
ನವದೆಹಲಿ: ಭಾರತದ ಮೊಬೈಲ್ ಉದ್ದಿಮೆಯಲ್ಲಿ ನಂ. 1ರ ಪಟ್ಟ ಗಿಟ್ಟಿಸಿಕೊಂಡಿರುವ ಮೈಕ್ರೋಮ್ಯಾಕ್ಸ್ ಇದೀಗ ಜನ¸ಸಾಮಾನ್ಯರತ್ತ ದೃಷ್ಟಿನೆಟ್ಟಿದೆ.
ಕಡಿಮೆ ದರಕ್ಕೆ ಅತ್ಯುತ್ತಮ ವಿಶೇಷತೆಯುಳ್ಳ ಸೌಲಭ್ಯವನ್ನು ಕಲ್ಪಿಸುವುದರಲ್ಲಿ ಹೆಸರುವಾಸಿಯಾಗಿದ್ದ ಕಂಪನಿ, ಅತ್ಯಂತ ಕಡಿಮೆ ಬೆಲೆಯ `ಜಾಯ್' ಸರಣಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಹೊಸ ಮಾದರಿಯ ಈ ಸರಣಿಯಲ್ಲಿ ಬೇಸಿಕ್ ಮಾಡೆಲ್‍ನ 2 ಫೋನ್‍ಗಳು ಮಾರುಕಟ್ಟೆ ಪ್ರವೇಶಿಸಿವೆ.
ಜಾಯ್ ಎಕ್ಸ್ 1800ಕ್ಕೆ ರು.699 ಮತ್ತು ಜಾಯ್ ಎಕ್ಸ್ 1850ಕ್ಕೆ ರು.749 ದರ ನಿಗದಿ ಮಾಡಿದೆ. ಈ ಮೂಲಕ ತೀರಾ ಕೆಳವರ್ಗದ ಮಂದಿಯೂ ಮೊಬೈಲ್ ಖರೀದಿಗೆ ಮುಂದಾಗುವಂತೆ ಮಾಡುತ್ತಿದೆ. 1.77 ಇಂಚು ವಿನ್ಯಾಸದಲ್ಲಿ ರಚನೆಯಾಗಿದ್ದು, ಕಲರ್ ಡಿಸ್‍ಪ್ಲೇ ಇದೆ. ಕ್ಯಾಮೆರಾ ಸೌಲಭ್ಯವೂ ಇದೆ.
Advertisement