ಜೀಮೇಲ್‍ನಲ್ಲಿ ಅನ್ ಡು ಸೆಂಡ್ ಆಯ್ಕೆ

ಗಡಿಬಿಡಿಯಲ್ಲಿ ಮೇಲ್ ಕಳಿಸಿ... ``ಛೇ ಏನೋ ತಪ್ಪಾಗಿತ್ತು... ಹಾಗೆಯೇ ಕಳಿಸಿಬಿಟ್ಟೆನಲ್ಲಾ'' ಎಂದು ಕೈಕೈ ಹಿಸುಕಿಕೊಳ್ಳುವ ಪ್ರಮೇಯ ಇನ್ನಿಲ್ಲ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಗಡಿಬಿಡಿಯಲ್ಲಿ ಮೇಲ್ ಕಳಿಸಿ... ``ಛೇ ಏನೋ ತಪ್ಪಾಗಿತ್ತು... ಹಾಗೆಯೇ ಕಳಿಸಿಬಿಟ್ಟೆನಲ್ಲಾ'' ಎಂದು ಕೈಕೈ ಹಿಸುಕಿಕೊಳ್ಳುವ ಪ್ರಮೇಯ ಇನ್ನಿಲ್ಲ. ನಿಮ್ಮ ತಪ್ಪು ಸರಿಪಡಿಸಿಕೊಳ್ಳಲು ಜಿಮೇಲ್ ಒಂದು ಅವಕಾಶ ನೀಡುತ್ತಿದೆ. ಗಮನಿಸಿ. ಅದು 10 ಸೆಕೆಂಡ್‍ಗಳ ಅವಕಾಶವಷ್ಟೆ!

ಜೀಮೇಲ್ ``ಅನ್‍ಡು ಸೆಂಡ್'' ಆಯ್ಕೆಯನ್ನು ಹೊರತಂದಿದೆ. ಈ ಆಯ್ಕೆ ಲಭ್ಯವಿರುವುದು
ಸದ್ಯಕ್ಕೆ ಜೀಮೇಲ್‍ನಲ್ಲಿ ಮಾತ್ರ. ಸುಮಾರು 6 ವರ್ಷಗಳಿಂದ ಈ ಸೌಲಭ್ಯ ನೀಡಲು
ಗೂಗಲ್ ಟೆಕ್ಕಿಗಳು ಲ್ಯಾಬ್‍ನಲ್ಲಿ ಕೂತು ಟೆಸ್ಟಿಂಗ್ ಮಾಡಿದ್ದು ಈಗ ಫಲ ನೀಡಿದೆ. ಜೀಮೇಲ್‍ನಲ್ಲಿ ಈಗ ನೀವು ಮೆಯï್ಲ ಕಳಿಸಿ 10 ಸೆಕೆಂಡುಗಳೊಳಗಾಗಿ ಅನ್‍ಡು ಸೆಂಡ್ ಆಯ್ಕೆ ಕ್ಲಿಕ್ ಮಾಡುವ ಮೂಲಕ ಮೇಲ್ ಹೊರಹೋಗದಂತೆ ತಡೆಹಿಡಿಯಬಹುದು.

ಜೀಮೇಲ್ ಸೆಟ್ಟಿಂಗ್ ಮೆನು ಅಡಿಯಲ್ಲಿರುವ ಜನರಲ್ ಎಂಬ ವಿಭಾಗದಲ್ಲಿ ಅನ್‍ಡು
ಸೆಂಡ್ ಆಯ್ಕೆ ಇರುತ್ತದೆ. ಅದನ್ನು ಚಾಲಿತ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದರಿಂದ, ಸೆಂಡ್
ಮಾಡಿದ ಮೇಲ್ ಅನ್ನು ಹತ್ತು ಸೆಕೆಂಡುಗಳೊಳಗಾಗಿ ತಡೆ ಹಿಡಿದು, ತಪ್ಪುಗಳನ್ನು
ಸರಿಪಡಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com