ಸೈಬರ್ ಭದ್ರತಾ ಸಮಾವೇಶದಲ್ಲಿ ಭಾರತ ಮೂಲದ ೮ ವರ್ಷದ ಬಾಲ ಪ್ರತಿಭೆ

ಗುರುವಾರ ಪ್ರಾರಂಭವಾಗಲಿರುವ ಸೈಬರ್ ಭದ್ರತಾ ಸಮಾವೇಶದಲ್ಲಿ ಭಾರತೀಯ ಮೂಲದ ೮ ವರ್ಷದ ಪ್ರತಿಭೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗುರುವಾರ ಪ್ರಾರಂಭವಾಗಲಿರುವ ಸೈಬರ್ ಭದ್ರತಾ ಸಮಾವೇಶದಲ್ಲಿ ಭಾರತೀಯ ಮೂಲದ ೮ ವರ್ಷದ ಪ್ರತಿಭೆ ಸಿಇಒ ರುಬೇನ್ ಪೌಲ್ ಭಾಷಣ ನೀಡಲಿದ್ದಾರೆ. ಪಂಡಿತರು ಭಾಗವಹಿಸುವ ಈ ಸಭೆಯಲ್ಲಿ, ವಿದೇಶಾಂಗ ರಾಜ್ಯ ಸಚಿವ ವಿ ಕೆ ಸಿಂಗ್ ಕೂಡ ಒಬ್ಬ ಭಾಷಣಕಾರರು.

"ನಾನು ಒಂದೂ ವರೆ ವರ್ಷದ ಹಿಂದೆ ಕಂಪ್ಯೂಟರ್ ಭಾಷೆಗಳನ್ನು ಕಲಿಯಲು ಪ್ರಾರಂಭಿಸಿದೆ. ಈಗ ಕಂಪ್ಯೂಟರ್ ಯೋಜನೆಗಳನ್ನು ನಾನೇ ವಿನ್ಯಾಸ ಮಾಡುತ್ತೇನೆ" ಎಂದಿದ್ದಾರೆ ಸದ್ಯ ಅಮೇರಿಕಾ ನಿವಾಸಿ ರುಬೇನ್.

ತನ್ನ ತಂದೆ ಮನೋ ಪೌಲ್ ಅವರಿಂದ ಆಬ್ಜೆಕ್ಟ್ ಸಿ ಪ್ರೋಗ್ರಾಮಿಂಗ್ ಮತ್ತು ಐಒಎಸ್ ನಲ್ಲಿ ಸ್ವಿಫ್ಟ್ ಪ್ರೊಗ್ರಾಮಿಂಗ್ ಕಲಿತಿದ್ದಾರೆ. ಒರಿಸ್ಸಾರಲ್ಲಿ ಹುಟ್ಟಿ ಬೆಳೆದಿದ್ದ ಮನೋ ಪೌಲ್ ೨೦೦೦ ದಲ್ಲಿ ಅಮೆರಿಕಾಕ್ಕೆ ತೆರಳಿದ್ದರು.

ಆಗಸ್ಟ್ ನಲ್ಲಿ 'ಪ್ರೂಡೆಂಟ್ ಗೇಮ್ಸ್" ಹೆಸರಿನ ಗೇಮಿಂಗ್ ಸಂಸ್ಥೆಯನ್ನು ಪ್ರಾರಂಭಿಸಿದ ರೂಬೆನ್ ಈಗ ಆ ಕಂಪನಿಯ ಸಿಇಒ. ಮನೋ ಪೌಲ್ ಸಂಸ್ಥೆಯಲ್ಲಿ ಪಾಲುದಾರ.

"ಇದು ರುಬೇನ್ ಸೈಬರ್ ಭದ್ರತೆಯ ಮೇಲೆ ಭಾಷಣ ನೀಡುತ್ತಿರುವ ನಾಲ್ಕನೇ ಸಮಾವೇಶ. ಮಕ್ಕಳಿಗೆ ಸೈಬರ್ ಭದ್ರತೆಯ ತಿಳುವಳಿಕೆಯ ಬಗ್ಗೆ ಅವನು ಮಾತನಾಡುತ್ತಾನೆ" ಎಂದು ಮನೋ ಪೌಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com