ಕರೆಂಟ್ ಕಟ್ ಬಗ್ಗೆ ಮಾಹಿತಿ ನೀಡಲು ಬರುತ್ತಿದೆ ಬೆಸ್ಕಾಂ ಆ್ಯಪ್

ಇದ್ದಕ್ಕಿದ್ದಂತೆ ಕರೆಂಟ್ ಕಟ್ ಮಾಡಿ ಅರ್ಧಕ್ಕೆ ವಿದ್ಯುತ್ ಆಧಾರಿತ ಕೆಲಸ ನಿತ್ತು ಹೋದಾಗ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇದ್ದಕ್ಕಿದ್ದಂತೆ ಕರೆಂಟ್ ಕಟ್ ಮಾಡಿ ಅರ್ಧಕ್ಕೆ ವಿದ್ಯುತ್ ಆಧಾರಿತ ಕೆಲಸ ನಿತ್ತು ಹೋದಾಗ, ಬೆಸ್ಕಾಂ ಸಿಬ್ಬಂದಿಗಳನ್ನು ಬಯ್ದುಕೊಳ್ಳುವ ಚಾಳಿ ಇನ್ನು ಮುಂದೆ ತಪ್ಪಲಿದೆ.

ಹೌದು, ಕರೆಂಟ್ ಯಾವ್ಯಾಗ ಹೋಗುತ್ತೆ, ಅನಿಯಮಿತ ವಿದ್ಯುತ್ ಕಡಿತ ಸೇರಿದಂತೆ ಇತರೆ ಮಾಹಿತಿಗಳನ್ನು ಬೆಂಗಳೂರು ವಿದ್ಯುತ್ ಸರಬರಾಜು ಮಂಡಳಿ(ಬೆಸ್ಕಾಂ) ಮುಂಚಿತವಾಗಿಯೇ ನೀಡಲು ನಿರ್ಧರಿಸಿದ್ದು, ಕರೆಂಟ್ ಕಟ್ ಸೇರಿದಂತೆ ಇತರೆ ಮಾಹಿತಿ ನೀಡುವ ಹೊಸ ಮೊಬೈಲ್ ಆ್ಯಪ್‌ವೊಂದನ್ನು ಸಿದ್ಧಪಡಿಸಲು ಬೆಸ್ಕಾಂ ಮುಂದಾಗಿದೆ.

ಇದ್ದಕ್ಕಿದ್ದಂತೆ ಕರೆಂಟ್ ತೆಗೆಯುತ್ತಿದ್ದೀರಿ ಎಂಬ ಗ್ರಾಹಕರ ದೂರುಗಳು ಬರುತ್ತಿವೆ. ಸುದ್ದಿ ಪತ್ರಿಕೆ ಮತ್ತು ಟಿವಿ ಚಾನೆಲ್‌ಗಳಲ್ಲಿ ವಿದ್ಯುತ್ ವ್ಯತ್ಯಯದ ಬಗ್ಗೆ ಮಾಹಿತಿ ನೀಡಿದ್ದರೂ, ಕೆಲವು ಗ್ರಾಹಕರಿಗೆ ಮಾಹಿತಿ ತಲುಪುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್ ಕಾಣಬಹುದು. ಹಾಗಾಗಿ, ಬೆಸ್ಕಾಂ ಹೊಸ ಮೊಬೈಲ್ ಆ್ಯಪ್‌ವೊಂದನ್ನು ಅಭಿವೃದ್ಧಿ ಪಡಿಸುತ್ತಿದ್ದು, ಈ ಮುಖಾಂತರ ಗ್ರಾಹಕರು ವಿದ್ಯುತ್ ವ್ಯತ್ಯಯದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ಪಂಕಜ್ ಕುಮಾರ್ ಹೇಳಿದ್ದಾರೆ.

ಈ ಆಪ್ಲಿಕೇಶನ್‌ನ ತಯಾರಿ ನಡೆಯುತ್ತಿದೆ. ಮೊದಲ ಹಂತದಲ್ಲಿದೆ. ಸ್ಮಾರ್ಟ್ ಫೋನ್ ಬಳಕೆ ಮಾಡುವವರು ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದು. ನಂತರ ಬೆಸ್ಕಾಂ ಮೊಬೈಲ್ ಸಂಖ್ಯೆ ನೀಡಿದ ಗ್ರಾಹಕರಿಗೆ ಈ ಕುರಿತು ಎಸ್‌ಎಂಎಸ್ ಕಳಿಸುವ ವ್ಯವಸ್ಥೆ ರೂಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com