
ಲಂಡನ್: ಫೋಟೊ ಹಂಚಿಕೆ ಆಪ್ ಇನ್ ಸ್ಟಾಗ್ರಾಮ್ ಗಾಡೆಸ್(ದೇವತೆ) ಎಂಬ ಹ್ಯಾಶ್ ಟ್ಯಾಗ್ ನ್ನು ನಿಷೇಧಿಸಿದೆ.
ಗಾಡೆಸ್ ಹ್ಯಾಶ್ ಟ್ಯಾಗ್ ನಲ್ಲಿ ಅನುಚಿತ ಚಿತ್ರಗಳು ಶೇರ್ ಆಗುತ್ತಿದ್ದ ಕಾರಣ ಇನ್ ಸ್ಟಾಗ್ರಾಮ್ ಈ ಕ್ರಮ ಕೈಗೊಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಈ ತಿಂಗಳ ಪ್ರಾರಂಭದಲ್ಲಿ ಕರ್ವಿ(curvy ) ಎಂಬ ಹ್ಯಾಶ್ ಟ್ಯಾಗನ್ನೂ ಸಹ ಇನ್ ಸ್ಟಾಗ್ರಾಮ್ ನಿಷೇಧಿಸಿತ್ತು, ಆದರೆ ಕಳೆದ ವಾರವಷ್ಟೇ ಅದನ್ನು ಬಳಸಲು ಮತ್ತೆ ಅನುಮತಿ ನೀಡಿದೆ. ಇನ್ ಸ್ಟಾಗ್ರಾಮ್ ಸಮುದಾಯದ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಚಿತ್ರ ಹಾಗೂ ವಿಡಿಯೋಗಳನ್ನು ಹಂಚಿಕೆ ಮಾಡುವ ಹ್ಯಾಷ್ ಟ್ಯಾಗ್ ಗಳನ್ನು ಮಾತ್ರ ನಿಷೇಧಿಸುತ್ತೇವೆ ಎಂದು ಕಂಪನಿಯ ವಕ್ತಾರರು ಹೇಳಿರುವುದನ್ನು ಡೈಲಿ ಮೇಲ್ ವರದಿ ಮಾಡಿದೆ.
ಗಾಡೆಸ್ ಹ್ಯಾಶ್ ಟ್ಯಾಗ್ ನ್ನು ನಿಷೇಧಿಸಿರುವುದಕ್ಕೆ ಬಳಕೆದಾರರಿಂದ ವಿರೋಧ ವ್ಯಕ್ತವಾಗಿದ್ದು ಇದನ್ನು ಮಹಿಳಾ ವಿರೋಧಿ ಕ್ರಮ ಎಂದು ಆರೋಪಿಸಿದ್ದಾರೆ. ಆದರೆ ಸಂಸ್ಥೆ ಮಾತ್ರ ತನ್ನ ಕ್ರಮವನ್ನು ನಿಯಮಗಳ ಕಾರಣ ನೀಡಿ ಸಮರ್ಥಿಸಿಕೊಂಡಿದೆ.
Advertisement