ಭೂಕಂಪದ ಮಾದರಿಯಲ್ಲೇ ಚಂದ್ರನಲ್ಲೂ ಕಂಪನ!

ಚಂದ್ರನಲ್ಲಿ ಭೂಮಿಯ ಮೇಲೆ ಸಂಭವಿಸುವ ಕಂಪದನದಂತೆ ಚಂದ್ರನಲ್ಲೂ ಕಂಪನ ಸಂಭವಿಸುತ್ತದೆಯಂತೆ.
ಚಂದ್ರ(ಸಾಂದರ್ಭಿಕ ಚಿತ್ರ )
ಚಂದ್ರ(ಸಾಂದರ್ಭಿಕ ಚಿತ್ರ )

ನವದೆಹಲಿ: ಚಂದ್ರನ ಮೇಲಿರುವ ಟೆಕ್ಟೋನಿಕ್ ಪದರಗಳ ಚಲನೆಯಿಂದ ಭೂಮಿಯ ಮೇಲೆ ಸಂಭವಿಸುವ ಕಂಪದನದಂತೆ ಚಂದ್ರನಲ್ಲೂ ಕಂಪನ ಸಂಭವಿಸುತ್ತದೆಯಂತೆ.

ಜವಾಹರ್ ಲಾಲ್  ನೆಹರು ವಿಶ್ವವಿದ್ಯಾನಿಲಯದ, ಭೂಗರ್ಭ ಮತ್ತು ದೂರಸಂವೇದಿ ವಿಭಾಗದ ಪ್ರಾಧ್ಯಾಪಕ ಸುಮಿತ್ರ ಮುಖರ್ಜಿ ಹಾಗೂ ಅವರ ವಿದ್ಯಾರ್ಥಿ ಪ್ರಿಯದರ್ಶಿನಿ ಸಿಂಗ್ ನಡೆಸಿರುವ ವಿಶ್ಲೇಷಣೆ ಪ್ರಕಾರ ಚಂದ್ರನ ಮೇಲೆ ಟೆಕ್ಟೋನಿಕ್ ಪದರಗಳ ಉಪಸ್ಥಿತಿ ಇದೆ. ಚಂದ್ರಯಾನ -1 ರ ಶೋಧನಾ ಉಪಗ್ರಹದ ಕ್ಯಾಮೆರಾ ಸಹಾಯದಿಂದ ಇದನ್ನು ಕಂಡುಕೊಳ್ಳಲು ಸಾಧ್ಯವಾಗಿದ್ದು ಭೂಮಿಯಂತೆಯೇ ಚಂದ್ರನ ಧ್ರುವ ಪ್ರದೇಶದಲ್ಲಿ ರಾಚನಿಕ ವ್ಯತ್ಯಾಸ ಚಟುವಟಿಕೆಗಳು ನಡೆಯುತ್ತಿರುವ ಅಂಶವನ್ನು ಬಹಿರಂಗಗೊಳಿಸಿದೆ ಎಂದು ಪ್ರೊ. ಮುಖರ್ಜಿ ತಿಳಿಸಿದ್ದಾರೆ.

ಚಂದ್ರನಲ್ಲಿ ರಾಚನಿಕ ವ್ಯತ್ಯಾಸಗಳ ಪದರಗಳ ಚಲನೆ ಚಂದ್ರನ ಮೇಲ್ಮೈ ಅಡಿಯಲ್ಲಿಯೂ ದ್ರವರೂಪದ ವಸ್ತು ಇರುವುದನ್ನು ಸೂಚಿಸುತ್ತದೆ ಎಂದು ಮುಖರ್ಜಿ ಹೇಳಿದ್ದಾರೆ. ಚಂದ್ರನ ರಚನೆ ಭೂಮಿಯ ಮಾದರಿಯಲ್ಲೇ ಇರಬಹುದಾದ ಸಾಧ್ಯತೆಗಳಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೇ ಅಂಶವನ್ನು ಆಧಾರವಾಗಿಟ್ಟುಕೊಂಡು ಭೂಕಂಪ ಹಾಗೂ ಚಂದ್ರನಲ್ಲಿ ಸಂಭವಿಸುವ ಕಂಪನದ ಬಗ್ಗೆ ಅಧ್ಯಯನ ನಡೆಸಬಹುದಾಗಿದೆ.

ಪ್ರಸ್ತುತ ಭೂಕಂಪದ ಮುನ್ಸೂಚನೆ ಪಡೆಯಲು ಸಾಧ್ಯವಿಲ್ಲ. ಆದರೆ ಟೆಕ್ಟೋನಿಕ್ ಪದರಗಳ ಚಲನೆ ಹಾಗೂ ಚಂದ್ರನನಲ್ಲಿ ನಡೆಯುವ ಕಂಪನದ ಅಧ್ಯಯನ ಮಾಡಿ ಅದನ್ನು ಭೂಕಂಪನದೊಂದಿಗೆ ಹೋಲಿಕೆ ಮಾಡಿದರೆ ಸಂಭವನೀಯ ಕಂಪನಗಳ ಬಗ್ಗೆ ಮುನ್ಸೂಚನೆ ಪಡೆಯಲು ಸಹಕಾರಿಯಾಗಬಹುದು ಎಂದು ಮುಖರ್ಜಿ ಹೇಳಿದ್ದಾರೆ. 

ಚಂದ್ರನ ಮೇಲೆ ಟೆಕ್ಟೋನಿಕ್ ಪದರಗಳ ಚಲನೆಯನ್ನು ಅಧ್ಯಯನ ಮಾಡಲು ಅಹಮದಾಬಾದ್ ಬಾಹ್ಯಾಕಾಶ ಅನ್ವಯಿಕ ಕೇಂದ್ರ ಸಹಾಯ ಮಾಡಿದೆ.  ನೇಚರ್ ಇಂಡಿಯಾ, ಪ್ರಂಟಿಯರ್ಸ್ ಇನ್ ಅರ್ತ್ ಸೈನ್ಸ್ ನಂತಹ ಪತ್ರಿಕೆಗಳಲ್ಲಿ ಈ ಅಧ್ಯಯನದ ಕುರಿತ ವಿಶ್ಲೇಷಣೆ ಪ್ರಕಟವಾಗಿದೆ. ಭಾರತೀಯ ವಿಜ್ಞಾನಿಗಳೇ ಈ ಮಾಹಿತಿಗಳ ವಿಶ್ಲೇಷಣೆ ಮಾಡಿರುವುದರಿಂದ ಇದು ನಿಜವಾದ ಮೇಕ್ ಇನ್ ಇಂಡಿಯಾ ಎಂದು ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com