ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ, ವ್ಯವಸ್ಥೆ, ಸೌಲಭ್ಯ ಇತ್ಯಾದಿ ವಿವರ

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇಚ್ಚಾಶಕ್ತಿ, ಶ್ರೀ ಕ್ಷೇತ್ರ ಶ್ರವಣಬೆಳಗೊಳ ಮಠದ ಸಹಕಾರ...
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇಚ್ಚಾಶಕ್ತಿ, ಶ್ರೀ ಕ್ಷೇತ್ರ ಶ್ರವಣಬೆಳಗೊಳ ಮಠದ ಸಹಕಾರ, ಕೇಂದ್ರ ಕಸಾಪ ಮತ್ತು ಜಿಲ್ಲಾಡಳಿತದ ಮಾರ್ಗದರ್ಶನ, ಜಿಲ್ಲೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ದೊರೆತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸುವ ಹೊಣೆಗಾರಿಕೆಯನ್ನು ಅಡ್ಡಿ ಆತಂಕದ ನಡುವೆಯೂ ಸದ್ದಿಲ್ಲದಂತೆ ನಿರ್ವಹಿಸಲಾಗುತ್ತಿದೆ.

** ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಶಾಲವಾದ ಸ್ಥಳದ ಆಯ್ಕೆ ಮಾಡಿ ಸಮ್ಮೇಳನದ ಸಭಾಂಗಣ, ಬೋಜನಾಲಯ, ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳು, ವಾಹನ ನಿಲುಗಡೆಗೆ ವ್ಯವಸ್ಥೆ, ಮಾಧ್ಯಮ ಕೇಂದ್ರ, ಪೋಲೀಸ್ ಚೌಕಿ, ಸಹಾಯ ವಾಣಿ ಕೇಂದ್ರಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಅನಾಮತ್ತು 30ಎಕರೆಯಷ್ಟು ಪ್ರದೇಶವನ್ನು ತಾತ್ಕಾಲಿಕವಾಗಿ ಸಮತಟ್ಟು ಮಾಡಿ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಇದುವರೆಗೆ 9ಸಾಹಿತ್ಯ ಸಮ್ಮೇಳನಗಳಿಗೆ ವೇದಿಕೆ ನಿರ್ಮಾಣ ಮಾಡಿಕೊಟ್ಟಿದ್ದ ಬೆಂಗಳೂರಿನ ರಾಜ್ ಎಂಟರ್ ಪ್ರೈಸಸ್ ವೇದಿಕೆ ನಿರ್ಮಾಣದ ಕಾರ್ಯ ಮಾಡುತ್ತಿದೆ. ಸುಮಾರು 1.50ಲಕ್ಷ ಚದರ ಅಡಿಗಳಲ್ಲಿ ವೇದಿಕೆ ಮತ್ತು ಸಭೀಕರು ಕೂರಲು ಆಸರೆಯ ವ್ಯವಸ್ಥೆ ಮಾಡಲಾಗುತ್ತಿದ್ದು ಈ ಬೃಹತ್ ವೇದಿಕೆಯಲ್ಲಿ 25ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಆಗಿದೆ.

** ಚನ್ನರಾಯ ಪಟ್ಟಣದಿಂದ ಶ್ರವಣಬೆಳಗೊಳಕ್ಕೆ ಪ್ರವೇಶ ಪಡೆಯುತ್ತಿದ್ದಂತೆಯೇ ಬಲಕ್ಕೆ ಕವಲೊಡೆಯುವ ಹಾದಿಯಲ್ಲಿ 2ಕಿಮಿ ಸಾಗಿದರೆ ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಪ್ರವೇಶ ಸಿಗುತ್ತದೆ. ಸರಿಯಾಗಿ ಗೊಮ್ಮಟ ಮೂರ್ತಿ ನೆಲೆಯಾಗಿರುವ ವಿಂದ್ಯಗಿರಿ ಬೆಟ್ಟದ ಹಿಂಬದಿಯ ಪ್ರಶಾಂತ ವಾತಾವರಣದಲ್ಲಿ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ.

** ವೇದಿಕೆಯ ಹಿಂಬದಿಯಲ್ಲಿ ಸಾರ್ವಜನಿಕ ಪ್ರವೇಶ ನಿಷೇದಿಸಲಾಗಿದ್ದು ಅಲ್ಲಿ ಪೋಲೀಸ್ ಚೌಕಿ, ಮಾಧ್ಯಮ ಕೇಂದ್ರ, ಸ್ವಾಮೀಜಿಯವರ ವಿಶ್ರಾಂತ ಕೊಠಡಿ ಮತ್ತು ದೃಶ್ಯ ವಾಹಿನಿಗಳ ಮರುಪ್ರಸಾರದ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದ ಪಕ್ಕದಲ್ಲಿಯೇ ಬೋಜನ ವ್ಯವಸ್ಥೆಗೆ ಯೋಜನೆ ರೂಪಿಸಲಾಗುತ್ತಿದೆ.

** ವೇದಿಕೆಯ ಬಲಭಾಗದಲ್ಲಿ ಅತಿ ಗಣ್ಯರ ವಾಹನಗಳ ನಿಲುಗಡೆ, ವೇದಿಕೆಯ ಎಡ ಭಾಗದಲ್ಲಿ ಅತಿ ಗಣ್ಯರ ಭೋಜನಾಲಯ ನಿರ್ಮಿಸಲಾಗುತ್ತಿದ್ದು ಇಲ್ಲಿ ಸುಮಾರು 3000 ಮಂದಿ ಏಕಕಾಲದಲ್ಲಿ ಕುಳಿತು ಭೋಜನ ಸವಿಯುವ ಅವಕಾಶ ಇದೆ.

** ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಸಮ್ಮೇಳನಕ್ಕೆ ಸಂಪರ್ಕಿಸುವ ಸ್ಥಳಕ್ಕೆ ಡಾಂಬರು ರಸ್ತೆ ಮಾಡಲಾಗಿದೆ, ರಸ್ತೆಯ ಕೆಲಸ ಇನ್ನೂ ಪ್ರಗತಿಯಲ್ಲಿದೆ. ಧೂಳು ಆವರಿಸದಂತೆ ನೀರು ಹಾಕಿ ನೆಲವನ್ನು ಸಮತಟ್ಟು ಮಾಡಲಾಗುತ್ತಿದೆ.ಶೌಚಾಲಯ, ಮೂತ್ರಾಲಯಗಳನ್ನು ಪುಸ್ತಕ ಮಳಿಗೆ ಹಿಂಭಾಗ, ಭೋಜನ ಆಸರೆ ಹಿಂಭಾಗ, ವೇದಿಕೆಯ ಬಳಿ ಹೀಗೆ ನಾಲ್ಕೈದು ಸ್ಥಳಗಳಲ್ಲಿ ಗುರುತಿಸಿ 300ಶೌಚಾಲಯ, 300ಮೂತ್ರಾಲಯ ಹಾಗೂ 200 ಸ್ನಾನದ ಕೋಣೆಯನ್ನು ನಿರ್ಮಿಸುವ ಯೋಜನೆಯಾಗುತ್ತಿದೆ. ಮಾಧ್ಯಮ ಕೇಂದ್ರದ ಬಳಿ ನಿಮಾಣವಾಗುವ ಶೌಚ ಮತ್ತು ಮೂತ್ರ ಕೊಠಡಿಗಳು ಪರಿಸರ ಸ್ನೇಹಿಯಾಗಿದ್ದು ಆಧುನಿಕ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ.

** ಸಾರ್ವಜನಿಕ ವಾಹನಗಳ ನಿಲುಗಡೆಗೆ 1.20ಲಕ್ಷ ಚದರ ಅಡಿಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ, ವಾಣಿಜ್ಯ ಮಳಿಗೆಗಳು 100, ಪುಸ್ತಕ ಮಳಿಗೆಗಳು 500 ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 20ಸಾವಿರ ಚದರ ಅಡಿಯ ತಲಾ 5 ಭೋಜನಾಲಯಗಳು ವ್ಯವಸ್ಥಿತವಾಗಿ ನಿರ್ಮಾಣವಾಗುತ್ತಿದ್ದು ಪ್ರತೀ ಭೋಜನಾಲಯದಲ್ಲಿ ಒಮ್ಮೆಗೆ 5000 ಮಂದಿ ಭೋಜನ ಸವಿಯುವ ಅವಕಾಶವಾಗುತ್ತಿದೆ. 4000ಚದರ ಅಡಿಯ 5 ಪ್ರತ್ಯೇಕ ಅಡುಗೆ ಕೋಣೆಗಳು ಸಮರ್ಪಕ ನೀರಿನ ವ್ಯವಸ್ಥೆಯೊಂದಿಗೆ ಸಜ್ಜಾಗುತ್ತಿವೆ. ಕುಡಿಯುವ ನೀರಿನ ವ್ಯವಸ್ಥೆಗೆ ಅಡ್ಡಿಯಾಗದಂತೆ 500ಕ್ಕೂ ಹೆಚ್ಚು ನಲ್ಲಿಗಳನ್ನು ಅಗತ್ಯ ಸ್ಥಳಗಳಲ್ಲಿ ಹಾಕಲಾಗಿದೆ. ಬೆಟ್ಟದ ಹಿಂಬದಿಯಲ್ಲಿರುವ ಬೃಹತ್ ನೀರು ಸಂಗ್ರಹಗಾರದಿಂದ ಸ್ವಚ್ಛ ಕುಡಿಯುವ ನೀರು ಸರಬರಾಜಾಗಲಿದೆ.

** ಮುಖ್ಯ ವೇದಿಕೆಯ ಬಲ ಭಾಗದಲ್ಲಿ ಕೆಲವು ಮೀಟರುಗಳ ಅಂತರದಲ್ಲಿ ವಿಚಾರ ಗೋಷ್ಠಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಲು ಸಮನಾಂತರ ವೇದಿP 20000ಚದರ ಅಡಿಯಲ್ಲಿ ನಿರ್ಮಾಣವಾಗಲಿದ್ದು 2000ಜನ ಕುಳಿತು ಕಾರ್ಯಕ್ರಮ ವೀಕ್ಷಿಸ ಬಹುದಾಗಿದೆ. ಮುಖ್ಯ ವೇದಿಕೆಗೆ ಅಭಿಮುಖವಾಗಿ ನಿಂತರೆ ಉತ್ತರಕ್ಕೆ ಪೂರ್ವಾಭಿಮುಖವಾಗಿ ಸಮನಾಂತರ ವೇದಿಕೆ, ದಕ್ಷಿಣಕ್ಕೆ ಊಟದ ಮನೆಗಳು, ಪಶ್ಚಿಮಕ್ಕೆ ವಾಹನ ನಿಲುಗಡೆ, ವಾಣಿಜ್ಯ ಮಳಿಗೆಗಳು, ಪುಸ್ತಕ ಮಳಿಗೆಗಳು ಇವೆ. ಪೂರ್ವಕ್ಕೆ ಮಾಧ್ಯಮ ಕೇಂದ್ರ ಪಶ್ಚಿಮಾಭಿಮುಖಿಯಾದ ವೇದಿಕೆ ಇದೆ.

** ಸಮ್ಮೇಳನದ ಸಿದ್ದತೆಗಾಗಿ 30 ಉಪಸಮಿತಿಗಳು ಸ್ವಾಗತ ಸಮಿತಿಯ ನೇತೃತ್ವದಲ್ಲಿ ರಚನೆಯಾಗಿದ್ದು ಕ್ಲುಪ್ತ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

(ಮಾಹಿತಿ: ಅರಕಲಗೂಡು ಜಯಕುಮಾರ್)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com