ಪ್ಲೂಟೋ ಮೇಲೆ ಮಂಜಿನ ಪರ್ವತ ಪತ್ತೆ

ಕುಬ್ಜಗ್ರಹ ಪ್ಲೂಟೋದ ಸಮೀಪದರ್ಶನ ಮಾಡಿಬಂದಿರುವ ನಾಸಾ ದ ನ್ಯೂ ಹೊರೈಜನ್ ಗಗನನೌಕೆ ಅಲ್ಲಿನ ವಾತಾವರಣದ ಕುರಿತು ಒಂದೊಂದೇ...
ಪ್ಲೂಟೋದ ಮೇಲೆ ಮಂಜುಗಡ್ಡೆಯ ಪರ್ವತಗಳು
ಪ್ಲೂಟೋದ ಮೇಲೆ ಮಂಜುಗಡ್ಡೆಯ ಪರ್ವತಗಳು

ವಾಷಿಂಗ್ಟನ್: ಕುಬ್ಜಗ್ರಹ ಪ್ಲೂಟೋದ ಸಮೀಪದರ್ಶನ ಮಾಡಿಬಂದಿರುವ ನಾಸಾ ದ ನ್ಯೂ ಹೊರೈಜನ್ ಗಗನನೌಕೆ ಅಲ್ಲಿನ ವಾತಾವರಣದ ಕುರಿತು ಒಂದೊಂದೇ ಆಸಕ್ತಿಕರ ಮಾಹಿತಿ ಪ್ರಕಟಿಸಲಾರಂಭಿಸಿದೆ. ಪ್ಲೂಟೋದ ಮೇಲೆ ಮಂಜುಗಡ್ಡೆಯ ಪರ್ವತಗಳು ಇರುವುದನ್ನು ಪತ್ತೆಹಚ್ಚಿರುವ ಸ್ಪೇಸ್‍ಕ್ರಾಫ್ಟ್ , ಆ ಹಿಮಪರ್ವತಗಳು ಕನಿಷ್ಠ 10ಕೋಟಿ ವರ್ಷ ಪುರಾತನದ್ದು ಹಾಗೂ ಒಂದೊಂದು ಪರ್ವತಗಳೂ ಸರಾಸರಿ 11ಸಾವಿರ ಅಡಿ ಎತ್ತರವಿದೆಯೆಂದು ತಿಳಿಸಿ ದೆ. ಅತ್ಯಂತ ಹತ್ತಿರದಿಂದ ಸೆರೆಹಿಡಿದಿರುವ ಚಿತ್ರಗಳನ್ನು ಕಳಿಸಿರುವ ಹೊರೈಜನ್ ನೋಡಿರುವ ನಾಸಾ ತಂಡ, ಈ ಮಾದರಿಯ ಮಂಜುಗಡ್ಡೆಯ ಪರ್ವತಗಳು ನಿರ್ಮಾಣವಾಗಲು ಪ್ಲೂಟೋ ಮೇಲಿರುವ ಶೀತಜಲದ ಬೆಡ್‍ರಾಕ್ ಕಾರಣವೆಂದು ಅಂದಾಜಿಸಿದೆ. ಕೇವಲ 77ಸಾವಿರ ಕಿಮೀ ದೂರದಿಂದ ತೆಗೆದಿರುವ ಪ್ಲೂಟೋದ ಚಿತ್ರಗಳು ಇನ್ನಷ್ಟು ಹೊಸವಿಚಾರಗಳನ್ನು ಹೊರಗೆಡವಲಿದೆ ಎಂದಿರುವ ನಾಸಾ ಖಗೋಳವಿಜ್ಞಾನ ಆಸಕ್ತರಲ್ಲಿ ನಿರೀಕ್ಷೆ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com