ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಇನ್ನು ಪಾಸ್‌ವರ್ಡ್ ಮುಕ್ತ

ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಬಯೋವುಟ್ರಿಕ್ ಸೈನ್ ಇನ್ ಆಪ್ಶನ್ ತರುವ ಮೂಲಕ ಪ್ರಸ್ತುತ ...
ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ
ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ
Updated on

ಸೀಟೆಲ್: ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಬಯೋವುಟ್ರಿಕ್ ಸೈನ್ ಇನ್ ಆಪ್ಶನ್ ತರುವ ಮೂಲಕ ಪ್ರಸ್ತುತ ಆಪರೇಟಿಂಗ್ ಸಿಸ್ಟಂನ್ನು ಪಾಸ್‌ವರ್ಡ್ ಮುಕ್ತಗೊಳಿಸಲು ಮೈಕ್ರೋಸಾಫ್ಟ್ ಸಂಸ್ಥೆ ತೀರ್ಮಾನಿಸಿದೆ. ಈ ಸೌಲಭ್ಯ 2015ರ ನಂತರ ಲಭ್ಯವಾಗಲಿದೆ.

ವಿಂಡೋಸ್ 10ನ ಈ ವೈಶಿಷ್ಟ್ಯಕ್ಕೆ ವಿಂಡೋಸ್ ಹೆಲೋ ಎಂದು ಹೆಸರಿಡಲಾಗಿದ್ದು, ಲಾಗಿನ್ ಆಗಬೇಕಾದರೆ ಬಳಕೆದಾರರು ಅವರ ಮುಖ, ಕಣ್ಣಿನ ಪಾಪೆ ಅಥವಾ ಬೆರಳಚ್ಚು ನಮೂದಿಸುವ ಮೂಲಕ ವಿಂಡೋಸ್ ಫೋನ್, ಲ್ಯಾಪ್‌ಟಾಪ್ ಅಥವಾ ಪರ್ಸನಲ್ ಕಂಪ್ಯೂಟರ್‌ಗೆ ಲಾಗಿನ್ ಆಗಬಹುದಾಗಿದೆ.

ಈ ವೈಶಿಷ್ಟ್ಯದ ಬಗ್ಗೆ ಮೈಕ್ರೋಸಾಫ್ಟ್ ಗುರುವಾರ ಘೋಷಣೆ ಮಾಡಿದ್ದು, ಬಳಕೆದಾರರ ಬಯೋವುಟ್ರಿಕ್ ಡಾಟಾ ಡಿವೈಸ್‌ಗಳ ಲೋಕಲ್ ಡ್ರೈವ್‌ಗಳಲ್ಲಿ ಸೇವ್ ಆಗಲಿದ್ದು, ಹ್ಯಾಕರ್‌ಗಳಿಂದ ರಕ್ಷಣೆ ಒದಗಿಸುತ್ತದೆ.

ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಹೊಂದಿರುವ ಡಿವೈಸ್‌ಗಳಲ್ಲಿ ಮಾತ್ರ ಈ ವೈಶಿಷ್ಟ್ಯ ಕಾರ್ಯ ನಿರ್ವಹಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com