
ವಾಶಿಂಗ್ ಟನ್: ಫ್ಲೋರಿಡಾದ ಅಳಿವೆಯಲ್ಲಿ (ಹಿನ್ನೀರು ಸಮುದ್ರ ಸೇರುವ ಪ್ರದೇಶ) ವಾಸಿಸುವ ಕೆಲವು ಸಾಫಿಶ್ ಗಳು (ಗರಗಸ ಮೀನುಗಳು) ಯಾವುದೇ ಲೈಂಗಿಕ ಕ್ರಿಯೆ ಇಲ್ಲದೆ ಸಂತಾನಭಿವೃದ್ಧಿ ನಡೆಸಿರುವ ವಿಚಿತ್ರ-ವಿಶೇಷ ಘಟನೆ ಬೆಳಕಿಗೆ ಬಂದಿದೆ. ವನ್ಯ ಕಶೇರುಕಗಳಲ್ಲಿ ಈ ರೀತಿಯ ಸಂತಾನಾಭಿವೃದ್ಧಿ ಬೆಳಕಿಗೆ ಬಂದಿರುವುದು ಇದೇ ಮೊದಲ ಬಾರಿ ಎಂದು ಜರ್ನಲ್ ಸೆಲ್ ಪ್ರೆಸ್ ವರದಿ ಮಾಡಿದೆ.
ಲೈಂಗಿಕ ಕ್ರಿಯೆ ಇಲ್ಲದ ಸಂತಾನಾಭಿವೃದ್ಧಿ ಅಕಶೇರುಕಗಳಲ್ಲಿ ಕಂಡುಬರುವುದು ಸಾಮಾನ್ಯ ಹಾಗು ಗಂಡಿನ ಜೊತೆ ಲೈಂಕಿಕ ಕ್ರಿಯೆ ನಡೆಸಲಾಗದ ಮತ್ತು ಬಂಧನದಲ್ಲಿರುವ ಕೆಲವೇ ಕೆಲವು ಕಶೇರುಕಗಳಲ್ಲಿ ಅತಿ ವಿರಳವಾಗಿ ಈ ಕ್ರಿಯೆ ನಡೆಯುತ್ತದೆ.
ಫ್ಲೋರಿಡಾದ ಅಳಿವೆಗಳಲ್ಲಿ ಬದುಕುವ ಕೆಲವು ಹೆಣ್ಣು ಸಾಫಿಷ್ ಗಳು ಯಾವುದೇ ಗಂಡು ಸಾಫಿಶ್ ಗಳ ಜೊತೆ ಲೈಂಗಿಕ ಕ್ರಿಯೆ ನಡೆಸದೆ ಸಂತಾನಾಭಿವೃದ್ಧಿ ಮಾಡುವುದನ್ನು ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಫ್ಲೋರಿಡಾ ಮೀನು ಮತ್ತು ವನ್ಯಮೃಗ ಸಂರಕ್ಷಣಾ ಸಮಿತಿಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಅಳಿವಿನಿಂಚಿನ ಪ್ರಾಣಿಗಳ ಪಟ್ಟಿಯಲ್ಲಿರುವ ಈ ಸಣ್ಣ ಹಲ್ಲಿನ ಗರಗಸ ಮೀನುಗಳ ಮೇಲೆ ಸಂಶೋಧನೆ ನಡೆಸುವಾಗ ಈ ಅಭೂತಪೂರ್ವ ಪ್ರಕ್ರಿಯೆ ಬೆಳಕಿಗೆ ಬಂದಿರುವುದು ವಿಜ್ಞಾನಿಗಳನ್ನು ಆಶ್ಚರ್ಯಚಕಿತಗೊಳಿಸಿದೆ. ವಿಪರೀತ ಮೀನುಗಾರಿಕೆ ಮತ್ತು ಸಮುದ್ರ ತಿರದ ವನ್ಯ ಪ್ರದೇಶ ನಾಶವಾಗುತ್ತಿರುವುದರಿಂದ ಸಾಫಿಶ್ ಸಮುದ್ರ ಜೀವಿಗಳಲ್ಲಿ ಅಳಿದು ಹೋಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
Advertisement