಡ ಅಧಿಕೃತ ಭಾಷೆ ಮಾಡಬೇಕು.ಕರ್ನಾಟಕದಲ್ಲಿ ಗುರುಗಳ ತರಬೇತಿಗೆ ಪ್ರಾದೇಶಿಕ ಗುರುಮಠ ಸ್ಥಾಪಿಸಬೇಕು.
19 ಮೌ ಢ್ಯ ವಿರೋಧಿ ಕಾನೂನು ಜಾರಿಯಾಗಲಿ. ಅಸ್ಪೃಷ್ಯತೆ ನಿವಾರಣೆಯಾಗಲಿ. ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಲಿ.
20 ಸಮಗ್ರ ಕರ್ನಾಟಕ ಪ್ರತಿಬಿಂಬಿಸುವ ನಿಟ್ಟಿನಲ್ಲಿ ವಸ್ತುಸಂಗ್ರಹಾಲಯ ಸ್ಥಾಪನೆಯಾಗಲಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com