ರು.100 ಸಾವಿರ ಕೋಟಿ ಪ್ಲಾಟಿನಿಯಂ ನಿಕ್ಷೇಪದ ಕ್ಷುದ್ರಗ್ರಹ ದರ್ಶನ ಅವಕಾಶ

ಭಾನುವಾರ ರಾತ್ರಿ ಕಪ್ಪು ಆಗಸದಲ್ಲಿ ಭಾರಿ ಬೆಳಕಿನ ಚಿತ್ತಾರ ನೋಡುವ ಅವಕಾಶ. ಮಳೆ ಕಾಟ ಕೊಡದಿದ್ದಲ್ಲಿ, ಕರಿಮೋಡ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಭಾನುವಾರ ರಾತ್ರಿ ಕಪ್ಪು ಆಗಸದಲ್ಲಿ ಭಾರಿ ಬೆಳಕಿನ ಚಿತ್ತಾರ ನೋಡುವ ಅವಕಾಶ. ಮಳೆ ಕಾಟ ಕೊಡದಿದ್ದಲ್ಲಿ, ಕರಿಮೋಡ ಆಕಾಶವನ್ನು ಆವರಿಸಿಕೊಳ್ಳ ದಿದ್ದಲ್ಲಿ ನಕ್ಷತ್ರ ವೀಕ್ಷಣೆಯ ಆಸಕ್ತಿ ಇರುವವರಿಗೆ ಬೃಹತ್ ಗಾತ್ರದ ಕ್ಷುದ್ರಗ್ರಹವೊಂದನ್ನು ನೋಡಿ ಕಣ್ತುಂಬಿಸಿ ಕೊಳ್ಳುವ ಭಾಗ್ಯ ಒದಗಲಿದೆ.

ಆಸ್ಟೆರಾಯ್ಡ್ ಯುವಿ-158 ಎಂಬ 90ದಶಲಕ್ಷ ಟನ್ ಭಾರದ ಈ ಕ್ಷುದ್ರಗ್ರಹ ಭೂಮಿಗೆ ಅತ್ಯಂತ ಸನಿಹದಲ್ಲಿ ಹಾದುಹೋಗಲಿದೆ. ಭೂಮಿಗೆ ಅತಿ ಹತ್ತಿರ ಇರುವುದು ಬುಧಗ್ರಹ. ಬುಧಗ್ರಹಕ್ಕಿಂತ 30ಪಟ್ಟು ಹತ್ತಿರದಿಂದ ಈ ಕ್ಷುದ್ರಗ್ರಹ ಹಾದುಹೋಗುತ್ತಿರುವುದರಿಂದ ಬರಿಗಣ್ಣಿನ ವೀಶೇಷಣೆಗೆ ಲಭ್ಯವಾಗಲಿದೆ.

ಬ್ರಿಟನ್‍ನಲ್ಲಿ ಭಾನುವಾರ ರಾತ್ರಿ 11ಕ್ಕೆ ದರ್ಶನ ಸಿಗಲಿದ್ದು, ಭಾರತೀಯರು ಸೋಮವಾರ ಬೆಳಗಿನಜಾವ 4ಕ್ಕೆ ಅಂತರ್ಜಾಲದಲ್ಲಿ ಈ ಅಪರೂಪದ ಗಳಿಕೆಯನ್ನು ವೀಕ್ಷಿಸಬಹುದಾಗಿದೆ. ಈ ಕ್ಷುದ್ರಗ್ರಹದಲ್ಲಿ ಸುಮಾರು ರು.100 ಸಾವಿರ ಕೋಟಿ ಮೌಲ್ಯದ ಪ್ಲಾಟಿನಿಯಂ ಖನಿಜದ ಸಂಗ್ರಹ ಇರಬಹುದೆಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com