
ಈಗ ನಗುತ್ತಿರುವ ಮಗು ಇನ್ನೊಂದು ಕ್ಷಣದಲ್ಲಿ ಅಳಬಹುದು. ಆದರೆ ಮಗು ಏಕೆ ಅಳುತ್ತದೆ ಎಂಬುದನ್ನು ಅರಿಯುವುದು ಮಾತ್ರ ಸಾಹಸದ ಕೆಲಸವೇ ಸರಿ. ಆದರೆ ತಂದೆತಾಯಿಯ ಈ ಪಡಿಪಾಟಲಿಗೆ ಇಲ್ಲೊಂದು ಪರಿಹಾರವಿದೆ.
ವೈ ಕ್ರೈ ಅನಲೈಸರ್ ಗ್ಯಾಜೆಟ್ ತಂದಿಟ್ಟುಕೊಂಡರೆ ಸಾಕು, ನಿಮ್ಮ ಮಗು ಅಳುತ್ತಿದೆಯೋ, ಹಸಿವಾಗುತ್ತಿದೆಯೋ, ಸುಸ್ತಾಗಿದೆಯೋ, ಸಿಟ್ಟು ಬಂದಿದೆಯೋ ಅಥವಾ ಟಿವಿ ನೋಡಿ ಕಿರಿಕಿರಿಯಾಗಿದೆಯೋ ಎಲ್ಲವನ್ನೂ ಹೇಳುತ್ತದೆ.
ಜತೆಗೆ ಕೋಣೆಯ ತಾಪಮಾನ ಹಾಗೂ ಸಾಂಧ್ರತೆಯ ಮಾಹಿತಿಯನ್ನೂ ನೀಡುತ್ತದೆ. ಚಿಕ್ಕದಾಗಿ ಭಾರವಿಲ್ಲದೆ ಇರುವುದರಿಂದ ಎಲ್ಲಿಗೆ ಬೇಕಾದರೂ ಒಯ್ಯಬಹುದು. ಇದರಲ್ಲಿ 4ಎಎ ಬ್ಯಾಟಿರಿಯನ್ನು ಉಪಯೋಗಿಸಲಾಗುತ್ತದೆ.
Advertisement