ಜೊಹಾನ್ಸ್ ಬರ್ಗ್: ಹೊಸವರ್ಷಕ್ಕೆ ವಾಟ್ಸ್ ಆಪ್ ಮೂಲಕ ಬಂಧು ಮಿತ್ರರಿಗೆ ಸಂದೇಶ ಕಳುಹಿಸಲಾಗಲಿಲ್ಲ ಅಂತ ಗೊಣಗಿಕೊಂಡವರಲ್ಲಿ ನೀವೊಬ್ಬರೇ ಅಲ್ಲ, ವಿಶ್ವಾದ್ಯಂತ ಪ್ರತಿಯೊಬ್ಬರಿಗೆ ಈ ಸಮಸ್ಯೆ ಉಂಟಾಗಿದೆ.
ವಿಶ್ವದಾದ್ಯಂತ ಹಲವರಿಗೆ ನಿನ್ನೆ ಅಂದರೆ ಡಿಸೆಂಬರ್ 31ರಂದು ವಾಟ್ಸ್ ಆಪ್ ಮೂಲಕ ಸಂದೇಶ ಕಳುಹಿಸಲು ಸಾಧ್ಯವಾಗಿಲ್ಲ. ಸೇವೆಯಲ್ಲಿ ಅಡಚಣೆಯುಂಟಾಗಿತ್ತು. ಕೆಲ ಸಮಯದವರೆಗೆ ಸೇವೆ ಕಡಿತಗೊಂಡಿತ್ತು. ಹಲವರು ಇದು ತಮ್ಮ ಮೊಬೈಲ್ ನ ಸಮಸ್ಯೆ ಎಂದೇ ಭಾವಿಸಿದ್ದರು. ಆದರೆ ಜನರಿಗೆ ಉಂಟಾಗಿದ್ದ ಸಮಸ್ಯೆಯನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ವಾಟ್ಸ್ ಆಪ್ ವಕ್ತಾರರು ತಿಳಿಸಿದ್ದಾರೆ.
ಆದರೆ ಫೇಸ್ ಬುಕ್ ಅಥವಾ ಟ್ವಿಟ್ಟರ್ ಅಧಿಕೃತ ಪುಟದಲ್ಲಿ ವಾಟ್ಸ್ ಆಪ್ ಈ ಬಗ್ಗೆ ಹೇಳಿಕೆ ನೀಡಿಲ್ಲ.
ಮೊಬೈಲ್ ಎಂದಿನಂತೆ ಕೆಲಸ ಮಾಡುತ್ತಿದ್ದರೂ, ವೈ-ಫೈ ಸಂಪರ್ಕವಿದ್ದರೂ ವಾಟ್ಸ್ ಆಪ್ ಇಂಟರ್ನೆಟ್ ಗೆ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಹೊಸ ವರ್ಷಕ್ಕೆ ಎಲ್ಲರೂ ವಾಟ್ಸ್ ಆಪ್ ನ್ನು ಬಳಸುತ್ತಿದ್ದುದರಿಂದ ಭಾರೀ ಟ್ರಾಫಿಕ್ ಉಂಟಾಗಿ ಕೆಲಕಾಲ ವಾಟ್ಸ್ ಆಪ್ ಸೇವೆ ಸ್ಥಗಿತಗೊಂಡಿತ್ತು. ಇದರ ಅನುಭವ ಅಮೆರಿಕ, ಕೆನಡಾ ಮತ್ತು ಯುರೋಪಿಯನ್ ಪ್ರಜೆಗಳ ಮೇಲೆ ಉಂಟಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕೂಡ ವಾಟ್ಸ್ ಆಪ್ ಬಳಸುತ್ತಿರುವವರು ತಮ್ಮ ಸಂದೇಶ ಕಳುಹಿಸಿದವರಿಗೆ ತಲುಪುತ್ತಿರಲಿಲ್ಲ ಎಂದು ಹೇಳುತ್ತಿದ್ದರು.
Advertisement