ಕಾಣಿಕೆ ಎಣಿಕೆಗೆ ರೋಬೋಟ್ ಗಳನ್ನು ನೇಮಿಸಲು ಶಬರಿಮಲೈ ದೇವಾಲಯ ಚಿಂತನೆ

ಶಬರಿಮಲೈ ದೇವಸ್ಥಾನದಲ್ಲಿ ಕಾಣಿಕೆಯ ಹಣ ಎಣಿಸಲು ಮತ್ತು ಪ್ರಸಾದ ತಯಾರಿಸಲು ರೋಬೋಟ್ ಗಳನ್ನು ಪ್ರತಿಷ್ಟಾಪನೆ ಮಾಡಲು ದೇವಾಲಯದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಮ್: ಶಬರಿಮಲೈ ದೇವಸ್ಥಾನದಲ್ಲಿ ಕಾಣಿಕೆಯ ಹಣ ಎಣಿಸಲು ಮತ್ತು ಪ್ರಸಾದ ತಯಾರಿಸಲು ರೋಬೋಟ್ ಗಳನ್ನು ಪ್ರತಿಷ್ಟಾಪನೆ ಮಾಡಲು ದೇವಾಲಯದ ಆಡಳಿತ ಮಂಡಲಿ ಚಿಂತನೆ ನಡೆಸಿದೆ.

ದೇವಾಲಯದ ಈ ಕೆಲಸವನ್ನು ಸುಲಭಗೊಳಿಸಲು ಬೆಂಗಳೂರು ಮೂಲದ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿರುವುದಾಗಿ ಆಡಳಿತ ಮಂಡಳಿಯ ಮಹಾ ನಿರ್ದೇಶಕ ಸಿ ಪಿ ರಾಮ ರಾಜ ಪ್ರೇಮ ಪ್ರಸಾದ್ ತಿಳಿಸಿದ್ದಾರೆ.

"ಬಹಳ ಜನ ಬರುವ ಕಾಲದಲ್ಲಿ, ನೋಟುಗಳು ಮತ್ತು ನಾಣ್ಯಗಳನ್ನು ಬೇರ್ಪಡಿಸಿ ಎಣಿಸಲು ಹೆಚ್ಚು ಜನರನ್ನು ನೇಮಿಸಿ ನಂತರ ಚೀಲಗಳಲ್ಲಿ ತುಂಬಿ ಬ್ಯಾಂಕಿಗೆ ಕಳುಹಿಸಲಾಗುತ್ತಿದೆ" ಎಂದು ಪ್ರಸಾದ್ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಣಿಗೆ ಸಂಗ್ರಹ ಹೆಚ್ಚಾಗಿರುವುದನ್ನು ಆಡಳಿತ ಮಂಡಲಿ ತಿಳಿಸಿದೆ.

"ಮತ್ತೊಂದು ಕೆಲಸ ಪ್ರಸಾದ ಉನ್ನಿಅಪ್ಪಂ ತಯಾರಿಕೆ. ನಾವು ಕೇರಳ ಹೈಕೋರ್ಟ್ ನಿಂದ ಅನುಮತಿಗೆ ಕಾಯುತ್ತಿದ್ದು ಇದು ಸಿಕ್ಕ ನಂತರ ಟೆಂಡರ್ ಕರೆಯಲಿದ್ದೇವೆ" ಎಂದು ಪ್ರಸಾದ್ ತಿಳಿಸಿದ್ದಾರೆ.  

ಪ್ರಸಾದ ಮಾರಾಟ ಮತ್ತು ಕಾಣಿಕೆ ಸಂಗ್ರಹದಿಂದ ಕಳೆದ ದೇವಸ್ಥಾನ ತೆರೆದ ಅವಧಿಯಲ್ಲಿ ೩೦೦ ಕೋಟಿ ಸಂಗ್ರಹವಾಗಿದೆ ಎಂದು ಆಡಳಿತ ಮಂಡಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com