10ರ ಬಾಲೆ ಕಲಿಸ್ತಾಳೆ ಪವರ್ ಪಾಯಿಂಟ್ ಪ್ರೆಸೆಂಟೇಷನ್!

ಪವರ್ ಪಾಯಿಂಟ್ ಪ್ರೆಸೆಂಟೇಷನ್ ಎಂದ ಕೂಡಲೇ ಮಂಡೆಬಿಸಿ ಮಾಡಿಕೊಳ್ಳುವವರೇ ಜಾಸ್ತಿ. ಆದರೆ ಇಲ್ಲಿ ...
ಅರಕ್ಷಿಯಾ & ರಾಜೇಶ್ ಕಾಲ್ರಾ
ಅರಕ್ಷಿಯಾ & ರಾಜೇಶ್ ಕಾಲ್ರಾ

ಕಂಪಾಲಾ: ಪವರ್ ಪಾಯಿಂಟ್ ಪ್ರೆಸೆಂಟೇಷನ್ ಎಂದ ಕೂಡಲೇ ಮಂಡೆಬಿಸಿ ಮಾಡಿಕೊಳ್ಳುವವರೇ ಜಾಸ್ತಿ. ಆದರೆ ಇಲ್ಲಿ ಭಾರತೀಯ ಮೂಲದ ಹತ್ತರ ಹರೆಯದ ಬಾಲಕಿ ಆನ್ಲೈನ್ನಲ್ಲಿ ಪವರ್ಪಾಯಿಂಟ್ ಪ್ರೆಸೆಂಟೇಷನ್ ಹೇಳಿಕೊಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಇದರಲ್ಲೇನಿದೆ ಮಹಾ ಅಂತೀರಾ? ಈಕೆ ಆನ್ಲೈನ್ ಟ್ಯೂಟೋರಿಯಲ್ನಲ್ಲಿ ಹೇಳಿಕೊಡುವ ರೀತಿಯೇ ಮಜಾ ಇರುತ್ತದೆ. ಈ ಮೂಲಕ ಈಕೆ ಆನ್ಲೈನ್ ಸಾಫ್ಟ್ವೇರ್ ಟ್ಯೂಟೋರಿಯಲ್ ಹೇಳಿಕೊಡುವ ಅತೀ ಕಿರಿಯ ಶಿಕ್ಷಕಿ ಎಂಬ ಹೆಗ್ಗಳಿಕೆ ಪಾತ್ರಳಾಗಿದ್ದಾಳೆ.

ಅರಕ್ಷಿಯಾ ಎಂಬ ಹೆಸರಿನ ಈ ಬಾಲಕಿ ತನ್ನ ಅಪ್ಪ ರಾಜೇಶ್ ಕಾಲ್ರಾ ಜತೆ ಸೇರಿ 3ಡಿ ತಂತ್ರಗಳನ್ನು ಬಳಸಿ ಪವರ್ ಪಾಯಿಂಟ್ ಸಾಫ್ಟ್ವೇರ್ನ್ನು ಇಂಟರೆಸ್ಟಿಂಗ್ ಆಗಿ ಕಲಿಸುತ್ತಿದ್ದಾರೆ.

ಅಪ್ಪ ಮಗಳು ಸೇರಿ ಸುಮಾರು 25 ಆನ್ಲೈನ್ ಟ್ಯುಟೋರಿಯಲ್ಗಳನ್ನು ನಿರ್ಮಿಸಿದ್ದು, ಇದಕ್ಕೆ ಹಿನ್ನೆಲೆ ಸಂಗೀತವನ್ನಳವಡಿಸಿ ಕಲಿಕೆಯ ಮಜಾ ತೆಗೆದುಕೊಳ್ಳುವಂತೆ ಮಾಡಿದ್ದಾರೆ.

ಇವರ ಟ್ಯುಟೋರಿಯಲ್ಗಳು RKPhotoMagicTrix.com ವೆಬ್ಸೈಟ್ ನಲ್ಲಿ ಲಭ್ಯವಾಗಿದ್ದು, ಕ್ರಿಸ್ಮಸ್ಗೆ ಮುನ್ನ ವೆಬ್ಸೈಟ್ ಚಾಲನೆಯಾಗಲಿದೆ.

ಅತೀ ಸರಳ ವಿಧಾನದಲ್ಲಿ 3ಡಿ ತಂತ್ರವನ್ನು ಬಳಸುವುದು ಹೇಗೆ ಎಂಬುದನ್ನು ಕಲಿಸಿಕೊಡುವ ಉಚಿತ ಟ್ಯೂಟೋರಿಯಲ್ಗಳು RKPhotoMagicTrix.com ವೆಬ್ಸೈಟ್ನಲ್ಲಿ ಲಭ್ಯವಾಗಲಿವೆ ಎಂದು ಕಾಲ್ರಾ ಹೇಳಿದ್ದಾರೆ.

ಸ್ಟಿಲ್ ಚಿತ್ರಗಳಲ್ಲಿ ಮೋಡಗಳು ಚಲಿಸುವಂತೆ, ಒಂದು ಚಿತ್ರದಿಂದ ಬೇಡದ ವಸ್ತುಗಳನ್ನು ಮಾಯಮಾಡುವಂತೆ, ಹಿನ್ನೆಲೆಯಲ್ಲಿ ವೀಡಿಯೋಗಳನ್ನು ಬಳಸುವ ವಿಧಾನ ಮೊದಲಾದ ತಂತ್ರಗಳನ್ನು ಇಲ್ಲಿ ಸರಳರೀತಿಯಲ್ಲಿ ಹೇಳಿಕೊಡಲಾಗುತ್ತದೆ.

2013ರಲ್ಲಿ RKPhotoMagicTrix.com ನಲ್ಲಿ ಫೋಟೋಶಾಪ್ ಹೇಳಿಕೊಡುವ ಟ್ಯೂಟೋರಿಯಲ್ಗಳನ್ನು ಆರಂಭ ಮಾಡಿದ ಕಾಲ್ರಾ ಇದೀಗ ಮಗಳು ಅರಕ್ಷಿಯಾಳ ಜತೆ ಪವರ್ ಪಾಯಿಂಟ್  ಪ್ರೆಸೆಂಟೇಷನ್ ಹೇಳಿಕೊಡಲು ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com