ಐವಿಎಫ್ ನಿಂದ ಹುಟ್ಟಿದ ಮೊದಲ ನಾಯಿಮರಿಗಳು

ಕಾರ್ನೆಲ್ ವಿಶ್ವವಿದ್ಯಾಲಯ ನಡೆಸಿದ ಮಹತ್ವದ ಸಂಶೋಧನೆಯಲ್ಲಿ ನಾಯಿಯೊಂದು ಇನ್ ವಿಟ್ರೋ ಫರ್ಟಿಲೈಸೇಶನ್ ವಿಧಾನದಲ್ಲಿ ಮರಿಗಳಿಗೆ ಜನ್ಮ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಕಾರ್ನೆಲ್ ವಿಶ್ವವಿದ್ಯಾಲಯ ನಡೆಸಿದ ಮಹತ್ವದ ಸಂಶೋಧನೆಯಲ್ಲಿ ನಾಯಿಯೊಂದು ಇನ್ ವಿಟ್ರೋ ಫರ್ಟಿಲೈಸೇಶನ್ ವಿಧಾನದಲ್ಲಿ ಮರಿಗಳಿಗೆ ಜನ್ಮ ನೀಡಿದೆ.

ಈ ವಿಧಾನದಲ್ಲಿ ೧೯ ಭ್ರೂಣಗಳನ್ನು ಹೆಣ್ಣುನಾಯಿಯೊಂದರೊಳಗೆ ಕಸಿ ಮಾಡಲಾಗಿತ್ತು. ಈ ನಾಯಿ ಏಳು ಆರೋಗ್ಯಕರ ಮರಿಗಳಿಗೆ ಜನ್ಮ ನೀಡಿದೆ.

"೧೯೭೦ ರಿಂದಲು ಸಂಶೋಧಕರು ಐ ವಿ ಎಫ್ ವಿಧಾನದಿಂದ ನಾಯಿಯಲ್ಲಿ ಸಂತಾನೋತ್ಪತ್ತಿ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ" ಎಂದು ಕರ್ನೆಲ್ ಪಶುಸಂಗೋಪನಾ ಚಿಕಿತ್ಸೆ ವಿಭಾಗದ ಅಲೆಕ್ಸ್ ಟ್ರಾವಿಸ್ ತಿಳಿಸಿದ್ದಾರೆ.

ಐ ವಿ ಎಫ್ ವಿಧಾನದಲ್ಲಿ ಅಂಡಾಣು ಮತ್ತು ವೀರ್ಯವನ್ನು ಪ್ರಯೋಗಾಲದಲ್ಲಿ ಒಂದುಗೂಡಿಸಿ ಭ್ರೂಣವನ್ನು ಅಭಿವೃದ್ಧಿಪಡಿಸಿ ನಂತರ ಹೆರುವ ನಾಯಿಯಲ್ಲಿ ಸರಿಯಾದ ಸಮಯಕ್ಕೆ ಕಸಿ ಮಾಡಬೇಕಾಗುತ್ತದೆ.

ಈ ವಿಧಾನ ಯಶಸ್ಸು ಕಂಡಿರುವುದು ಅಳಿವಿನಂಚಿನ ಜೀವಿಗಳನ್ನು ಉಳಿಸಲು ಸಹಾಯಕಾರಿ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com