ಕರೆ ವೇಳೆಯಲ್ಲಿ ಐಫೋನ್-೬ ಸ್ಫೋಟ; ಎಫ್ ಐ ಆರ್ ದಾಖಲು

ತಾವು ಕರೆನಿರತರಾಗಿರುವಾಗ ತಮ್ಮ ಎರಡು ದಿನದ ನೂತನ ಐಫೋನ್-೬ ಸ್ಫೋಟಗೊಂಡಿದೆ ಎಂದು ಗುರಗಾಂವ್ ಮೂಲದ ಐಫೋನ್ ಬಳಕೆದಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಾವು ಕರೆನಿರತರಾಗಿರುವಾಗ ತಮ್ಮ ಎರಡು ದಿನದ ನೂತನ ಐಫೋನ್-೬ ಸ್ಫೋಟಗೊಂಡಿದೆ ಎಂದು ಗುರಗಾಂವ್ ಮೂಲದ ಐಫೋನ್ ಬಳಕೆದಾರ ದೂರಿದ್ದಾನೆ.

ವರದಿಗಳ ಪ್ರಕಾರ, ಐಫೋನ್ ಮಾಲೀಕ ಕೃಷ್ಣ ಯಾದವ್ ಅವರು ಇಯರ್ ಫೋನ್ ಬಳಸಿ ತನ್ನ ಗೆಳೆಯನ ಜೊತೆ ಮಾತನಾಡುವಾಗ ಫೋನಿನಲ್ಲಿ ಕಿಡಿ ಕಂಡಿದ್ದಾರೆ. ಫೋನು ವಿಪರೀತ ಬಿಸಿಯಾದಾಗ ಕಾರಿನ ಕಿಟಕಿಯಿಂದ ಹೊರಗೆಸೆದಿದ್ದಾರೆ ಆಗ ಅದು ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆ ಜೂನ್ ೨೦ ರಂದೇ ಘಟಿಸಿದ್ದರೂ ಎಫ್ ಐ ಆರ್ ಮಂಗಳವಾರವಷ್ಟೇ ದಾಖಲಿಸಿದ್ದಾರೆ. ಮೊದಲಿಗೆ ತಾವು ಫೋನು ಕೊಂಡ ಅಂಗಡಿಗೆ ಹೋಗಿ ತೋರಿಸಿದ್ದಾರೆ ಆದರೆ ಅವರು ಅಲ್ಲಿಂದ ಆಪಲ್ ಸಂಸ್ಥೆಯ ರಿಪೇರಿ ಘಟಕಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಯಾದವ್ ಹೇಳುವ ಪ್ರಕಾರ ಆಪಲ್ ಸಂಸ್ಥೆಯ ಸಿಬ್ಬಂದಿಗಳು ಫೋನನ್ನು ಅವರಿಗೆ ನೀಡುವಂತೆ ಸೂಚಿಸಿದ್ದಾರೆ.

ಅಕ್ಟೋಬರ್ ೨೦೧೫ರಲ್ಲಿ ಐಫೋನ್-೬ ಅನಾವರಣಗೊಂಡಿತ್ತು. ಇದಾದ ನಂತರ ಸ್ಫೋಟಗೊಂಡ ಘಟನೆ ದಾಖಲಾಗಿರುವುದು ಇದೇ ಮೊದಲು. ಈ ಹಿಂದೆ ಫೆಬ್ರವರಿ ೨೦೧೫ರಲ್ಲಿ ನ್ಯೂಯಾರ್ಕ್ ನ ಲಾಂಗ್ ಐಲ್ಯಾಂಡಿನಲ್ಲಿ ಐಫೋನ್ ೫ ಸಿ, ಜಾನ್ಸನ್ ಎಂಬುವವರ ಜೇಬಿನಲ್ಲೇ ಸ್ಫೋಟಗೊಂಡು ಅವರು ಮೂರನೇ ದರ್ಜೆಯ ಸುಟ್ಟ ಗಾಯಗಳಿಗೆ ಒಳಗಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com