Goooooooogle

Goooooooogle
Updated on

ಗೂಗಲ್ ಅಂದರೆ ನಮ್ಮ ಪಾಲಿಗೆ ದೇವಸ್ಥಾನದ ಎದುರು ಕಳೆದುಹೋದ ಚಪ್ಪಲ್ ಒಂದನ್ನು ಬಿಟ್ಟು ಬೇರೆಲ್ಲವನ್ನೂ ಹುಡುಕುವ ಜಾಗ!
ಗೂಗಲ್ ಕಂಪನಿ ಆ್ಯಂಡ್ರಾಯ್ಡ್, ಕ್ರೋಮ್, ಫೈರ್‌ಫಾಕ್ಸ್ ಸೇರಿದಂತೆ ಹಲವು ಸಾಫ್ಟ್‌ವೇರ್‌ಗಳನ್ನೂ ತಯಾರಿಸುತ್ತದೆ. ಆದರೆ ಗೂಗಲ್ ಕಂಪನಿ ಹಾರ್ಡ್‌ವೇರ್‌ಗಳನ್ನೂ ತಯಾರಿಸುತ್ತದೆ ಎಂಬುದು ನಿಮಗೆ ಗೊತ್ತೇ?
ನಿಮಗೆ ಗೊತ್ತೇ ಇಲ್ಲದ ಗೂಗಲ್‌ನ ಕೆಲವು ಹಾರ್ಡ್‌ವೇರ್‌ಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ...
ಗೂಗಲ್ ಡ್ರೈವರ್‌ಲೆಸ್ ಕಾರು
ಕಾರುಗಳು ಚಾಲಕನೇ ಇಲ್ಲದೇ ಚಲಿಸುವಂತೆ ಮಾಡುವ ತಂತ್ರಜ್ಞಾನವನ್ನು ಸಿದ್ಧಪಡಿಸುವಲ್ಲಿ ಗೂಗಲ್ ನಿರತವಾಗಿದೆ. ನಿಗದಿ ಪಡಿಸಿದ ವೇಗದಲ್ಲಿ ಚಲಿಸುವುದು ಒಂದು ಅಂಶವಾದರೆ, ಹೊರಭಾಗದಲ್ಲಿ ಅಳವಡಿಸಿದ ಹಲವು ಸೆನ್ಸರ್‌ಗಳ ಮೂಲಕ ಮುಂದಿನ ಕಾರಿನಿಂದ ನಿಗದಿತ ಅಂತರ ಕಾಪಾಡಿಕೊಳ್ಳುವುದೂ ಸಾಧ್ಯವಂತೆ. ಯಾವುದೇ ಸಂದರ್ಭದಲ್ಲಿ ಚಾಲಕರು ಕಾರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅವಕಾಶವಿದೆ.
ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾದಲ್ಲಿ ಚಾಲಕ ರಹಿತ ಕಾರುಗಳು ಕಾನೂನು ಸಮ್ಮತವಾಗಿವೆ.
ಗೂಗಲ್-ಮೊಟರೋಲಾ ಎಕ್ಸ್‌ಫೋನ್
ಗೂಗಲ್ ಕಂಪನಿ ಸ್ವಲ್ಪ ಸಮಯದ ಹಿಂದೆ ಮೊಟರೋಲಾ ಮೊಬೈಲ್ ಕಂಪನಿಯನ್ನು ಖರೀದಿಸಿತ್ತು. ಅದರ ಮೂಲಕ ಈಗ ಎಕ್ಸ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು ಗೂಗಲ್ ಸಿದ್ಧತೆ ನಡೆಸಿದೆ. ಈ ಎಕ್ಸ್‌ಫೋನ್ ವಿಶೇಷವೆಂದರೆ ಗ್ರಾಹಕರು ಮೊಬೈಲ್ ಖರೀದಿಸುವ ಮೊದಲು ಅದರ ಸಂಗ್ರಹಣಾ ಸಾಮರ್ಥ್ಯ, ರ್ಯಾಮ್ ಮುಂತಾದವನ್ನು ತಮಗೆ ಬೇಕಾದ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆಯಂತೆ. ಜತೆಗೆ ಗ್ರಾಹಕರಿಗೆ ಬೇಕಾದ ವಾಲ್‌ಪೇಪರ್, ರಿಂಗ್‌ಟೋನ್‌ಗಳನ್ನು ಖರೀದಿಗೂ ಮೊದಲೇ ಅಳವಡಿಸಿಕೊಳ್ಳುವ ಅವಕಾಶವೂ ಇದೆಯಂತೆ.
ನೆಕ್ಸಸ್ ಕ್ಯೂ
ಆ್ಯಪಲ್ ಟಿವಿಗೆ ಪೈಪೋಟಿ ನೀಡುವ ಉದ್ದೇಶದಿಂದ 2012ರಲ್ಲಿಯೇ ಗೂಗಲ್ ಸಂಸ್ಥೆ ನೆಕ್ಸಸ್ ಕ್ಯೂ ಎಂಬ ಸಾಧನವನ್ನು ಬಿಡುಗಡೆ ಮಾಡಿತ್ತು. ಈ ಸಾಧನ ಆ್ಯಂಡ್ರಾಯ್ಡ್ ಮೊಬೈಲ್‌ಗಳಲ್ಲಿರುವ ಚಲನಚಿತ್ರ, ಸಂಗೀತ ಮುಂತಾದವನ್ನು ಟಿವಿ ಅಥವಾ ಮ್ಯೂಸಿಕ್ ಸಿಸ್ಟಂಗೆ ವರ್ಗಾಯಿಸಬಲ್ಲದು. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಉತ್ಪನ್ನ ಮಾರುಕಟ್ಟೆಯಿಂದ ನಾಪತ್ತೆಯಾಯಿತು. ಗೂಗಲ್ ವೆಬ್‌ಸೈಟ್‌ನಿಂದಲೂ ಕಾಣೆಯಾಯಿತು.
ನೆಕ್ಸಸ್ ಮೊಬೈಲ್
ಗೂಗಲ್ ಕಂಪನಿ ನೆಕ್ಸಸ್ ಹೆಸರಿನ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದ್ದು ತಿಳಿದಿರಬಹುದು. ಅವು  ಅಷ್ಟೇನೂ ಜನಪ್ರಿಯವಾಗಲಿಲ್ಲ. ಹೀಗಾಗಿ ಅವುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಾಹಸಕ್ಕೆ ಗೂಗಲ್ ಕೈಹಾಕಲಿಲ್ಲ. ಆದರೆ ಅವು ಕೂಡ ಗೂಗಲ್ ಕಂಪನಿಯ ಹಾರ್ಡ್‌ವೇರ್ ಪಟ್ಟಿಯಲ್ಲಿವೆ. ಆದರೆ ನೆಕ್ಸಸ್ ಮೊಬೈಲ್‌ಗಳನ್ನು ತಯಾರಿಸಿಕೊಟ್ಟಿದ್ದು ಎಲ್‌ಜಿ ಕಂಪನಿ.
ಕ್ರೋಮ್ ಪಿಕ್ಸೆಲ್
ಕ್ರೋಮ್ ಬ್ರೌಸರನ್ನೇ ಆಧಾರವಾಗಿಟ್ಟುಕೊಂಡು ಗೂಗಲ್ ಸಂಸ್ಥೆ ಕ್ರೋಮ್ ಆಪರೇಟಿಂಗ್ ಸಿಸ್ಟಂ ಆರಂಭಿಸಿತ್ತು. ಅದನ್ನೇ ಲ್ಯಾಪ್‌ಟಾಪ್‌ಗಳಲ್ಲಿ ಅಳವಡಿಸಿತ್ತು. ಆರಂಭದಲ್ಲಿ ಸ್ಯಾಮಸಂಗ್ ಮುಂತಾದ ಕಂಪನಿಗಳು ಕ್ರೋಮ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದರೆ, ನಂತರ ಗೂಗಲ್ ಕಂಪನಿಯೇ ಗೂಗಲ್ ಕ್ರೇಮ್ ಪಿಕ್ಸೆಲ್ ಹೆಸರಿನಲ್ಲಿ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.
ಈ ಲ್ಯಾಪ್‌ಟಾಪ್‌ಗಳನ್ನು ಗೂಗಲ್ ಸಂಸ್ಥೆ ಖುದ್ದಾಗಿ ತಯಾರಿಸಲಿಲ್ಲವಾದರೂ, ತೈವಾನ್‌ನ ಕಂಪನಿಯೊಂದರಿಂದ ಅದನ್ನು ತಯಾರಿಸಿ, ತನ್ನದೇ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com