ಐಬಿಎಂನಿಂದ ಆವಿಷ್ಕಾರಿ ಚಿಪ್ ಅಭಿವೃದ್ಧಿ

ಕಂಪ್ಯೂಟರ್ ಕ್ಷೇತ್ರದಲ್ಲಿ ಕಾಂತ್ರಿಯನ್ನೇ ಮಾಡಬಲ್ಲ ಚಿಪ್‍ವೊಂದನ್ನು ಐಬಿಎಂ ಕಂಪ್ಯೂಟರ್ಸ್ ಅಭಿವೃದ್ಧಿಪಡಿಸಿದೆ...
ಮೈಕ್ರೋಪ್ರೋಸೆಸರ್
ಮೈಕ್ರೋಪ್ರೋಸೆಸರ್

ನ್ಯೂಯಾರ್ಕ್: ಕಂಪ್ಯೂಟರ್ ಕ್ಷೇತ್ರದಲ್ಲಿ ಕಾಂತ್ರಿಯನ್ನೇ ಮಾಡಬಲ್ಲ ಚಿಪ್‍ವೊಂದನ್ನು ಐಬಿಎಂ ಕಂಪ್ಯೂಟರ್ಸ್ ಅಭಿವೃದ್ಧಿಪಡಿಸಿದೆ.

ಇದು ಕಂಪ್ಯೂಟರ್ ಕ್ಷೇತ್ರದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ 7 ನ್ಯಾನೇಮೀಟರ್ ಗಳ ಚಿಪ್ ಆಗಿದೆ. ಈ ಚಿಪ್ 20 ಶತಕೋಟಿ ಟ್ರಾನ್ಸಿಸ್ಟರ್‍ಗಳನ್ನು ಹಿಡಿದಿಟ್ಟುಕೊಳ್ಳುವ ಈ
ಮೂಲಕ ಕಂಪ್ಯೂಟರ್‍ನ ವೇಗ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಭವಿಷ್ಯದ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಭಾರೀ ಡಾಟಾ ಸಿಸ್ಟಂಗಳು, ಕಾಗ್ನಿಟಿವ್ ಕಂಪ್ಯೂಟಿಂಗ್, ಮೊಬೈಲ್ ಉತ್ಪನ್ನಗಳು, ಇತರೆ ಆವಿಷ್ಕಾರಿ ಉತ್ಪನ್ನಗಳ ಬೇಡಿಕೆಯನ್ನು ಪೂರೈಸಲು ಈ ಚಿಪ್‍ಗಳು ನೆರವಾಗಲಿವೆ ಎಂದು ಐಬಿಎಂ ಹೇಳಿದೆ.

ಈಗ ಮಾರುಕಟ್ಟೆಯಲ್ಲಿರುವ ಬಹುತೇಕ ಚಿಪ್‍ಗಳು 14ರಿಂದ 22 ನ್ಯಾನೇಮಿಟರ್ ಮೈಕ್ರೋಪ್ರೋಸೆಸರ್ ಗಳನ್ನು ಬಳಸುತ್ತಿವೆ. ಈ ಹೊಸ ಚಿಪ್‍ನಿಂದಾಗಿ ಕಂಪ್ಯೂಟಿಂಗ್‍ನ ಸಾಧನೆ ಕನಿಷ್ಠ ಶೇ.50ರಷ್ಟು ಹೆಚ್ಚಾಗಲಿದೆ ಎಂದು ಕಂಪನಿ ಅಬಿsಪ್ರಾಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com