
ವಾಷಿಂಗ್ಟನ್: ಪ್ಲೂಟೊ ಗ್ರಹದ ಸನಿಹದಲ್ಲೇ ಸುಳಿದಾಡುತ್ತಿರುವ ನಾಸಾದ ನ್ಯೂ ಹೊರೈಜನ್ ಗಗನನೌಕೆ ಇದೀಗ ಗ್ರಹದ ಹೃದಯ ಭಾಗದ ಮೇಲೆ ಸುಮಾರು 100ದಶಲಕ್ಷ ವರ್ಷ ಪುರಾತನವಾದ ಕುಳಿಗಳೇ ಇಲ್ಲದ ಮಟ್ಟಸ ಬಯಲೊಂದನ್ನು ಪತ್ತೆ ಮಾಡಿದೆ.
ಇದು ಪ್ಲೂಟೋದ ಹಿಮ ಪರ್ವತಗಳ ಉತ್ತರಭಾಗದಲ್ಲಿ ಕಂಡುಬಂದಿದ್ದು ಅದನ್ನು ಸದ್ಯಕ್ಕೆ ಟೊಂಬಾಫ್ ಪ್ರದೇಶ ವೆಂದು ಕರೆಯಲಾಗಿದೆ. ಪ್ಲೂಟೋದ ಫ್ಲೈಬೈ ಮಾಡುವ ಮುನ್ನ ಕುಬ್ಜ ಗ್ರಹದಿಂದ ಇಷ್ಟೆಲ್ಲ ಅಚ್ಚರಿ ಮಾಹಿತಿ ಸಿಗುವ ನಿರೀಕ್ಷೆಯೂ ಇರಲಿಲ್ಲ. ಅದರಲ್ಲೂ ಈ ಕುಳಿರಹಿತ ಬಯಲನ್ನು ಪತ್ತೆಹಚ್ಚಿದ್ದು ಹೆಮ್ಮೆಯೆನಿಸುತ್ತಿದೆ ಎಂದು ನಾಸಾದ ನ್ಯೂ ಹೊರೈಜನ್ ತಂಡದ ಜೆಫ್ ಮೂರೆ ಹೆಮ್ಮೆಪಟ್ಟಿದ್ದಾರೆ.
ಈ ಬಯಲುಪ್ರದೇಶದ ಮೇಲೆ ಮೈಲುಗಟ್ಟಲೆ ಉದ್ದದ ಕಪ್ಪು ಗೆರೆಗಳು, ಎಲ್ಲವೂ ಒಂದೇ ದಿಕ್ಕಿಗೆ ನಿರ್ದೇಶಿ ಸಲ್ಪಟ್ಟಿವೆ ಎನ್ನುವ ತಂಡ, ಮೇಲ್ಮೈಯಲ್ಲಿ ಬೀಸುವ ಶೀತಗಾಳಿಯಿಂದಾಗಿ ಈ ಗೆರೆಗಳು ಸೃಷ್ಟಿಯಾಗಿರಬಹುದು ಎಂದು ಅಂದಾಜಿಸಿದೆ.
Advertisement