
ನವದೆಹಲಿ: ನಕಲಿ IMEI ನಂಬರ್‌ಗಳನ್ನು ಹೊಂದಿರುವ ಮೊಬೈಲ್ ಫೋನ್‌ಗಳಿಗೆ ನಿಷೇಧ ಹೇರಲು ಭಾರತ ಸರ್ಕಾರ ತೀರ್ಮಾನಿಸಿದೆ.
IMEI (International Mobile Equipment Identity)ಸಂಖ್ಯೆಯನ್ನು ಫಿಂಗರ್ ಪ್ರಿಂಟ್‌ನಂತೆ ನಿಮ್ಮ ಮೊಬೈಲ್ ಫೋನ್‌ಗೆ ಏಕಮಾತ್ರ ಗುರುತು ಎಂದು ಪರಿಗಣಿಸಲ್ಪಡುತ್ತದೆ. ಆದರೆ ನಕಲಿ IMEI ಹೊಂದಿರುವ ಮೊಬೈಲ್ ಫೋನ್‌ಗಳು ಭಾರತಕ್ಕೆ ಆಮದು ಆಗುತ್ತಿವೆ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.
’00..00' IMEI ಸಂಖ್ಯೆಗಳಿರುವ, ಯಾವುದೇ ಗುರುತುಗಳಿಲ್ಲದ, ನಕಲಿ ಐಡಿಗಳನ್ನು ಹೊಂದಿರುವ ಫೋನ್ ಸೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಆದ್ದರಿಂದ ನಕಲಿ ಅಥವಾ ತದ್ರೂಪ ಮಾಡಲಾದ IMEIಗಳನ್ನು ಹೊಂದಿರುವ ಹ್ಯಾಂಡ್‌ಸೆಟ್‌ಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ.
ನಕಲಿ ಹ್ಯಾಂಡ್‌ಸೆಟ್‌ಗಳ ದಂಧೆ ವ್ಯಾಪಕವಾಗಿ ನಡೆಯುತ್ತಿವೆ. ಆದ್ದರಿಂದಲೇ ಸ್ಯಾಮ್‌ಸಂಗ್‌ನಂತಹ ಕಂಪನಿಗಳು ಹೊಸ ಸ್ಮಾರ್ಟ್‌ಫೋನ್‌ಗಳನ್ನು ವಿದೇಶದಲ್ಲಿ ಬಿಡುಗಡೆ ಮಾಡಿದ ಕೂಡಲೇ ಭಾರತದಲ್ಲಿ ಬಿಡುಗಡೆ ಮಾಡಲು ಹೆದರುತ್ತವೆ. ಆ್ಯಪಲ್ ನಂತಹ ದೊಡ್ಡ ಕಂಪನಿಗಳೂ ಇದೇ ಸಮಸ್ಯೆಯನ್ನು ಎದುರಿಸುತ್ತಿವೆ.
ಆದಾಗ್ಯೂ, ನಕಲಿ IMEI ಸಂಖ್ಯೆಗಳನ್ನು ಹೊಂದಿರುವ ಸೆಟ್‌ಗಳು ದೇಶದ ಭದ್ರತೆಗೆ ಕೂಡಾ ಮಾರಕವಾಗಿವೆ. ಆದ್ದರಿಂದ ಸರ್ಕಾರ ನಕಲಿ ಐಂಊಐ ಹೊಂದಿರುವ ಜಿಎಸ್‌ಎಂ ಮೊಬೈಲ್ ಫೋನ್, ನಕಲಿ ESN (Electronic Serial Number)/MEID (Mobile Equipment Identifier) ಹೊಂದಿರುವ ಸಿಡಿಎಂಎ ಫೋನ್‌ಗಳ ಆಮದಿಗೆ ನಿಷೇಧ ಹೇರಿವೆ.
Advertisement