ನಾಲ್ಕು ತಾರಾಮಂಡಲ ಮಧ್ಯದಲ್ಲಿ ಬೃಹತ್ ಗ್ರಹ ಪತ್ತೆ

ಭೂಮಿಯಿಂದ 136 ಜ್ಯೋತಿರ್ವರ್ಷಗಳಷ್ಟು ದೂರದ ನಾಲ್ಕು ತಾರಾ ಮಂಡಲದ ಮಧ್ಯದಲ್ಲಿ ‘30 ಎರಿ’ ಎಂಬ ಬೃಹತ್‌ ಗ್ರಹ ಪತ್ತೆಯಾಗಿದೆ...
ನಾಲ್ಕು ತಾರಾಮಂಡಲ ಮಧ್ಯದಲ್ಲಿ ಬೃಹತ್ ಗ್ರಹ ಪತ್ತೆ

ವಾಷಿಂಗ್ಟನ್‌: ಭೂಮಿಯಿಂದ 136 ಜ್ಯೋತಿರ್ವರ್ಷಗಳಷ್ಟು ದೂರದ ನಾಲ್ಕು ತಾರಾ ಮಂಡಲದ ಮಧ್ಯದಲ್ಲಿ ‘30 ಎರಿ’ ಎಂಬ ಬೃಹತ್‌ ಗ್ರಹ ಪತ್ತೆಯಾಗಿದೆ.

ನಾಲ್ಕು ತಾರಾಮಂಡಲ ವ್ಯೂಹದಲ್ಲಿ ಪರಿಭ್ರಮಿಸುತ್ತಿರುವ  ‘30 ಎರಿ’ ಎಂಬ ಬೃಹತ್‌ ಗ್ರಹವನ್ನು ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

4 ತಾರ­ ವ್ಯೂಹ­ವ­ನ್ನೊ­ಳ­ಗೊಂಡ ಗ್ರಹ ಪತ್ತೆ­ಯಾಗಿರುವ ಎರಡನೇ ಪ್ರಕರಣ ಇದಾಗಿದೆ. ಭಾರತದ ವಿಜ್ಞಾನಿಗಳು ಅಭಿವೃದ್ಧಿ­ಪಡಿ­ಸಿದ ದೂರದರ್ಶಕ ಉಪಯೋಗಿಸಿ ಖಗೋಳ ವಿಜ್ಞಾನಿಗಳು ಈ ಗ್ರಹವನ್ನು ಪತ್ತೆಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಯಾಂಡಿಯಾಗೊದ ಪಾಲೋಮರ್‌ ವೀಕ್ಷಣಾಲಯದಲ್ಲಿ ಈ ಅಧ್ಯಯನ ನಡೆ­ಸ­ಲಾಗಿದ್ದು, ಇದಕ್ಕಾಗಿ ಪುಣೆ ಹಾಗೂ ಕ್ಯಾಲಿಫೋರ್ನಿಯಾದ ಖಗೋಳ ವಿಜ್ಞಾನ ವಿಶ್ವವಿದ್ಯಾಲಯದ ದೃಗ್‌ ವಿಜ್ಞಾನ ಉಪಕ­ರಣ ಮತ್ತು ನಾಸಾದ ‘ಪಾಲ್ಮ್‌ 3000’ ಉಪಕರಣಗಳನ್ನು ಬಳಸಿಕೊಳ್ಳಲಾಗಿದೆ.

ಈ ಗ್ರಹ ಇರುವುದು ಮುಂಚೆಯೇ ಗೊತ್ತಿತ್ತು. ಆದರೆ ಅದು ಮೂರು ತಾರೆಗಳ ವ್ಯೂಹದಲ್ಲಿಸುತ್ತುತ್ತಿದೆ ಎಂದು ಇದುವರೆಗೆ ಭಾವಿಸಲಾಗಿತ್ತು. ಇದೀಗ ಈ ಗ್ರಹ ನಾಲ್ಕು ತಾರೆಗಳ ವ್ಯೂಹದಲ್ಲಿ ಬಂಧಿಯಾಗಿರುವುದು ದೃಢಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com