ಮತ್ತೆ ಐಸ್ ಯುಗಕ್ಕೆ ಸಾಧ್ಯತೆ?

ಸೂರ್ಯನಿಂದ ಸಿಗುವ ಉಷ್ಣತೆ ಕಡಿಮೆಯಾದರೆ ಶೀಘ್ರದಲ್ಲೇ ಭೂಮಿ ತಂಪಾಗಿ ಮಂಜುಗಡ್ಡೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ...
ಐಸ್ ಯುಗ
ಐಸ್ ಯುಗ

ಲಂಡನ್ : ಸೂರ್ಯನಿಂದ ಸಿಗುವ ಉಷ್ಣತೆ  ಕಡಿಮೆಯಾದರೆ ಶೀಘ್ರದಲ್ಲೇ ಭೂಮಿ ತಂಪಾಗಿ ಮಂಜುಗಡ್ಡೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಸೂರ್ಯನಿಂದ ಲಭಿಸುವ  ಬೆಳಕು ಹಾಗೂ ಶಾಖದ ಪ್ರಮಾಣ ಕಡಿಮೆಯಾದರೆ ಭೂಮಿಯ ಉಷ್ಣತೆ 0.1 ಡಿಗ್ರಿ ಸೆಲ್ಶಿಯಸ್ ನಷ್ಟವಾಗುವುದು ಎಂದು ನೇಚರ್ ಕಮ್ಯೂನಿಕೇಷನ್ ಅಧ್ಯಯನ ವರದಿಗಳು ಹೇಳಿವೆ.

ಹೀಗೆ ಆದಲ್ಲಿ, ಉಭಯ ಧ್ರುವಗಳ ಬಳಿ ಇರುವ ಪ್ರದೇಶಗಳಲ್ಲಿ ಚಳಿ ತೀವ್ರವಾಗಲಿದೆ. ದಕ್ಷಿಣ ಯುರೋಪ್ ರಾಷ್ಟ್ರಗಳಲ್ಲಿ ಹಾಗೂ ದಕ್ಷಿಣ ಅಮೆರಿಕದಲ್ಲಿ ತಾಪಮಾನ 0.8 ಡಿಗ್ರಿ ವರೆಗೆ ಇಳಿಯುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆ ನೀಡಲಾಗಿದೆ.

ಕಳೆದ ಕೆಲವು ವರುಷಗಳಿಂದ ಸೋಲಾರ್ ವ್ಯವಸ್ಥೆಯಲ್ಲಿ ವ್ಯತ್ಯಾಸಗಳು ಕಂಡು ಬಂದಿದ್ದು, ಇದು ಭೂಮಿ ಮೇಲೆ ಪ್ರಭಾವ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ. ಅದೇ ವೇಳೆ ಅಂತರಿಕ್ಷದಲ್ಲಿನ ತಾಪಮಾನವು ಶತಮಾನದ ಅರ್ಧಕ್ಕೆ  ತಲುಪುವ ಹೊತ್ತಲ್ಲಿ ಇನ್ನಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಭೂಮಿಯಿಂದ ಸೂರ್ಯ ಸಂಪೂರ್ಣವಾಗಿ ಅಪ್ರತ್ಯಕ್ಷವಾಗುವ maunder minimum  ಕಾಲ ಬರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತೆಯೂ ಇಲ್ಲ.  ಸೂರ್ಯನ ಅಭಾವದಿಂದ ಅಕ್ಷಾಂಕ್ಷ ರೇಖೆಯಲ್ಲಿರುವ ಓಜೋನ್ ನ ಸ್ಥಿತಿಯಲ್ಲಿಯೂ ಬದಲಾವಣೆಗಳಾಗುತ್ತದೆ.  ಇದು  ಭೂಮಿ ಮೇಲೆ ಹೆಚ್ಚಿನಪ್ರಭಾವ ಬೀಳಲಿದೆ ಎಂದು ಬ್ರಿಟನ್ ನ Met ಆಫೀಸ್ ರಿಸರ್ಚ್ ನ ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com