
ವಾಷಿಂಗ್ಟನ್: ತಿಂಗಳುಗಳಿಂದ ಒಂದೊಂದೇ ಹೊಸವಿಷಯಗಳೊಂದಿಗೆ ಕುತೂಹಲ ಹುಟ್ಟಿಸುತ್ತಿದ್ದ ಮೈಕ್ರೋಸಾಪ್ಟ್ ನ ಬಹುನಿರೀಕ್ಷೆಯ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಈ ಹೊತ್ತಿಗೆ ಹಲವು ಕಂಪ್ಯೂಟರ್‍ಗಳಲ್ಲಿ ಸ್ಥಾಪಿತವಾಗಿರುತ್ತದೆ. ಜು.29 ರಂದು ಬಿಡುಗಡೆ ಎಂದು ದಿನಾಂಕ ಘೋಷಿಸುವ ಹೊತ್ತಿಗೆ ಅದರ ಸೌಲಭ್ಯಗಳು, ವಿಶೇಷಗಳು, ಮಿತಿಗಳು, ನಿಯಮ ನಿಬಂಧನೆಗಳು ಎಲ್ಲವೂ ಕಂತುಗಳಲ್ಲಿ ದಿನಕ್ಕೊಂದಿಷ್ಟು ಬಿಡುಗಡೆಯಾಗುತ್ತಿತ್ತು. ಇದೀಗ ಕಾಯುವಿಕೆ ಮುಗಿದಿದ್ದು ಪೂರ್ವ ನೋಂದಣಿ ಮಾಡಿದ ಅಧಿಕೃತ ವಿಂಡೋಸ್ 7 ಮತ್ತು 8 ಆಪರೇಟಿಂಗ್ ಸಿಸ್ಟಮ್ ಇರುವ ಕಂಪ್ಯೂಟರ್‍ಗಳು ಈಗಾಗಲೇ ವಿಂಡೋಸ್ 10 ಗೆ ಅಪ್‍ಡೇಟ್ ಕೂಡ ಆಗಿರುತ್ತವೆ. ಇಲ್ಲದಿದ್ದಲ್ಲಿ ಆ ಕಂಪ್ಯೂಟರ್‍ಗಳು ಅಪ್‍ಡೇಟ್‍ಗೆ ಸೂಚನೆ
ನೀಡಲಾರಂಭಿಸಿರುತ್ತವೆ.
ಇನ್‍ಸ್ಟಾಲ್ ಹೇಗೆ?: ನೋಂದಣಿ ಮಾಡಿಸಿರುವ ವಿಂಡೋಸ್ 7 ಮತ್ತು 8 ಸಿಸ್ಟಮ್ ಗಳಲ್ಲಿ ಈಗಾಗಲೇ ಸಾಫ್ಟ್ ವೇರ್ ಡೌನ್‍ಲೋಡ್ ಕೂಡ ಆಗಿರುತ್ತದೆ. ಇ: $windows.~BT ಮಾರ್ಗದಲ್ಲಿ ವಿಂಡೋಸ್ 10ನ ಎಲ್ಲ ಫೈಲ್‍ಗಳು ಬಂದು ಕಾದಿದ್ದು, ದಿನಾಂಕ 29ಕ್ಕೆ ಹೊರಳುತ್ತಿದ್ದಂತೆಯೇ ವಿಂಡೋಸ್ 10 ಇನ್‍ಸ್ಟಾಲ್ ಮಾಡಲು ಸರ್ವರೀತಿಯಲ್ಲೂ ಸಿದ್ಧವಾಗಿಬಿಡುತ್ತದೆ.
ವಿದಾಯ ಹೇಳಿದ ಗೂಗಲ್ ಪ್ಲಸ್ : ಫೇಸ್‍ಬುಕ್ ಗೆ ಪ್ರತಿಸ್ಪರ್ಧೆ ನೀಡಲು ಗೂಗಲ್‍ನವರೇ ನಾಲ್ಕು ವರ್ಷದ ಹಿಂದೆ ಪ್ರಾರಂಭಿಸಿದ್ದ ಗೂಗಲ್ ಪ್ಲಸ್ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಗುಡ್‍ಬೈ ಹೇಳಿದೆ. 4ವರ್ಷಗಳಲ್ಲಿ ಗೂಗಲ್‍ಪ್ಲಸ್ ಹಲವು ಅಪ್‍ಡೇಟ್‍ಗಳೊಂದಿಗೆ ಫೇಸ್‍ಬುಕ್‍ಗೆ ಸ್ಪರ್ಧೆ ನೀಡಲು ಪ್ರಯತ್ನಿಸಿದ್ದರೂ ಸಾಧ್ಯವಾಗದೆ, ಅಂತಿಮವಾಗಿ ಕೈಚೆಲ್ಲಿದೆ. 2013ರಲ್ಲಿ ಸುಮಾರು 30ಕೋಟಿ ಸದಸ್ಯರಿದ್ದ ಗೂಗಲ್ ಪ್ಲಸ್ ಕಳೆದ ಏಪ್ರಿಲ್ ಹೊತ್ತಿಗೆ 11ಕೋಟಿಗೆ ಇಳಿದದ್ದು ಅದರ ವೈಫಲ್ಯಕ್ಕೆ ಸಾಕ್ಷಿಯಾಗಿತ್ತು. ಆದರೆ ಗೂಗಲ್‍ಪ್ಲಸನ್ನು ಈಗ ಎರಡು ಹೋಳಾಗಿಸಿ ಫೋಟೋ ಮತ್ತು ವಿಡಿಯೋಗೆ ಪ್ರತ್ಯೇಕ ಫೋರ್ಟಲ್ ನೀಡಲು ನಿರ್ಧರಿಸಿದೆ.
ಬಂದಿದೆ ಮೈಕ್ರೋಸಾಫ್ಟ್ ನ ಆಂಡ್ರಾಯ್ಡ್ ಲಾಂಚರ್
ವಿಂಡೋಸ್ ವೇದಿಕೆಯ ಮೇಲೆ ಹೆಚ್ಚು ಆಟವಾಡುತ್ತಿದ್ದ ಮೈಕ್ರೋಸಾಫ್ಟ್ ಇದೀಗ ಆ್ಯಂಡ್ರಾಯ್ಡ್ ಪ್ಲಾಟ್ ಫಾರ್ಮ್ ಅನ್ನೂ ಬಳಸಲು ಸಿದ್ಧವಾಗಿದೆ. ಆ್ಯರೋ ಲಾಂಚರ್ ಬೀಟಾ ಎಂಬ ಬೇಸಿಕ್ ಆ್ಯಂಡ್ರಾಯ್ಡ್ ಲಾಂಚರ್ ಹೊರತರುತ್ತಿರುವ ಮೈಕ್ರೋಸಾಫ್ಟ್ ಇದರಡಿಯಲ್ಲಿ ಹಲವು ಆ್ಯಪ್ ಬಿಡುಗಡೆ ಮಾಡಲು ಆಲೋಚಿಸಿದೆ. ಇನ್ನೂ ತಯಾರಿ ಹಂತದಲ್ಲೇ ಇದನ್ನು ಬಿಡುಗಡೆ ಮಾಡಲಾಗಿದ್ದು, ನಿರೀಕ್ಷೆಯಂತೆಯೇ ಹಲವು ಬಗ್‍ಗಳು ಕಾಣಿಸಿ ಕೊಂಡಿವೆ. ನೋಟ್ ಮತ್ತು ರಿಮೈಂಡರ್ ಪೇಜ್ ಥರದ ಸೌಲಭ್ಯಗಳು ಮಾತ್ರ ಸದ್ಯಕ್ಕೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸೇರ್ಪಡೆ ಗಳಾಗಲಿವೆ ಎಂದು ಮೈಕ್ರೋಸಾಪ್ಟ್ ತಿಳಿಸಿದೆ.
Advertisement