ಭಾರತದ ಟಾಪ್ 5 ಮೊಬೈಲ್ ಕಂಪನಿಗಳು

ಭಾರತದ ಟಾಪ್ 5 ಮೊಬೈಲ್ ಕಂಪನಿಗಳು
  1. ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ದೇಶದ ನಂ. ಮೊಬೈಲ್ ಕಂಪನಿ ಎಂಬುದರಲ್ಲಿ ಯಾರಲ್ಲೂ ಅನುಮಾನವಿಲ್ಲ. ಕನಿಷ್ಠ 6 ತಿಂಗಳಿಗೊಂದಾದರೂ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುವುದೇ ಅವರ ಯಶಸ್ಸಿನ ಮಂತ್ರದಂತಿದೆ. 2011-12ರಲ್ಲಿ 7,891 ಕೋಟಿ ಇದ್ದ ಆದಾಯ, 2012-13ರಲ್ಲಿ 11,328 ಕೋಟಿಗೆ ಏರಿದೆ. ಇದು ಶೇ.43.6ರಷ್ಟು ಅಭಿವೃದ್ಧಿಯಾಗಿದ್ದು, ಶೇ.31.5ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
  2. ಅಳಿವು- ಉಳಿವಿನ ನಡುವೆ ಓಲಾಡುತ್ತಿರುವ ಫಿನ್ಲೆಂಡಿನ ನೋಕಿಯಾ ಕಂಪನಿ ನಂ.2ನೇ ಸ್ಥಾನದಲ್ಲಿರುವುದು ಅಚ್ಚರಿ. 2011-12ರಲ್ಲಿ ರು. 11,925 ಕೋಟಿ ಇದ್ದ ಆದಾಯ 2012-13ರಲ್ಲಿ 9,780 ಕೋಟಿಗೆ ಇಳಿದಿದೆ. ಶೇ. -18ರಷ್ಟು ಮಾರುಕಟ್ಟೆ ಕುಸಿತವಾಗಿದ್ದು, ಶೇ.27.2ರಷ್ಟು ಮಾರುಕಟ್ಟೆ ಪಾಲನ್ನು ಕಂಪನಿ ಹೊಂದಿದೆ.
  3. ಕ್ಯಾನ್ವಾಸ್ ಸರಣಿಯ ಮೊಬೈಲ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿರುವ ಮತ್ತು ಕಡಿಮೆ ಮೊತ್ತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಆವರಿಸಿಕೊಂಡಿರುವ ಮೈಕ್ರೋಮ್ಯಾಕ್ಸ್ ಸಂಸ್ಥೆ 3ನೇ ಸ್ಥಾನದಲ್ಲಿದೆ. 2011-12ರಲ್ಲಿ ರು. 1,978 ಕೋಟಿ ಇದ್ದ ಆದಾಯ, 2012-13ರಲ್ಲಿ ರು. 3.138 ಕೋಟಿಗೆ ಏರಿದೆ. ಇದು ಶೇ.58.6ರಷ್ಟು ಅಭಿವೃದ್ಧಿಯಾಗಿದ್ದು, ಶೇ.8.7ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
  4. ಕಾರ್ಬನ್ 4ನೇ ಸ್ಥಾನದಲ್ಲಿರುವುದು ಅಚ್ಚರಿಯ ಸಂಗತಿ. 2011-12ರಲ್ಲಿ 1,327 ಕೋಟಿ ಇದ್ದ ಆದಾಯ 2012-13ರಲ್ಲಿ 2,297 ಕೋಟಿಗೆ ಏರಿದೆ. ಇದು ಶೇ.73.1ರಷ್ಟು ಅಭಿವೃದ್ಧಿಯಾಗಿದ್ದು, ಶೇ.6.4ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
  5. ಅಮೆರಿಕದಲ್ಲಿ ನಂ.1 ಇರಬಹುದು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಆ್ಯಪಲ್ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಾರ್ಬನ್ ಕಂಪನಿಗಿಂತ ನಂತರದ ಸ್ಥಾನದಲ್ಲಿರುವುದು ಅತ್ಯಂತ ಅಚ್ಚರಿಯ ಸಂಗತಿ. ಆದರೆ ತ್ವರಿತಗತಿಯಲ್ಲಿ ಮಾರುಕಟ್ಟೆ ವಿಸ್ತರಿಸುತ್ತಿರುವುದು ಗಮನಾರ್ಹ. 2011-12ರಲ್ಲಿ 250 ಕೋಟಿ ಇದ್ದ ಆದಾಯ, 2012- 13ರಲ್ಲಿ 1,293 ಕೋಟಿಗೆ ಏರಿದೆ. ಇದು ಶೇ.417.2ರಷ್ಟು ಅಭಿವೃದ್ಧಿಯಾಗಿದ್ದು, ಶೇ.3.6ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
ನೋಕಿಯಾ ಕುಂಟುನೆಪ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com