
ಎಣ್ಣೆ ಹೊಡೆಯೋದು ಕೆಲವರಿಗೆ ಮಾತ್ರವೇ ಏಕಾಂತದ ವಿಷ್ಯ. ಬಹುತೇಕರಿಗೆ ಎಣ್ಣೆ ಜೊತೆ ಉಪ್ಪಿನಕಾಯಿ ಇರೋ ಥರಾನೇ, ಎಣ್ಣೆ ಹಾಕೋಕೆ ಒಂದು ಪಟಾಲಂ ಬೇಕೇ ಬೇಕು.
ಒಂದಷ್ಟು ಮಂದಿ ಸಮಾನ ಮನಸ್ಕರು ಸೇರಿಕೊಂಡು, ಹರಟೆ ಹೊಡೀತಾ, ಎಂಜಾಯï ಮಾಡಬೇಕು ಎಂಬುದು ಮದ್ಯಪಾನಿಗಳ ಮಾತು.
ಆದರೆ ಮೆಸಾಚುಸೆಟ್ಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯು ಈ ನಿಟ್ಟಿನಲ್ಲಿ ಹೊಸ ಸಂಶೋಧನೆ ನಡೆಸಿದ್ದು, ಗುಂಡನ್ನು ಗ್ಲಾಸಿಗೆ ಹಾಕಿ ಕೊಡುವಂತಹ ರೊಬೊಗಳನ್ನು ಅಭಿವೃದ್ಧಿಪಡಿಸಿದೆ.
ರೊಬೊ ಮಾತ್ರವೇ ಇರೋದ್ರಿಂದ ಏಕಾಂತವೂ ಸಿಗುತ್ತೆ, ಬೇಜಾರಾದ್ರೆ ರೊಬೊ ಕಂಪನಿಯೂ ಸಿಕ್ಕಂತಾಗುತ್ತೆ ಎನ್ನುವುದು ಗುಂಡುಪ್ರಿಯರಿಗೆ ಉತ್ಸಾಹ ತುಂಬಿದೆಯಂತೆ.
Advertisement