ಕೆನಡಾದಲ್ಲಿ ಪ್ರಾಚೀನ ನೀರು ಪತ್ತೆ

೧.೫ಬಿಲಿಯನ್ ವರ್ಷಗಳ ಹಿಂದಿನದು ಎನ್ನಲಾದ ಪ್ರಾಚೀನವಾದ ನೀರನ್ನು...
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಟೊರಾಂಟೊ: ೧.೫ಬಿಲಿಯನ್ ವರ್ಷಗಳ ಹಿಂದಿನದು ಎನ್ನಲಾದ ಪ್ರಾಚೀನವಾದ ನೀರನ್ನು ಕೆನಡಾದ ಗಣಿಯಲ್ಲಿ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಒಂಟಾರಿಯೋದ ಟಿಮ್ಮಿನ್ಸ್ ಗಣಿಯಲ್ಲಿ ಈ ಸಂಶೋಧನೆ ನಡೆದಿದ್ದು, ಭೂಮಿ ಮತ್ತು ಮಂಗಳ ಗ್ರಹಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದಿದ್ದಾರೆ ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿಗಳು.

೧೫. ಬಿಲಿಯನ್ ವರ್ಷಗಳಿಂದ ಭೂಮಿಯ ಹೊರಮೇಲ್ಲ್ಮೈ ನಿಂದ ಪ್ರತ್ಯೇಕವಾಗಿದ್ದ ನೀರನ್ನು ಲ್ಯಾಂಕಸ್ಟರ್ ವಿಶ್ವವಿದ್ಯಾಲಯದ, ಲ್ಯಾಂಕಸ್ಟರ್ ಪರಿಸರ ಕೇಂದ್ರದ ವಿಜ್ಞಾನಿ ಡಾ. ಗ್ರೆಗ್ ಹಾಲೆಂಡ್ ಮತ್ತು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಹಾಗೂ ಇನ್ನೆರಡು ಕೆನೆಡಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪತ್ತೆ ಹೆಚ್ಚಿದ್ದಾರೆ.

ಭೂಮಿಯ ಹೊರಮೇಲ್ಮೈನಿಂದ ಒಂದೂವರೆ ಮೈಲಿ ಅಡಿಯಲ್ಲಿ ಕ್ರಿಸ್ಟಲ್ ಕಲ್ಲಿನಿಂದ ಈ ನೀರನ್ನು ಪತ್ತೆ ಹಚ್ಚಿದ್ದಾರೆ. ಇದು ಬ್ರಹ್ಮಾಂಡದ ರಹಸ್ಯಗಳನ್ನು ಅನಾವರಣಗೊಳಿಸುವುದಕ್ಕೆ ಸಹಾಯ ಮಾಡುವುದು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com