ನೆಟ್ ಆ್ಯಕ್ಟಿವೇಟ್‍ಗೆ ಎಸ್‍ಎಂಎಸ್

ಮೊಬೈಲ್ ಗ್ರಾಹಕರು ಟೋಲ್ ಫ್ರೀ ಸಂಖ್ಯೆ `1925'ಕ್ಕೆ ಎಸ್‍ಎಂಎಸ್ ರವಾನಿಸುವ ಮೂಲಕ ತಮ್ಮ ಮೊಬೈಲ್‍ನ ಇಂಟರ್‍ನೆಟ್‍ನ್ನು ಸ್ಥಗಿತಗೊಳಿಸಬಹುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮೊಬೈಲ್ ಗ್ರಾಹಕರು ಟೋಲ್ ಫ್ರೀ ಸಂಖ್ಯೆ `1925'ಕ್ಕೆ ಎಸ್‍ಎಂಎಸ್  ರವಾನಿಸುವ ಮೂಲಕ ತಮ್ಮ ಮೊಬೈಲ್‍ನ ಇಂಟರ್‍ನೆಟ್‍ನ್ನು ಸ್ಥಗಿತಗೊಳಿಸಬಹುದು ಅಥವಾ ಚಾಲನೆಗೊಳಿಸಬಹುದಾಗಿದೆ.ದೂರ ಸಂಪರ್ಕ ಸೇವಾ ಕಂಪನಿಗಳು ಹೆಚ್ಚಿನ ಆದಾಯ ಗಳಿಸಲು ಇಂಟರ್‍ನೆಟ್ ಸಂಪರ್ಕ ಸ್ಥಗಿತ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿವೆ. ಇದರಿಂದ ಅನಗತ್ಯವಾಗಿ ಹೆಚ್ಚಿನ ಬಿಲ್ ಪಾವತಿಸುವಂತಾಗಿದೆ ಎಂದು ಗ್ರಾಹಕರಿಂದ ಬಂದ ಹಲವಾರು ದೂರುಗಳ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್ ) ಕಂಪನಿಗಳಿಗೆ ಈ ನಿರ್ದೇಶನ ನೀಡಿದೆ.ಇಂಟರ್‍ನೆಟ್ ಸ್ಥಗಿತಗೊಳಿಸುವ ಮತ್ತು ಚಾಲನೆ ನೀಡುವ ಈ ಟೋಲ್‍ ಫ್ರೀ ಸಂಖ್ಯೆಯನ್ನು ಸೆಪ್ಟೆಂಬರ್ 1ರಿಂದ ಚಾಲನೆಗೊಳಿಸಬೇಕು. ಈ ಕುರಿತು ಗ್ರಾಹಕರಿಗೆ ಎಸ್‍ಎಂಎಸ್ ಮೂಲಕ ಮಾಹಿತಿಯನ್ನೂ ನೀಡಬೇಕೆಂದು ಆದೇಶಿಸಿದೆ. ಗ್ರಾಹಕರು 1925ಕ್ಕೆ ಸ್ಟಾರ್ಟ್ ಎಂದು ಎಸ್ ಎಂಎಸ್ ರವಾನಿಸಿದರೆ ಇಂಟರ್‍ನೆಟ್ ಆಕ್ಟಿವೇಟ್ ಆಗಲಿದೆ. ಸ್ಟಾಪ್ ಎಂದು ರವಾನಿಸಿದರೆ ಸ್ಥಗಿತಗೊಳ್ಳಲಿದೆ. ಆಕ್ಟಿವೇಟ್ ಮಾಡಿರುವ ಮತ್ತು ಸ್ಥಗಿತಗೊಳಿಸಿರುವ ಕುರಿತೂ ಕಂಪನಿಗಳು ಗ್ರಾಹಕರಿಗೆ ಮಾಹಿತಿ ನೀಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com