ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಒಂದೇ ಚಾರ್ಜಿಗೆ ಒಂದು ವಾರ ಉಳಿಯುವ ಫೋನ್ ಬ್ಯಾಟರಿ ಅಭಿವೃದ್ಧಿಗೆ ಸ್ಯಾಮ್ಸಂಗ್ ಯೋಜನೆ

ನಿಮ್ಮ ಸ್ಮಾರ್ಟ್ ಫೋನಿನ ಚಾರ್ಜ್ ಸರ್ರೆಂದು ಇಳಿದು ಹೋಗುತ್ತಿದೆಯೇ? ಹಾಗಿದ್ದಲ್ಲಿ ಈ ಸುದ್ದಿ ನಿಮ್ಮ ಮುಖದ ಮೇಲೆ ಮಂದಹಾಸ ಮೂಡಿಸಬಲ್ಲುದು.

ಲಂಡನ್: ನಿಮ್ಮ ಸ್ಮಾರ್ಟ್ ಫೋನಿನ ಚಾರ್ಜ್ ಸರ್ರೆಂದು ಇಳಿದು ಹೋಗುತ್ತಿದೆಯೇ? ಹಾಗಿದ್ದಲ್ಲಿ ಈ ಸುದ್ದಿ ನಿಮ್ಮ ಮುಖದ ಮೇಲೆ ಮಂದಹಾಸ ಮೂಡಿಸಬಲ್ಲುದು. ಸ್ಮಾರ್ಟ್ ಫೋನ್ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ಸಂಗ್ ಸಂಸ್ಥೆ ಒಂದು ಬಾರಿ ಚಾರ್ಜ್ ಮಾಡಿದರೆ ಒಂದು ವಾರ ಉಳಿಯಬಲ್ಲ ತಂತ್ರಜ್ಞಾನ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿದೆ.

ಬ್ಯುಸಿನೆಸ್ ಕೊರಿಯಾ ಪತ್ರಿಕೆಯ ಪ್ರಕಾರ ಸ್ಯಾಮ್ಸಂಗ್ ನ ಮುಂದಿನ ಪೀಳಿಗೆಯ ಬ್ಯಾಟರಿಗಳಿಗೆ ಗ್ರಾಫೀನ್ ಲೇಪನದ ಸಿಲಿಕಾನ್ ವಸ್ತುವನ್ನು ಉಪಯೋಗಿಸುತ್ತಿದ್ದು ಈಗಿನ ಗ್ರಾಫೈಟ್ ಕ್ಯಾಥೋಡ್ ಪವರ್ ಸೆಲ್ ಗಳಿಗಿಂತಲೂ ಹೆಚ್ಚಿನ ಸಮಯ ಪವರ್ ಹಿಡಿದಿಟ್ಟಿರುತ್ತಂತೆ.

ಆದರೆ ಆ ತಂತ್ರಜ್ಞಾನ ಅಭಿವೃದ್ಧಿಗೆ ಇನ್ನು ಎರಡು ವರ್ಷ ಹಿಡಿಯಲಿದ್ದು ಅಲ್ಲಿಯವರೆಗೂ, ಬಳಕೆದಾರರ ವ್ಯಾಕುಲತೆಗೆ ಸುಲಭ ಪರಿಹಾರವೇನಿಲ್ಲ.

ಸದ್ಯದ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಸಂಸ್ಥೆಯ ಎಸ್ ೬ ಮತ್ತು ಎಸ್ ೬ ಎಡ್ಜ್ ಫೋನುಗಳ ಬ್ಯಾಟರಿ ಒಳ್ಳೆಯ ಪ್ರದರ್ಶನ ನೀಡುತ್ತಿವೆ ಎನ್ನಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com