ಕೇವಲ 450 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಮಾರ್ಸ್ ಆರ್ಬಿಟರ್ ಮಿಷನ್ 2013 ನವೆಂಬರ್ 5ರಂದು ಆಂಧ್ರಪ್ರದೇಶದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆಯಾದ ಮಾಮ್ 2014 ಸೆಪ್ಟೆಂಬರ್ 24ರಂದು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಗೆ ಸೇರಿತು. ಆ ಮೂಲಕ ಇಡೀ ವಿಶ್ವದ ಯಾವುದೇ ದೇಶ ಮಾಡದ ಸಾಧನೆಯನ್ನು ಇಸ್ರೋ ಮಾಡಿ ತೋರಿಸಿತ್ತು. ಮೊದಲ ಯತ್ನದಲ್ಲೇ ಮಂಗಳಯಾನ ಯಶಸ್ವಿಗೊಳಿಸಿದ ಏಕೈಕ ರಾಷ್ಟ್ರವೆಂಬ ಖ್ಯಾತಿ ಭಾರತಕ್ಕೆ ಲಭಿಸಿತು.