ಭೂಮಿಯ ಸಮೀಪ ಆಕಾಶಕಾಯವೊಂದು ಹಾದುಹೋಗಲಿದೆ ನೋಡಿ

ನಕ್ಷತ್ರವೀಕ್ಷಕರಿಗೆ ಸಂಭ್ರಮದ ವಿಚಾರ. ಭಾನುವಾರ ಬೃಹತ್ ಆಕಾಶಕಾಯವೊಂದು (ಆಸ್ಟೆರಾಯ್ಡ್) ಭೂಮಿಯ ಸಮೀಪ ಹಾದುಹೋಗಲಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ನಕ್ಷತ್ರವೀಕ್ಷಕರಿಗೆ ಸಂಭ್ರಮದ ವಿಚಾರ. ಭಾನುವಾರ ಬೃಹತ್ ಆಕಾಶಕಾಯವೊಂದು (ಆಸ್ಟೆರಾಯ್ಡ್) ಭೂಮಿಯ ಸಮೀಪ ಹಾದುಹೋಗಲಿದೆ.

ಭಾರತದಲ್ಲಿ ಜನ ಈ ಆಕಾಶಕಾಯವನ್ನು ಸೋಮವಾರ ಬೆಳಗ್ಗೆ ೪ ಘಂಟೆಗೆ ಅಂತರ್ಜಾಲದಲ್ಲಿ ನೇರ ವೀಕ್ಷಣೆ ಮಾಡಬಹುದಾಗಿದೆ.

ಯುಡಬ್ಲ್ಯು-೧೫೮ ಎಂದು ಕರೆಯಲಾಗಿರುವ ಈ ಆಕಾಶಕಾಯ ೯೦ ಮಿಲಿಯನ್ ಟನ್ ತೂಕದ ಕೋರ್ ಹೊಂದಿದ್ದು, ೫ ಟ್ರಿಲಿಯನ್ ಡಾಲರ್ ಮೊತ್ತದ ಪ್ಲಾಟಿನಮ್ ಹೊಂದಿದೆ ಎನ್ನಲಾಗಿದೆ. ಭಾರತಕ್ಕೆ ಸಮೀಪವಿರುವ ಗ್ರಹಕ್ಕಿಂತ ೩೦ರಷ್ಟು ಸಮೀಪದಲ್ಲಿ ಈ ಆಕಾಶಕಾಯ ಚಲಿಸಲಿದೆ ಎಂದು 'ದ ಮಿರರ್' ವರದಿ ಮಾಡಿದೆ.

ಟೆಲಿಸ್ಕೋಪ್ ಗಳನ್ನು ಅಂತರ್ಜಾಲಕ್ಕೆ ಸಂಪರ್ಕಿಸುವ ಯೋಜನೆ 'ಸ್ಲೂ' ಈ ಘಟನೆಯ ದೃಶ್ಯಗಳನ್ನು ಪ್ರಸಾರ ಮಾಡಲಿದೆ.

"ನಮ್ಮ ಪರಿಸರದ ಪಕ್ಕ ಆಕಾಶಕಾಯವೊಂದು ಹಾದುಹೋಗುವುದು ಬೆರಗಿನ ವಿಚಾರ. ಅಲ್ಲದೆ ಮುಂದೊಂದು ದಿನ ಆ ಆಕಾಶಕಾಯದಲ್ಲಿ ಇರಬಹುದಾದ ಪ್ಲಾಟಿನಮ್ ಗಣಿಯನ್ನು ಹೊರತೆಗೆಯಬದುದು" ಎಂದು ಸ್ಲೂ ಖಗೋಳಶಾಸ್ತ್ರಜ್ಞ ಬಾಬ್ ಬರ್ಮನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com