
ಕೆಲಸದ ನಿಯಮಿತ ಬೆಂಗಳೂರಿಗೆ ಸೀತ ಬಂದಳು. ಅಲ್ಲೇ ಒಂದು ಹಾಸ್ಟೆಲ್ ನಲ್ಲಿ ತಂಗಿದ್ದಳು. ಅಲ್ಲಿನ ಊಟ ಮತ್ತು ಶುಭ್ರತೆ ಅವಳಿಗೆ ಅಷ್ಟು ಹಿಡಿಸಲಿಲ್ಲ. ಆದ್ದರಿಂದ ಅವಳು ಒಂದು ಬಾಡಿಗೆ ಮನೆ ನೋಡಿಕೊಂಡು ಅಲ್ಲಿ ತನ್ನ ಅಡುಗೆ ತಾನೇ ಮಾಡಿಕೊಂಡರಾಯಿತು ಎಂದು ಅಂದುಕೊಂಡಳು. ಹೀಗೆ ಒಂದರ ನಂತರ ಒಂದು ಮನೆಗಳನ್ನು ನೋಡಿ ನೋಡಿ ಸಾಕಾದ ಸೀತ ಅಲ್ಲೇ ಒಂದು ಉದ್ಯಾನದಲ್ಲಿ ಕುಳುತು ಏನನ್ನೋ ಕಳೆದುಕೊಂಡವಳಂತೆ ಒಂದೇ ಕಡೆ ದಿಟ್ಟಿಸಿ ನೋಡುತ್ತಾ ತನ್ನ ಆಲೋಚನೆಯಲ್ಲೇ ಮುಳುಗಿದಳು.
ಅಷ್ಟರಲ್ಲೇ ಅವಳ ಕಾಲಿಗೆ ಒಂದು ಹಾಳೆ ಬಂದು ಸೋಕಿದ ಹಾಗೆ ಆಗಿ ಎಚ್ಚರವಾದವಳಂತೆ ಸುತ್ತಾ ನೋಡಿದಳು. ದೂರದಲ್ಲೇ ಮಕ್ಕಳ ಆಟದ ಕಲರವ ತಪ್ಪ ಅವಳಿಗೆ ಇನ್ನೇನು ಶಬ್ದ ಕೇಳಿಸಲಿಲ್ಲ. ಆ ಕಾಗದದಲ್ಲಿ ರೂಮ್ ಮೇಟ್ ಬೇಕಾಗಿದ್ದಾರೆ. ಚೆನ್ನಾಗಿ ಅಡುಗೆ ಮಾಡಲು ಬಂದರೆ ಸಾಕು ಎಂದು ಬರೆದಿತ್ತು. ಇವಳಿಗೂ ತಾನೇ ಅಡುಗೆ ಮಾಡಿಕೊಂಡು ತಿನ್ನುವ ಆಸೆಗೆ ಬಾಡಿಗೆ ಮನೆ ಹುಡುಕುತ್ತಿದ್ದ ಕಾರಣ room mate ಅನ್ನುವುದು ಇಷ್ಟವಾಗುತ್ತದೆ. ತಕ್ಷಣ ಅಲ್ಲಿ ಕೆಳಗೆ ಕೊಟ್ಟಿದ್ದ ವಿಳಾಸಕ್ಕೆ ಹೋಗಿ ನೋಡುತ್ತಾಳೆ. ಅದೊಂದು ದೊಡ್ಡ ಮನೆ ನೋಡಲು ಭಾರಿ ಶ್ರೀಮಂತರ ಬಂಗಲೆಯಂತೆ ಕಾಣುತ್ತದೆ. ಹೆದರುತ್ತಲೇ ಮನೆಯ ಬಾಗಿಲನ್ನು ಮೆಲ್ಲಗೆ ಎರಡು ಬಾರಿ ಬಡಿಯುತ್ತಾಳೆ. ಅಷ್ಟರಲ್ಲಿ ಒಳಗಿನಿಂದ ಮೃದು ಧ್ವನಿಯಲ್ಲಿ ಯಾರೋ ಸ್ತ್ರೀ ಬಂದೇ ಒಂದು ನಿಮಿಷ ಎಂದು ಹೇಳುತ್ತಾರೆ.
ಕೆಲವು ನಿಮಿಷಗಳ ನಂತರ ಒಬ್ಬ ಮಹಿಳೆ ಬಂದು ಬಾಗಿಲು ತೆರೆದು ಯಾರು ಏನು ಎಂದು ಕೇಳಿದಾಗ ಸೀತಾಗೆ ಏನು ಹೇಳಬೇಕು ಎಂದು ತಿಳಿಯದೇ ಆ ಕಾಗದವನ್ನು ತೋರಿಸುತ್ತಾಳೆ. ಆಕೆ ಮುಗುಳ್ನಗುತ್ತಾ, ನಿನ್ನ ಹೆಸರೇನು ಎಂದು ಕೇಳುತ್ತಾಳೆ. ನಾನು ಸೀತಾ ನನ್ನ ಊರು ಹೊಸೂರಿನ ಬಳಿ ಸಣ್ಣ ಹಳ್ಳಿ ಎಂದು ಸೀತಾ ತನ್ನ ವಿವರ ತಿಳಿಸುತ್ತಾಳೆ. "ಒಳಗೆ ಬಾ ನಾನು ಮೃದುಲಾ ಇಲ್ಲೇ ನನ್ನ ವಾಸ. ಇಷ್ಟು ದೊಡ್ಡ ಮನೆಯಲ್ಲಿ ಒಂಟಿಯಾಗಿರಲು ಬೇಸರ ಜೊತೆಗೆ ನನಗೆ ಅಡುಗೆ ಮಾಡಲು ಬರುವುದಿಲ್ಲ. room mate ಯಾರಾದರೂ ಸಿಕ್ಕರೆ ಅಡುಗೆ ಮಾಡಿಕೊಂಡು ಇಲ್ಲೇ ಹಾಯಾಗಿ ಇರಬಹುದು. ಬಾಡಿಗೆ ಕೂಡ ಕಟ್ಟುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾಳೆ. ಆಕೆಯ ಮಾತನ್ನು ಕೇಳಿ ಸೀತ ಸಂತೋಷದಿಂದ ನಾನು ನಾಳೆ ನನ್ನ ವಸ್ತುಗಳನ್ನು ತೆಗೆದುಕೊಂಡು ಬರುವೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಮರು ದಿನ ಬೆಳಿಗ್ಗೆ ತನ್ನ ಬ್ಯಾಗ್ ಗಳನ್ನು ತೆಗೆದುಕೊಂಡು Auto ಹಿಡಿದು, ಮೃದುಲಾಳ ಮನೆಗೆ ಬರುತ್ತಾಳೆ. ಮೃದುಲಾ ಇನ್ನು ಎದ್ದಿರದ ಕಾರಣ ಸೀತಾ ಕೆಲ ಸಮಯ ಬಾಗಿಲು ಬಡಿಯಬೇಕಾಗುತ್ತದೆ. ಮೃದುಲಾ. ತನ್ನ ನಿದ್ದೆ ಗಣ್ಣಿನಲ್ಲೇ ಯಾರು? ಎಂದು ಕೇಳುತ್ತಾ ಬಾಗಿಲು ತೆರೆಯುತ್ತಾಳೆ.
ಸೀತಾಳನ್ನು ಕಂಡು ಮೃದುಲಾ ಆನಂದದಿಂದ ಅಪ್ಪಿ ಒಳಬರಮಾಡಿಕೊಳ್ಳುತ್ತಾಳೆ. ಅಂದು ಭಾನುವಾರವಾಗಿದ್ದರಿಂದ ಸೀತಾ ಅಡುಗೆ ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ತರಲು ಮಾರುಕಟ್ಟೆಗೆ ಹೋಗುತ್ತಾಳೆ. ಬೇಕಿರುವ ಎಲ್ಲಾ ವಸ್ತುಗಳನ್ನು ತಂದು ಅಂದೇ ಒಲೆ ಹಚ್ಚಿ ಅಡುಗೆ ಮಾಡಲು ಶುರು ಮಾಡುತ್ತಾಳೆ ಸೀತಾ. ಅನ್ನ ಸಾರು, ಪಲ್ಯ ಜೊತೆಗೆ ಸಂಡಿಗೆ ಮಾಡಿ ಮೃದುಲಾ ಮತ್ತು ಸೀತಾ ಸುಖವಾಗಿ ತಿನ್ನುತ್ತಾರೆ. ಊಟದ ನಂಟರ ನಿನ್ನ ಕೈ ರುಚಿ ನನ್ನ ಅಮ್ಮನ ನೆನಪು ಮಾಡಿತು ಎಂದು ಕಣ್ಣೀರು ಹಾಕುತ್ತಾಳೆ. ಸೀತಾ ಅವಳಿಗೆ ಸಮಾಧಾನ ಮಾಡಿ ಹಾಗೆಯೇ ಮಲಗಿಸುತ್ತಾಳೆ. ಮತ್ತೆ ಅಡುಗೆ ಮನೆ ಸ್ವಚ್ಛ ಮಾಡಲು ಬರುತ್ತಾಳೆ ಸೀತಾ. ಅಷ್ಟರಲ್ಲಿ ಮೃದುಲಾ ನೀನು ಬಿಡು ನಾನು ನೋಡಿಕೊಳ್ಳುವೆ ಎಂದು ಹೇಳಿ ಹಳಿಸುತ್ತಾಳೆ. ಸುಸ್ತಾಗಿದ್ದ ಕಾರಣ ಸೀತಾಳಿಗೆ ನಿದ್ದೆ ಕೂಡ ಬಂದು ಬಿಡುತ್ತದೆ.
ಮರುದಿನ ಬೆಳಿಗ್ಗೆ ಎದ್ದು ಸೀತಾ ತಿಂಡಿ ಅಡುಗೆ ಮಾಡಿ ಕೆಲಸಕ್ಕೆ ಹೋಗುತ್ತಾಳೆ. ಸಂಜೆ ಬಂದು ಇಬ್ಬರು ಸೇರಿ ಮಾತನಾಡುತ್ತಾ ಅಡುಗೆ ಮಾಡಿ ಊಟ ಮಾಡಿ ಸ್ವಚ್ಛಗೊಳಿಸುತ್ತಾ ಸಂತೋಷದಿಂದ ಅಕ್ಕ ತಂಗಿಯರಂತೆ ಇರುತ್ತಾರೆ. ಒಂದು ದಿನ ಮೃದುಲಾ ಎಲ್ಲೂ ಕಾಣಿಸುವುದಿಲ್ಲ. ಅವಳನ್ನು ಹುಡುಕುತ್ತಾ ಮೃದುಲಾಳ ಕೋಣೆಗೆ ಬರುತ್ತಾಳೆ ಸೀತಾ. ಬಾಗಿಲು ತೆಗೆದು ನೋಡಿದರೆ ಅಲ್ಲಿ ಅವಳು ಕಾಣಿಸುವುದಿಲ್ಲ. ಸರಿ ಎಲ್ಲೋ ಹೊರಗೆ ಹೋಗಿರಬೇಕು ಎಂದುಕೊಂಡು ಬಾಗಿಲನ್ನು ಮುಚ್ಚುತ್ತಾ, ಒಮ್ಮೆ ಅವಳ ಕಣ್ಣು ಅಲ್ಲೇ ಗೋಡೆಯ ಮೇಲೆ ಇದ್ದ ಭಾವಚಿತ್ರದ ಮೇಲೆ ಬೀಳುತ್ತದೆ. ಅದೇನು ಎಂದು ನೋಡಿದರೆ ಮೃದುಲಾಳ ಚಿತ್ರ. ಎಷ್ಟು ಸುಂದರವಾಗಿದ್ದಾಳೆ ಎಂತ ಅಂದುಕೊಳ್ಳುವಷ್ಟರಲ್ಲಿ ಅದರ ಮೇಲೆ ದಿನಾಂಕ ಓದುತ್ತಾಳೆ. ಜನನ 163 ಮರಣ 1676 ಇದನ್ನು ಓದಿದ ಸೀತಾಳಿಗೆ ತನ್ನ ಒಂದು ತಿಂಗಳ ಜೀವನ ಚಲನ ಚಿತ್ರದಂತೆ ಕಂಡು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸುತ್ತಾಳೆ. ಆದರೆ ಆಗದೇ ಅಲ್ಲೇ ಸುತ್ತಿ ಸುತ್ತಿ ಅಲ್ಲೇ ಸಾವನ್ನಪ್ಪುತ್ತಾಳೆ.
-ಸೌಮ್ಯ
Advertisement