ಮಂಗಳಯಾನ:೨೦೧೪ ವಿಶ್ವದ ಅತ್ಯುತ್ತಮ ಆವಿಷ್ಕಾರಗಳಲ್ಲೊಂದು

ಟೈಮ್ ನಿಯತಕಾಲಿಕ ಪಟ್ಟಿ ಮಾಡಿರುವ ೨೦೧೪ ರ ಅತ್ಯುತ್ತಮ ಆವಿಷ್ಕಾರಗಳಲ್ಲಿ...
ಮಂಗಳಯಾನದ ಉಡಾವಣೆ
ಮಂಗಳಯಾನದ ಉಡಾವಣೆ
Updated on

ನ್ಯೂಯಾರ್ಕ್: ಟೈಮ್ ನಿಯತಕಾಲಿಕೆ ಪಟ್ಟಿ ಮಾಡಿರುವ ೨೦೧೪ ರ ಅತ್ಯುತ್ತಮ ಆವಿಷ್ಕಾರಗಳಲ್ಲಿ ಭಾರತದ ಮಂಗಳಯಾನಕ್ಕೆ ಸ್ಥಾನ ದೊರೆತಿದೆ.

"ಮಂಗಳ ಗ್ರಹಕ್ಕೆ ಮೊದಲನೇ ಪ್ರಯತ್ನದಲ್ಲೇ ಯಾರಿಗೂ ಯಶಸ್ಸು ದೊರೆತಿಲ್ಲ. ಮೊದಲ ಬಾರಿಗೆ ಅಮೆರಿಕಕ್ಕಾಗಲಿ, ರಶಿಯಾಗಾಗಲಿ, ಯೂರೋಪಿಗಾಗಲಿ ಇದು ಸಾಧ್ಯವಾಗಿಲ್ಲ. ಆದರೆ ಸೆಪ್ಟಂಬರ್ ೨೪ ರಂದು ಭಾರತ ಇದನ್ನು ಸಾಧಿಸಿದೆ. ಅದು ಮಂಗಳಯಾನ... ಕೆಂಪು ಗ್ರಹದ ಕಕ್ಷೆಗೆ ಸೇರಿದೆ. ಯಾವ ಏಶಿಯಾ ದೇಶವೂ ಮಾಡದ ಬಾಹ್ಯಾಕಾಶ ತಂತ್ರಜ್ಞಾನ ಸಾಧನೆ" ಎಂದು ಹೇಳಿರುವ ಟೈಮ್ಸ್ ಪತ್ರಿಕೆ ಅದನ್ನು "ಅತಿ ಜಾಣ ಬಾಹ್ಯಾಕಾಶ ನೌಕೆ" ಎಂದು ಬಣ್ಣಿಸಿದೆ.

ವಿಶ್ವವನ್ನು ಉತ್ತಮ ಪಡಿಸುವಲ್ಲಿ, ಹೆಚ್ಚು ಚುರುಕಾಗಿಸುವಲ್ಲಿ ಹಾಗು ಕೆಲವು ಬಾರಿ ಹೆಚ್ಚು ಸಂತಸಮಯವಾಗಿಸುವಲ್ಲಿ ೨೫ ಅತ್ಯುತ್ತಮ ೨೦೧೪ ರ ಆವಿಷ್ಕಾರಗಳ ಪಟ್ಟಿಯಲ್ಲಿ ಮಂಗಳಯಾನ ಸ್ಥಾನ ಪಡೆದಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಿದ್ಧಪಡಿಸಿರುವ ಮಾರ್ಸ್ ಬಾಹ್ಯಾಕಾಶ ನೌಕೆಗೆ ಕೇವಲ ೭೪ ದಶಲಕ್ಷ ಯು ಎಸ್ ಡಾಲರ್ ವ್ಯಯವಾಗಿದ್ದು, ಇದು ಹಾಲಿವುಡ್ ಸಿನೆಮಾ ಗ್ರಾವಿಟಿ ಚಲನಚಿತ್ರದ ಬಜೆಟ್ ಗಿಂತಲೂ ಕಡಿಮೆ.

ಈ ಪಟ್ಟಿಯಲ್ಲಿ ಭಾರತೀಯರ ಇನ್ನೆರಡು ಆವಿಷ್ಕಾರಗಳೂ ಸ್ಥಾನ ಪಡೆದಿವೆ. ಜೈಲು ಖೈದಿಗಳಿಗೆ ವ್ಯಾಯಾಮ ಪ್ರದೇಶವನ್ನು ಸಿದ್ಧಪಡಿಸಿರುವ ಮತ್ತು ಮಕ್ಕಳಿಗಾಗ ಸಿದ್ಧಪಡಿಸಿರುವ ಟ್ಯಾಬ್ಲೆಟ್ ಆಟಿಕೆ ಆ ಎರಡು ಆವಿಷ್ಕಾರಗಳು.

ದಿನದ ೨೩ ಘಂಟೆಗಳನ್ನು ಗೋಡೆಗಳ ನಡುವೆಯೇ ಕಳೆಯುವ ಜೈಲುವಾಸಿಗಳು ಸಾಮಾನ್ಯವಾಗಿ ಮಾನಸಿಕ ರೋಗಗಳನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಹಿಂಸೆ, ಆತ್ಮಹತ್ಯೆಯ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದರಿಂದ, ಅವರು ವಿಶ್ರಮಿಸಲು ಆರೆಗಾನ್ ನ ಸ್ನೇಕ್ ರಿವರ್ ಕರಕ್ಷನಲ್ ಸಂಸ್ಥೆಯ ಸಹಯೋಗದೊಂದಿಗೆ ಪರಿಸರವಾದಿ ನಳಿನಿ ನಾಡಕರ್ಣಿ ಅವರು "ನೀಲಿ ಕೋಣೆ" ಯ ಯೋಜನೆಯಡಿ ಪ್ರೊಜೆಕ್ಟರ್ ಬಳಸಿ ಖೈದಿಗಳಿಗೆ ಮರಳುಗಾಡಿನ, ಜಲಪಾತಗಳ ಮತ್ತು ಹೊರಾಂಗಣ ದೃಶ್ಯಗಳ ದೃಶ್ಯಾವಳಿಯನ್ನು ತೋರಿಸಲಾಗುತ್ತದೆ.

ಗೂಗಲ್ ಸಂಸ್ಥೆಯ ಮಾಜಿ ಎಂಜಿನಿಯರ್ ಪ್ರಮೋದ್ ಶರ್ಮಾ ಸಿದ್ಧಪಡಿಸಿರುವ "ಆಸ್ಮೋ" ಟ್ಯಾಬ್ಲೆಟ್ ಆಟಿಕೆ ಕೂಡ ಸ್ಥಾನ ಪಡೆದಿರುವ ಆವಿಷ್ಕಾರಗಳಲ್ಲೊಂದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com